ಈರುಳ್ಳಿ ಗೆ ಕೊಳೆ ರೋಗ ಪರಿಹಾರಕ್ಕೆ ಯುವ ರೈತ ಅಯ್ಯಪ್ಪ ತೋಳ ಒತ್ತಾಯ…
ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿ ವ್ಯಾಪ್ತಿ ಗೆ ಒಳಪಡುವ ಗ್ರಾಮಗಳಲ್ಲಿ ರೈತರು ಬೆಳೆದ ಈರುಳ್ಳಿ ಬೆಳೆಗೆ ಕೊಳೆಯ ರೋಗ ಬಂದಿದ್ದು ಸಂಪೂರ್ಣ ಬೆಳೆ ಕೊಳೆತು ಹಾಳಾಗಿದೆ. ಇದರಿಂದಾಗಿ ರೈತರಿಗೆ ತುಂಬಾ ನಷ್ಟ ಉಂಟಾಗಿದೆ ಈರುಳ್ಳಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದು ಯುವ ರೈತ ಅಯ್ಯಪ್ಪ ತೋಳ ಒತ್ತಾಯಿಸಿದ್ದಾರೆ.
ರೈತರು ಸಾಲ ಮಾಡಿ ಈರುಳ್ಳಿ ಬೆಳೆ ಬೆಳೆಯುತ್ತಿದ್ದು ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ 200 ರಿಂದ 250 ಕೂಲಿ ನೀಡಬೇಕಾಗಿದೆ ಈಗಾಗಲೇ ಬೆಳೆದ ಬೆಳೆಗೆ 2 ರಿಂದ 3 ಸಾಲ ಕ್ರಿಮಿನಾಶಕ ಸಿಂಪರಣೆ ಮಾಡಿದರು ರೋಗ ಹತೋಟಿಗೆ ಬರುತ್ತಿಲ್ಲ ಮತ್ತು ಈರುಳ್ಳಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಆದ್ದರಿಂದ ಸರ್ಕಾರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
ಈರುಳ್ಳಿ ಬೆಳೆದ ಬಡ ರೈತರ ಬಾಳನ್ನು ಅಕ್ಷರ ನರಕ ಸದೃಶ್ಯ ಮಾಡಿತ್ತು ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿ ಬೆಳೆದ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ಕೊಳೆತು ಹೋಗಿದೆ. ಸಾಲ ಮಾಡಿ ಬೆಳೆದ ಬೆಳೆ ಇಂದು ಕೈಗೆ ಸಿಗದೆ ಬಾಯಿಗೆ ಬಂದ ತುತ್ತು ಕೈಯಗೆ ಬರದಂತಾಗಿ ರೈತರು ಕಂಗಾಲಾಗಿದ್ದಾರೆ ಕೊಡಲೇ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಾಶ ಸಮೀಕ್ಷೆಯನ್ನು ಕೈಗೊಂಡು ರೈತರಿಗೆ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಯುವ ರೈತ ಅಯ್ಯಪ್ಪ ತೋಳ ಪತ್ರಿಕೆ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.
ವರದಿ – ಆನಂದ ಸಿಂಗ್ ಕವಿತಾಳ