ಕೊಪ್ಪಳ ಜಿಲ್ಲಾ ಪಂಚಾಯಿತಿ ಮಹಿಳಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರವದಿಯಲ್ಲೆ ಜುಮಲಾಪೂರ ಪ್ರೌಢಶಾಲಾ ಬಾಲಕಿಯರಿಗೆ ಶೌಚಾಲಯವೆ ಇಲ್ಲ..
ಇತ್ತೀಚೆಗೆ ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಮಹಿಳಾ ಕಾರ್ಯನಿರ್ವಾಹಕ. ಶ್ರೀ ಮತಿ ಬಿ ಪೌಜಿಯಾ ತರುನ್ನಮ. ಅಧಿಕಾರಿಗಳಾಗಿ ನಿರ್ವಹಿಸುವ ಜಿಲ್ಲೆಯಲ್ಲಿಯೇ ಬಾಲಕಿಯರಿಗೆ ಶೌಚಾಲಯವೆ ಇಲ್ಲ ಅಂದರೆ ಹೆಣ್ಣಿನ ಕುಲಕ್ಕೆ ಅಮಾನವೀಯ ಅಂದರೂ ತಪ್ಪಗಲಾರದು. ಸುಮಾರು ಆ ಶಾಲೆಯಲ್ಲಿ 254 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದು. ಅದರಲ್ಲಿ 132 ಬಾಲಕರು. 122 ಬಾಲಕಿಯರು. ವಿಧ್ಯಾಭ್ಯಾಸ ಮಾಡುತ್ತಿದ್ದು. ಇಷ್ಟು ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿರುವ ಶಾಲೆಗೆ ಶೌಚಾಲಯವೆ ಕಾಣೆಯಾಗಿದೆ. ಕೆಂದ್ರ ಸರ್ಕಾರವು ಹೆಣ್ಣು ಮಕ್ಕಳು ಉಜ್ವಲ ಭವಿಷ್ಯಕ್ಕೊಸ್ಕರ. ಹೆಣ್ಣು ಒಂದು ಕಲಿತರೆ ಶಾಲೆ ಒಂದು ತೆರೆದಂತೆ. ಎನ್ನುವ ಮಾತು ಈ ಶಾಲೆಯಲ್ಲಿ ಬರಿ ಮಾತು ಆಗಿ ಉಳಿದಿದೆ. ಹಾಗಾಗಿ ಶ್ರೀಮಂತರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿರುವ ಶಾಲೆಗೆ ಕಳುಹಿಸುತ್ತಾ ಇದ್ದಾರೆ ಬಡವರಿಗೆ ಗತಿ ಇಲ್ಲದಂತೆ ತಮ್ಮ ಹೆಣ್ಣು ಮಕ್ಕಳನ್ನು ಆ ಶಾಲೆಗೆ ಕಳುಹಿಸುವದು ಅನಿವಾರ್ಯ ವಾಗಿದೆ. ಇಷ್ಟಾದರೂ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಜನ ಪ್ರತಿನಿಧಿಗಳನ್ನು ನೋಡಿದರೆ ಜಗತ್ತಿನಲ್ಲಿ ಎಂಟನೇ ಅಧ್ಭುತಕ್ಕೆ ಸಮಾನ ಎಂದರೂ ಅಚ್ಚರಿ ಪಡಬೇಕಿಲ್ಲ. ಆದರೆ ಸರ್ಕಾರ ಶಾಲೆಯಲ್ಲಿ ಶೌಚಲಯ ಕೊರತೆಯಿಂದಾಗಿ ಹೆಣ್ಣು ಮಕ್ಕಳು ಮಾನಸಿಕವಾಗಿ ದೈಹಿಕವಾಗಿ ನೊಂದು ಪರದಾಡುವಂತಾಗಿದೆ. ಪ್ರಾಯದ ಮಕ್ಕಳನ್ನು ಪಾಲಕರು ಶಾಲೆಗೆ ಕಳುಹಿಸುವುದಕ್ಕೆ ಹಿಂದೆಟು ಹಾಕುವಂತಾಗಿದೆ. ಶಾಲಾ ಬಾಲಕಿಯರು ಹೊರವಲಯದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ದೇಶದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಆಗುತ್ತಿರುವ ಘಟನೆ ನೋಡಿದರೆ ಅಚ್ಚರಿಪಡಬೇಕಾಗಿಲ್ಲ. ಶಾಲೆಯಲ್ಲಿ ಇರುವ ಒಟ್ಟು 254 ಮಕ್ಕಳ ಪೈಕಿ 132 ಬಾಲಕರು ಮೂತ್ರ ವಿಸರ್ಜನೆ ಗಾಗಿ ಶಾಲೆಯ ಮುಂಭಾಗದ ರಸ್ತೆಯೆ ಇವರ ಶೌಚಾಲಯ ಸ್ಥಳವಾಗಿದೆ. 122 ಬಾಲಕಿಯರು ಶಾಲಾ ಹಿಂದೆ ಗಿಡದ ಮರದ ಮರೆಯಲ್ಲಿ ಹಾಗೂ ದನದ ಕೊಟ್ಟಿಗೆಯಂತಿರುವ ಒಂದು ಕೊಣೆ ಒಳಗೆ ಸರತಿಯಲ್ಲಿ ಒಬ್ಬ ಒಬ್ಬರಂತೆ ನೈಸರ್ಗಿಕ ಕ್ರಿಯೆ ಮುಗಿಸಿಕೊಳ್ಳಬೇಕಾಗಿದೆ. ಶಾಲಾ ಮಹಿಳಾ ಶಿಕ್ಷಕರ ಪರಸ್ಥಿತಿ ಕೂಡ ಚಿಂತಾಜನಕವಾಗಿದೆ. ಬಾಲಕಿಯರಿಗೆ ಮುಜುಗರ ಹಾಗೂ ಅಳುಕಿನಿಂದ ಶಾಲೆಯತ್ತ ಮುಖ ಮಾಡುವಂತಾಗಿದೆ. ಸರ್ಕಾರದ ಶಾಲೆಯಲ್ಲಿ ಪ್ರಮುಖವಾಗಿ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ವದಗಿಸಲ ಯಾವುದೇ ಲೋಪವಾಗದಂತೆ 2012 ಸೆಪ್ಟೆಂಬರ್ 5 ರಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದರೂ ಇಂದಿಗೂ ಅಸಂಖ್ಯಾತ ಶಾಲಾ ಶೌಚಾಲಯ ಇಲ್ಲದಂತಾಗಿದೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ ಕಟ್ಟು ನಿಟ್ಟಿನ ನಿರ್ದೇಶಗಳನ್ನು ಉಲ್ಲೇಖಿಸಿ ಶಿಕ್ಷಣ ಇಲಾಖೆಯೂ ಪ್ರತಿಯನ್ನು ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ.
ಬಿಇಒ ಆಯಾ ಶಾಲಾ ಮುಖ್ಯೋಪಾಧ್ಯಾಯರಿಗೆ ಸುತ್ತೋಲೆ ಕಳುಹಿಸಿ. ಈ ಆದೆಶವನ್ನೂ ಪಾಲನೆ ಮಾಡಬೇಕು ಎಂದರು ಅದು ಕೆವಲ ಕಡತದಲ್ಲಿ ಅಷ್ಟೇ ಆಗಿದೆ. ಹಾಗಾಗಿ ಮಾನ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಮಹಿಳಾ ಕಾರ್ಯನಿರ್ವಾಹಕ ಅಧಿಕಾರಿಗಳಾದ ತಾವುಗಳು. ಬೆಗನೆ ಹೆಚ್ಚೆತ್ತು ಶಿಘ್ರ ಗತಿಯಲ್ಲಿ. ತಾವು ಕೂಡಾ ಒಬ್ಬ ಮಹಿಳಾ ಅಧಿಕಾರಿಯಾಗಿ ಜುಮಲಾಪೂರ ಪ್ರೌಢಶಾಲೆ ಬಾಲಕಿಯರಿಗೆ ಸಮರ್ಪಕವಾಗಿ ಶೌಚಾಲಯ ನಿರ್ಮಿಸಿ ನೂರಾರು ಬಾಲಕಿಯರ ಉಜ್ವಲ ಭವಿಷ್ಯಕ್ಕೆ ನಂದಾದೀಪ ವಾಗಬೇಕೆಂದು. ಪತ್ರಿಕೆ ಮುಖಾಂತರ ಗ್ರಾಮದ ಸಾರ್ವಜನಿಕರಾದ ಶಂಕರಪ್ಪ ನಾಯಕ ನಿಂಗಪ್ಪ ನಾಯಕ ಶಂಕರಪ್ಪ ಬೋದುರು ಚಿದಾನಂದಪ್ಪ ನಾಯಕ ಬಸಪ್ಪ ಹೊಸಪೇಟೆ ಹನುಮಂತಪ್ಪ ಚನ್ನಬಸಪ್ಪ ಅಮರೇಶ ಹಳ್ಳದಂಡಿ ನಾಗರಾಜ ಯಂಕಪ್ಪ ಇನ್ನೂ ಗ್ರಾಮದ ಹಲವಾರು ಸಾರ್ವಜನಿಕರು ಅಗ್ರಹಿಸಿದ್ದಾರೆ.
ವರದಿ – ಉಪ-ಸಂಪಾದಕೀಯ