ರಾಮದುರ್ಗ ಪಟ್ಟಣದ ಪುರಸಭೆಯವರಿಂದ ಧಿಡೀರಣೆ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ಸಾರ್ವಜನಿಕ ರಿಂದ ಭಾರಿ ಆಕ್ರೋಶ….
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಇಂದು ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಅಟೊ ರಿಕ್ಷಾದಲ್ಲಿ ಧ್ವನಿ ವರ್ಧಕವನ್ನು ಅಳವಡಸಿಕೊಂಡು ಯಾರಾದರು ಬೀದಿಯಲ್ಲಿ ಅಂಗಡಿ ಹಚ್ಚಿದರೆ 5000=00ರೊಪಾಯಿ ದಂಡು ಮತ್ತು ಒಂದು ವರ್ಷ ಜೈಲೂ ಶಿಕ್ಷ ಎಂದು ಪುರಸಭೆಯ ಅಧಿಕಾರ ರವಿ ಬಾಗಲಕೋಟ JCB ಯಂತ್ರದೊಂದಿಗೆ ಧಿಡೀರಣೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಗಳಾದ ಶ್ರೀ ರವಿ ಬಾಗಲಕೋಟ ಧ್ವನಿ ವರ್ಧಕಮೂಲಕ ತಿಳಿಸಿದ್ದಾರೆ. ಆರೋಗ್ಯ ನಿರಿಕ್ಷಕರಾದ ಚಂದನಗೌಡಾ ಪಾಟೀಲ ಹಾಗೂ ಸಿಬ್ಬಂದಿ ಯವರು ಎಚ್ಚರಿಕೆ ಕೊಡುತ್ತಾ ಹುತಾತ್ಮ ಚೌಕದಿಂದ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ಕೋರ್ಟ್ ರೊಡ ವರೆಗೆ ನಡೆಯಿತು. ಈಸಂರ್ಭದಲ್ಲಿ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತಪಡಿಸಿದರು ಮತ್ತು ವಾದ ವಿವಾದ ಉಂಟಾಗಿ ನಂತರ ಪ್ರತಿಭಟನೆಗೆ ಮುಂದಾದರು ಇದರ ನಡುವೆ ಕೆಲವು ರಾಜಕೀಯ ಮುಖಂಡರು ಮಧ್ಯ ಪ್ರವೇಶ ಮಾಡಿದರು ನಂತರ ರಾಜಕೀಯ ರಂಗಪಡೆದು ಶಾಸಕರ ಹೆಸರು ಬರುತ್ತಲೆ ಕಾರ್ಯಾಚರಣೆ ಸ್ಥಗಿತಗೊಂಡಿತು. ಈ ಒಂದು ಕಾರ್ಯಾಚರಣೆಯಲ್ಲಿ ಶಾಸಕರ ಹೆಸರು ಕೇಳಿಬರುತ್ತಿದ್ದಂತೆ ಮತ್ತಷ್ಟು ಆಕ್ರೋಶ ಭುಗಿಲೆದ್ದಿತು ನಾವು ವ್ಯಾಪಾರಸ್ಥರು ದಿನಕ್ಕೆ ಇಪ್ಪತ್ತು ರುಪಾಯಿ ಪುರಸಭೆಗೆ ಕೊಡುತ್ತಿದ್ದೆವೆ. ನಾವೆನು ಪುಕ್ಸಟ್ಟೆ ಕುರುವದಿಲ್ಲ ಆದರೂ ಕೂಡ ಈ ರೀತಿಯ ವರ್ತನೆ ಸರಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸಗಳಿವೆ ಅದನ್ನು ಬಿಟ್ಟು ಬಡವರಿಗೆ ತೊಂದರೆ ಕೊಡುತ್ತಿದ್ದಾರೆ ನಗರದಲ್ಲಿ ಬೀದಿ ದನಗಳ ಹಾವಳಿಯಿಂದ ವೃದ್ಧರು ಮತ್ತು ಮಕ್ಕಳು ಸಂತೆಯಲ್ಲಿ ಬರುವುದು ಕಷ್ಟವಾಗಿದೆ, ನಗರದಲ್ಲಿ ಸ್ವಚ್ಚತಾ ಇಲ್ಲ, ಚರಂಡಿಗಳು ಗಬ್ಬೆದ್ದು ನಾರುತ್ತಿವೆ, ಅದನ್ನು ಬಿಟ್ಟು ಬಡವರ ಹೊಟ್ಟೆಯ ಮೇಲೆ ಬರೆ ಹಾಕಲು ಬಂದಿದ್ದಾರೆ ಎಂದು ಕಣ್ಣಲ್ಲಿ ನೀರು ತಂದರು. .✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ