ಹೈ ಕೋರ್ಟ್ ವಕೀಲೆ ವನಿತಾ ಪ್ರಶಾಂತ್ ದೇವಾಡಿಗರವರಿಗೆ “ಗೌರವ ಡಾಕ್ಟರೇಟ್” ಪ್ರಧಾನ!…..
ತಮಿಳ್ ನಾಡು (ಹೊಸೂರ್) ಅಕ್ಟೋಬರ್: 2 ರಂದು ಹೋಟೆಲ್ ಕ್ಲಾರೆಸ್ಟ ದಲ್ಲಿ ಇಂಡಿಯನ್ ಎಂಪೈರ್ ಯೂನಿವರ್ಸಿಟಿಯ ಘಟಿಕೋತ್ಸವದಲ್ಲಿ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ನಾಗೂರು ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕಾನೂನು ಸಮನ್ವಯಾಧಿಕಾರಿ ಶ್ರೀಮತಿ ವನಿತಾ ಪ್ರಶಾಂತ್ ದೇವಾಡಿಗ ನವರಿಗೆ ಅವರ ಸಾಮಾಜಿಕ ರಂಗದ ಅನುಪಮ ಸೇವೆಯನ್ನ ಗುರುತಿಸಿ “ಗೌರವ ಡಾಕ್ಟರೇಟ್”ನ್ನು ಇಂಡಿಯನ್ ಎಂಪೈರ್ ಯೂನಿವರ್ಸಿಟಿ ಛೇರ್ಮನ್ ಹಾಗೂ ಯೂನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಅಧ್ಯಕ್ಷರಾದ ಡಾ.ಸಿ.ಪಾಲ್ ಇಬನೇಜರ್, ಯುಡಿಸಿ ಮತ್ತು ಐಈಯು ವೈಸ್ ಪ್ರೆಸಿಡೆಂಟ್ ಡಾ.ಕೆ.ಪ್ರಭಾಕರ್, ತಮಿಳು ನಾಡಿನ ಮಾಜಿ ಶಾಸಕ ಡಾ.ಕೆ.ಎ.ಮನೋಹರನ್, ಡಾ. ಜೆ. ಹರಿ ದಾಸ್, ನಿವೃತ್ತ ಸಹಾಯಕ ನ್ಯಾಯಾಧೀಶರು, ಶ್ರೀಮತಿ ರುಚಿ ಗುಲಾಟಿ, ಅಂತರಾಷ್ಟ್ರೀಯ ಯೋಗ ಪಟು,ಶ್ರೀ ಶ್ರೀ ಶ್ರೀ ಕುಮಾರ ನಾಗಪ್ಪ ಲಮಾಣಿ, ಶ್ರೀ ಶ್ರೀ ಶ್ರೀ ಸೇವಾಲಾಲ್ ಬಂಜಾರ ಗುರುಪೀಠದ ಮಠಾಧಿಪತಿ, ಕೃಷ್ಣಾಪುರ ಹಾವೇರಿ, ಡಾ. ಎಸ್. ಶಶಿ ಹರವಿನ್, ತಮಿಳ್ ನಾಡು ಎನ್ ಪಿಪಿ ಪಕ್ಷದ ಕಾರ್ಯಾಧ್ಯಕ್ಷರು, ರವರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು, ನಂತರ ಗೌರವ ಡಾಕ್ಟರೇಟ್ ಸ್ವೀಕರಿಸಿ ಶ್ರೀಮತಿ ವನಿತಾ ಪ್ರಶಾಂತ್ ದೇವಾಡಿಗನವರು ” ಸಾಮಾಜಿಕ ಸೇವೆಯನ್ನ ಗುರುತಿಸಿ ನೀಡುವ ಪ್ರಶಸ್ತಿ ಪ್ರಧಾನಗಳು ಸಮಾಜದಲ್ಲಿ ನಮ್ಮ ಗೌರವವನ್ನ ಹೆಚ್ಚಿಸುವುದಲ್ಲದೇ ಸಾಮಾಜಿಕ ಜವಾಬ್ದಾರಿಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ, ಸಾಮಾಜಿಕ ರಂಗದಲ್ಲಿ ಸಲ್ಲಿಸಿದ ಸೇವೆಯನ್ನ ಗುರುತಿಸಿ ನೀಡಿರುವ ಈ ಗೌರವ ಡಾಕ್ಟರೇಟ್ ಸಮಾಜ ಸೇವೆಗೆ ಸ್ಪೂರ್ತಿ ನೀಡಿದ್ದು ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಲು ಪ್ರೇರಣೆಯಾಗಿದ್ದು, ಸಾಮಾಜಿಕವಾಗಿ ಹಿಂದುಳಿದವರ, ನೊಂದ ಮಹಿಳೆಯರ ಧ್ವನಿಯಾಗಿ” ಸೇವೆ ಸಲ್ಲಿಸುವುದಾಗಿ ತಿಳಿಸಿದರು,
ವರದಿ – ಮಹೇಶ ಶರ್ಮಾ