ಗಾಂದಿಜಿ ಚಿತಾಭಸ್ಮ ಸ್ಮಾರಕ ಕೂಡ್ಲಿಗಿಯ ಹೆಮ್ಮೆಯ ಪ್ರತೀಕ….
ಜಯನಗರ ಜಿಲ್ಲೆಯ ಕರ್ನಾಟಕದ ಎರಡನೆಯ ಅತೀದೊಡ್ಡ ತಾಲ್ಲೂಕು ಕೂಡ್ಲಿಗಿ,ಮಹಾತ್ಮ ಗಾಂದಿ ರಾಷ್ಟ್ರೀಯ ಹುತಾತ್ಮ ಸ್ಮಾರಕವನ್ನು ಹೊಂದಿದೆ. ಹುಣುಸೆ ನಾಡು,ರಂಗಕಲಾವಿದರ ಬೀಡು ಹಾಗೂ ಕರಡಿದಾಮ ವಿದ್ದು ಪ್ರವಾಸಿತಾಣವಾಗಿದೆ. ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ವೈಫಲ್ಯ ಹೊಂದಿದೆ ಎನ್ನುತ್ತಾರೆ ಕೆಲ ವಿಮರ್ಶಕರು.
ಕೂಡ್ಲಿಗಿ ಮತ್ತು ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ- ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರು ಅಜರಾಮರ. ವಿಶ್ವವೇ ಗಾಂದಿಯವರನ್ನು ‘ಪೂಜ್ಯನೀಯ’ ಭಾವನೆಯಿಂದ ಗೌರವಿಸುತ್ತಿದೆ, ವಿಶ್ವದ ದಿಗ್ಗಜ ನಾಯಕರುಗಳು ಹಾಗೂ ವಿದ್ವಾಂಸರು ವಿವಿಧ ಸಂಪನ್ಮೂಲ ವ್ಯಕ್ತಿಗಳಾದ ಮಾರ್ಟಿನ್ ಲೂಥರ್ ಕಿಂಗ್, ಆಲ್ಬರ್ಟ್ ಐನ್‌ಸ್ಟೈನ್,ನೆಲ್ಸನ್ ಮಂಡೇಲಾ,ವಿಲ್ ಡ್ಯುರಾಂಟ್,ಅಟೆನ್‌ಬರೋ,ಹೋ ಚಿ ಮಿನ್,ಬರಾಕ್ ಒಬಾಮ,ಆಂಗ್ ಸಾನ್ ಸೂಕಿ,ದಲಾಯಿ ಲಾಮ ರವರು “ನಾವು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳು” ಎಂದು ತಮ್ಮನ್ನ ಹೆಮ್ಮೆಯಿಂದ ಗುರುತಿಸಿಕೊಂಡಿದ್ದಾರೆ.
ಗಾಂದಿ ದೇಶದ ಶಕ್ತಿ ತಮ್ಮ ಜೀವನದುದ್ದಕ್ಕೂ ಅಹಿಂಸಾತ್ಮಕ ಮಾರ್ಗದ ಮೂಲಕ ಸ್ವಾತಂತ್ರ್ಯ ಚಳುವಳಿ, ವರ್ಣಭೇದ ನೀತಿ ವಿರೋಧಿಸಿ ಉಪವಾಸ ಸತ್ಯಾಗ್ರಹದಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರಾಗಿದ್ದಾರೆ. ಇತಿಹಾಸದಲ್ಲಿ ಕೂಡ್ಲಿಗಿ ತಾಲೂಕನ್ನು ಮೌರ್ಯರು, ಶಾತವಾಹನರು,ಪಲ್ಲವರು,ಕದಂಬರು,ಚಾಲುಕ್ಯರು ಹಾಗೂ ವಿಜಯನಗರದ ಅರಸರು ಆಳ್ವಿಕೆ ನಡೆಸಿದ್ದಾರೆ.ಪಾಳೆಗಾರರು ಕೊಟ್ಟೆಕೊತ್ತಲಗಳನ್ನು ಕಟ್ಟಿ ಆಳ್ವಿಕೆ ಮಾಡಿದ್ದಾರೆ. ನಂತರದಲ್ಲಿ ಬ್ರಿಟೀಷರ ಪಾರುಪತ್ವಕ್ಕೆ ಭಾರತ ಈಡಾಗಿದ್ದು ಅನೇಕ ದಶಕಗಳನಂತರ,ದೇಶದಲ್ಲಿ ಜರುಗಿದ ನಿರಂತರ ಅಹಿಂಸಾತ್ಮಕ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರಕಿತು. ಇದರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ ಹಿರಿತನದ್ದು. ಸ್ವಾತಂತ್ರ್ಯ ಬಂದು ಕೆಲವೇ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದೆ ಬಿಟ್ಟರು.!, *ಗಾಂಧೀಜಿಯವರ ಚಿತಾಭಸ್ಮವನ್ನು ಬಳ್ಳಾರಿ ನಗರದ ಗಾಂಧಿ ಭವನದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಆವರಣದಲ್ಲಿ 24 ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
*ಕೂಡ್ಲಿಗಿ ತಾಲೂಕಿನ ಶಿಕ್ಷಕರಾದ ಬಿಂದು ಮಾಧವ್ ರಾಯ್ ಹಾಗೂ ಮಹಾತ್ಮ ಗಾಂಧೀಜಿಯವರ ಅಭಿಮಾನಿಗಳ ತಂಡ ಗಾಂಧೀಜಿಯವರ ಚಿತಾಭಸ್ಮ ತಂದು ಕೂಡ್ಲಿಗಿ ತಾಲೂಕಿನ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ದೆಹಲಿಯ ರಾಜ್ ಘಾಟ್ ನಂತೆಯೇ ಇರುವ ಬಾಪೂಜಿಯವರನ್ನು ನೆನಪಿಸುವ ಸ್ಮಾರಕವನ್ನು ಚಿತಾಭಸ್ಮವನ್ನು ಇಡುವ ಮೂಲಕ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ. 1950 ರೆ ದಶಕದಲ್ಲಿ ಸ್ಥಾಪಿಸಲಾದ ಈ ಚಿತಾಭಸ್ಮ ಸ್ಮಾರಕ ನಿರ್ಮಾಣ ಕಾರ್ಯವನ್ನು ಮಾಜಿ ಪ್ರಧಾನಿ P.V ನರಸಿಂಹರಾವ್ ಅವರ ಗುರುಗಳಾದ ರಮಾನಂದ ತೀರ್ಥರು ಉದ್ಘಾಟಿಸಿದರು
*ಮಹಾತ್ಮರ ಚಿತಾಭಸ್ಮ ನಮ್ಮ ಕೂಡ್ಲಿಗಿ ತಾಲ್ಲೂಕಿನಲ್ಲಿರುವುದು ಹೆಮ್ಮೆಯ ವಿಷಯವಾಗಿದೆ,
ನಮ್ಮ ಬಳ್ಳಾರಿ ಜಿಲ್ಲೆಗೂ ಸ್ವಾತಂತ್ರ್ಯ ಸಂಗ್ರಾಮಕ್ಕೂ ನಂಟಿದೆ. ಕೂಡ್ಲಿಗಿ ತಾಲೂಕಿನ ಚಿತಾಭಸ್ಮದ ಬಳಿ ‘ಚಿಂತನಾ ಚೇತನ’ ವೇದಿಕೆಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.
- ಬಳ್ಳಾರಿ ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರು 2 ಕಾರಣಗಳಿಂದಾಗಿ 1934 ರ ಮಾರ್ಚ್ 3 ರಂದು ಭೇಟಿ ನೀಡಿರುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ, 1- ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ರೂಪುರೇಷೆಗಳಿಗೆ ಆರ್ಥಿಕ ನೆರವು ಕೇಳಲು 2-ಸಂಡೂರು ತಾಲ್ಲೂಕಿನ ಬೆಟ್ಟ ಗುಡ್ಡಗಳಲ್ಲಿ ನೆಲೆಸಿರುವ ಕುಮಾರಸ್ವಾಮಿ ದೇವಾಲಯಕ್ಕೆ ದಲಿತ ಸಮುದಾಯದವರಿಗೆ ಪ್ರವೇಶಾತಿ ನೀಡಿದ್ದ ಅಂದಿನ ಮಹಾರಾಜರಿಗೆ ಅಭಿನಂದನೆ ಸಲ್ಲಿಸಲು. ಸಂಡೂರಿಗೆ ಭೇಟಿ ನೀಡಿದ ಮಹಾತ್ಮ ಗಾಂಧೀಜಿಯವರು ಅಲ್ಲಿ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತು ‘ಓಯಾಸಿಸ್’ ಎಂದು ಕರೆಯುವುದಲ್ಲದೆ,ಸೆಪ್ಟೆಂಬರ್ ತಿಂಗಳಲ್ಲಿ ಸಂಡೂರು ನೋಡಲು ಮಾನಸ ಸರೋವರದ ಬಳಿ ಬರುವ ರಸ್ತೆಯ ಇಕ್ಕೆಲದಲ್ಲಿನ ಕಲ್ಲುಬಂಡೆಯ ಮೇಲೆ ಬರೆಯಲಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಯಾವ ಪ್ರೇಕ್ಷಣೀಯ ಸ್ಥಳಗಳು ಇಲ್ಲದಿದ್ದರೂ ಮಹಾತ್ಮ ಗಾಂಧೀಜಿಯವರಂತಹ ಚಿತಾಭಸ್ಮ ಹುತಾತ್ಮರ ಸ್ಮಾರಕ ಇರುವುದು ನಮ್ಮ ತಾಲ್ಲೂಕಿನ ಪುಣ್ಯ ಈ ಚಿತಾಭಸ್ಮ ತಂದು ಹುತಾತ್ಮರ ಸ್ಮಾರಕ ನಿರ್ಮಿಸಲು ಶ್ರಮಿಸಿದ ಸರ್ವರಿಗೂ ದೀರ್ಘದಂಡ ನಮಸ್ಕಾರಗಳು. ಕೂಡ್ಲಿಗಿ ತಾಲೂಕಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪು ಹುತಾತ್ಮರ ಸ್ಮಾರಕದ ಮೂಲಕ ಅಚಂದ್ರಾರ್ಕಸ್ಥಾಯಿಯಾಗಿದೆ, ಸಂಡೂರು ತಾಲೂಕು ಕೂಡ್ಲಿಗಿ ಪಕ್ಕದ ತಾಲ್ಲೂಕಾಗಿದೆ ಅಲ್ಲದೇ 1921 ರ ಅಕ್ಟೋಬರ್ 1 ರಂದು ಧಾರವಾಡಕ್ಕೆ ಹೋಗಲು ಗಾಂಧೀಜಿಯವರು, ಬಳ್ಳಾರಿಗೆ ಬಂದಿದ್ದರು ಹಾಗೂ ಅಲ್ಲಿ ತೆಲುಗು ಹಾಗೂ ಕನ್ನಡ ಭಾಷಿಕ ಕಾಂಗ್ರೆಸ್ ಮುಖಂಡರು, ಗಾಂದಿಯವರಿಗೆ ಬರಬೇಕೆಂದು ದುಂಬಾಲು ಬಿದ್ದಾಗ ಎತ್ತ ಕಡೆ ಹೋಗದೆ 8 ಗಂಟೆಗಳ ಕಾಲ ಬಳ್ಳಾರಿ ರೈಲು ನಿಲ್ದಾಣದಲ್ಲಿಯೇ ಇದ್ದರಂತೆ. ಕರ್ನಾಟಕಕ್ಕೆ ಮಹಾತ್ಮ ಗಾಂಧೀಜಿಯವರು 18 ಬಾರಿ ಆಗಮಿಸಿದ್ದರೆಂಬುದು ಹೆಮ್ಮೆಯ ಸಂಗತಿಯಾಗಿದೆ, ಗಾಂದೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣಕ್ಕೆ ಬಂದಿದ್ದರಂತೆ. ಪಟ್ಟಣದ ಈಗಿನ ಹಳೇ ಆಸ್ಪತ್ರೆಯ ಸ್ಥಳದಲ್ಲಿ ಅವರು ಪ್ರಮುಖ ನಾಗರೀಕರೊಡಗೂಡಿ ಭಾಷಣಮಾಡಿದ್ದರಂತೆ, ಕೂಡ್ಲಿಗಿ ತಾಲೂಕು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿರುವುದಕ್ಕೆ ಸಾಕ್ಷಿ ಎನ್ನಬಹುದಾಗಿದೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428