ಅಲ್ಲಾಪೂರ ಗ್ರಾಮದ ಜಲ ಜೀವನ್ ಮೀಷನ್ ಯೋಜನೆಯ ಕಾಮಗಾರಿ ವಿಕ್ಷಣೆ ಮಾಡಿದ ಆಕಾಶ್ ವಿ……
ಕುಂದಗೋಳ: ತಾಲೂಕು ಅಲ್ಲಾಪೂರ ಗ್ರಾಮಕ್ಕೆ ಕುಂದಗೋಳ ಗ್ರಾ.ಕು. ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಾದ (AEE RWS SUB DIVISION) ಆಕಾಶ್. ವಿ. ಇವರು ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ ಜೋಡಣಿ ಪೈಪ್ ಲೈನ್ ಕಾರ್ಯ ವೀಕ್ಷಣೆ ಮಾಡಿದರು. ನಂತರ ಪೈಪ್ ಲೈನ್ ಕೆಲಸದ ಕಾಮಗಾರಿ ನಡೆಯುತ್ತಿರುವ ಗ್ರಾಮದ ಎಲ್ಲಾ ಓಣಿಗಳಲ್ಲಿ ಮತ್ತು ಶಾಲಾ ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಕಿದ ಬಗ್ಗೆ ಪರಿಶೀಲನೆ ನಡೆಸಿದರು ನಂತರ ಗ್ರಾಮದ ಶುದ್ಧಿ ಕುಡಿಯುವ ನೀರಿನ ಘಟಕ ಮತ್ತು ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್ ಬಹಳಷ್ಟು ವರ್ಷಗಳಿಂದ ಹಿಂದೆ ನಿರ್ಮಾಣ ಆಗಿದೆ ನೀರು ಸೋರಿಕೆಯಾಗುತ್ತಿದೆ ಅದನ್ನು ವೀಕ್ಷಣೆ ಮಾಡಿ ಆದಷ್ಟು ಬೇಗನೆ ಟ್ಯಾಂಕರ್ ನೀರು ಸೋರಿಕೆಯಾಗುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ನಂತರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ್ಕೆ ಅಳವಡಿಸಿದ ಸ್ಮಾರ್ಟ್ ಕಾರ್ಡ್ ಬಗ್ಗೆ ಪರಿಶೀಲನೆ ನಡೆಸಿ ಗ್ರಾಮ ಪಂಚಾಯತ್ ಸಿಬ್ಬಂದಿಗೆ ಗ್ರಾಮ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ವಚ್ಛತೆಯಿದ ಇಡಲು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಲ್ಲಾಪೂರ ಗ್ರಾಮದ ಆರೋಗ್ಯ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ರಡ್ಡೇರ.ಮತ್ತು JJM ಕಾಮಗಾರಿಯ ಗುತ್ತಿಗೆದಾರರಾದ ಚಂದ್ರು ಹುತ್ತನಗೌಡ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು .
ವರದಿ – ಮಹೇಶ ಶರ್ಮಾ