ಜುಮಲಾಪೂರ ಪ್ರೌಢಶಾಲಾ ಶೌಚಾಲಯ ಅವ್ಯವಸ್ಥೆ. ನಮ್ಮ ಪತ್ರಿಕೆ ಹಾಗೂ ವೆಬ್ ಸುದ್ದಿಗೆ ಸ್ಪಂದಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು…….
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಗೆ ಬರುವ ಜುಮಲಾಪೂರ ಗ್ರಾಮದ ಪ್ರೌಡಶಾಲೆ ವಿದ್ಯಾರ್ಥಿಗಳು ಶೌಚಾಲಯದ ಅವ್ಯವಸ್ಥೆ ಕುರಿತು ಗ್ರಾಮಸ್ಥರ ಆಗ್ರಹದ ಮೇರೆಗೆ ನಮ್ಮ ಪತ್ರಿಕೆ ವೆಬ್ ನಲ್ಲಿ ಸುದ್ದಿ ಪ್ರಕಟಿಸಿದ ತಕ್ಷಣಕ್ಕೆ ಸ್ಪಂದಿಸಿದ ಕೊಪ್ಪಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೆಲವೆ ಕ್ಷಣದಲ್ಲಿ ಕುಷ್ಟಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದೇಶದನ್ವಯ ಇಂದು ಜುಮಲಾಪೂರ ಪ್ರೌಡಶಾಲಾಗೆ ಬೇಟೆ ನೀಡಿದ ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಜಯರಾಮ ಚವ್ಹಾಣ ಸೇರಿದ್ದರು.
ಗ್ರಾಮದ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಶೌಚಾಲಯದ ಕಟ್ಟಡ ನಿರ್ಮಾಣ ಸೇರಿ ಹಲವು ಕುಂದು ಕೊರತೆಯನ್ನು ಖುದ್ದಾಗಿ ಸ್ಥಳದಲ್ಲಿ ವಾಸ್ತವ ಸ್ಥಿತಿಯನ್ನು ಅರಿತು. ಕೂಡಲೇ ತುರ್ತಾಗಿ ಶೌಚಾಲಯ ನಿರ್ಮಾಣ ನೀರಿನ ವ್ಯವಸ್ಥೆ ಮಾಡಲು ಗ್ರಾಮದ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದರು ನಾಳೆಯಿಂದ ಶೌಚಾಲಯದ ಕಾಮಗಾರಿಯನ್ನು ಕೈಗೊಳ್ಳಬೇಕು, ಕೈಗೊಂಡ ಪ್ರಗತಿ ವರದಿ ನೀಡಲು ಆದೇಶಿಸಿ, ಕಾಮಗಾರಿ ಸ್ಥಳದಲ್ಲಿ ಯಾರಾದರೂ ತಂಟೆ ತಕರಾರು ನಡೆಸಿದರೆ ಕೂಡಲೇ ಪೋಲಿಸರಿಗೆ ದೂರು ಕೊಡಲು ಆದೇಶಿಸಿದರು, ಈ ಸಂದರ್ಭದಲ್ಲಿ ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಪಂ ಸಿಬ್ಬಂದಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಊರಿನ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.
ವರದಿ – ಉಪ-ಸಂಪಾದಕೀಯ