ಕನಕದಾಸರು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆ : ಡಾ.ಜಯದೇವಿ ಗಾಯಕವಾಡ.
ಹುಮನಾಬಾದ : ಕನಕದಾಸರು ಕನ್ನಡ ನಾಡಿನ ಪ್ರಸಿದ್ಧ ಕೀರ್ತನಕಾರರು. ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ ಎಂದು ಖ್ಯಾತಿ ಸಾಹಿತಿ, ಉಪನ್ಯಾಸಕರಾದ ಡಾ.ಜಯದೇವಿ ಗಾಯಕವಾಡರವರು ಹೇಳಿದರು. ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ಹಾಗೂ ಸಾಕ್ಷಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಸಂತ ಕನಕದಾಸರ ರಾಜ್ಯ ಮಟ್ಟದ ಕವನ ಸ್ಪರ್ಧೆ ಮತ್ತು ಕನಕ ಚಿಂತನೆ – ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕನಕದಾಸರು ಸರಳ ಭಾಷೆಯಲ್ಲಿ ಕೀರ್ತನೆಗಳನ್ನು ರಚಿದಾರೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳ ಅಧ್ಯಯನ ಮಾಡಿದವರಿಗೆ ಕನಕದಾಸರ ಚಿಂತನೆಗಳು ಸೂಜಿಗಲ್ಲಿನಂತೆ ಸೆಳೆಯುತ್ತದೆ.ಕನಕದಾಸರು 316 ಕೀರ್ತನೆಗಳನ್ನು ರಚಿಸಿ,ಅದರಲ್ಲಿ ಮುಖ್ಯವಾಗಿ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಕಾವ್ಯಕೃತಿಗಳನ್ನು ಬರೆದಿದ್ದಾರೆ.ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಕನಕದಾಸರ ಪ್ರಭಾವ ನನ್ನ ಮೇಲೆ ಜೀವನ ಮೇಲೆಯೂ ಪರಿಣಾಮ ಬೀರಿದೆ. ಮುಂಬರುವ ದಿನಗಳಲ್ಲಿ ಕನಕದಾಸರ ಕುರಿತು ಮಹಾಗ್ರಂಥ ರಚಿಸುವ ಇಚ್ಚೆ ಇದೆ ಎಂದು ಹೇಳಿದರು. ಸಾಹಿತಿ ಬಸವರಾಜ ದಯಾಸಾಗರ ರವರು ಮಾತನಾಡಿ ಕನಕದಾಸರು ಈ ನಾಡು ಕಂಡ ಶ್ರೇಷ್ಠ ಸಂತರು. ಬದುಕಿನಲ್ಲಿ ಹಲವಾರು ನೋವುಗಳು ಅನುಭವಿಸುತ್ತಾರೆ. ನರಸಿಂಹ ದೇವಸ್ಥಾನದ ನಿರ್ಮಾಣದ ಕಾರ್ಯದಲ್ಲಿ ತೊಡಗಿದಾಗ ಅಪಾರ ಚಿನ್ನ ದೊರೆಯುತ್ತದೆ. ಅದನ್ನು ಅವರು ಸ್ವಂತಕ್ಕೆ ಉಪಯೋಗಿಸದೆ ಹಲವು ಅಭಿವೃದ್ಧಿ ಕಾರ್ಯಕ್ಕೆ ಸದ್ಬಳಕೆ ಮಾಡುತ್ತಾರೆ.ಕೀರ್ತನೆಗಳ ರಚನೆ, ಭಗವಂತನ ಧ್ಯಾನ ಮತ್ತು ಸಾಮಾಜಿಕ ಅಸಮಾನತೆ ಕುರಿತು ಹೋರಾಟ ಮಾಡಿರುತ್ತಾರೆ ಎಂದರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲಾಧ್ಯಕ್ಷರು,ಸಾಹಿತಿ,ಪ್ರಗತಿಪರ ಚಿಂತಕರಾದ ಸಂಗಮೇಶ ಎನ್ ಜವಾದಿಯವರು ಮಾತನಾಡಿ ಕುಲ ಕುಲವೆಂದು ಹೊಡೆದಾಡದಿರಿ ಎಂದು ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿದ್ದ ಸ್ಥಾಪಿತ ಮೌಢ್ಯಗಳನ್ನ ಕಳೆಯಲು ಹೋರಾಡಿದ ಧೀಮಂತ, ಸಮಾಜದ ಡೊಂಕುಗಳನ್ನು ತಮ್ಮ ಕೀರ್ತನೆಗಳಿಂದ ಎತ್ತಿ ಹಿಡಿದು, ಜಾಗೃತಿ ಮೂಡಿಸುವ ಕೆಲಸ ಮಾಡಿದ ದಾಸಶ್ರೇಷ್ಟ, ಕವಿ ಕನಕದಾಸರು.ದಾಸಪದದ ಮೂಲಕವೇ ಜಾತಿ ವ್ಯವಸ್ಥೆಯ ತಾರತಮ್ಯಗಳ ವಿರುದ್ಧ ಸಮರ ಸಾರಿ, ಸಮ ಸಮಾಜದ ನಿರ್ಮಾಣಕ್ಕಾಗಿ ಇಡೀ ಅವರ ಜೀವನ ಮುಡಿಪಾಗಿಟ್ಟು, ಮೂಡನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿ,ಮನುಜ ಕುಲವನ್ನು ಸಮಾನತೆಯ ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸವನ್ನು ಶ್ರೇಷ್ಠ ಕಾರ್ಯ ಮಾಡಿರುವ ಸಂತರ ಸಂತ ಮಾಹಾಸಂತ ದಾಸ ಶ್ರೇಷ್ಠ ಶ್ರೀ ಕನಕ ದಾಸರು ಎಂದು ಹೇಳಿದರು. ನಿವೃತ್ತ ವೈದ್ಯ ಡಾ.ಚಂದ್ರಕಾಂತ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕನಕದಾಸರ ಕುರಿತು ಹೆಚ್ಚು ಹೆಚ್ಚು ಉಪನ್ಯಾಸ ಕಾರ್ಯಕ್ರಮಗಳ ಆಗಬೇಕು.ಆದಾಗ ಮಾತ್ರ ಕನಕದಾಸರ ಜೀವನದ ಬಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯ.ಕನಕದಾಸರ ಭಕ್ತಿ ಮಾರ್ಗ ನಮ್ಮಗೆಲ್ಲರಿಗೂ ಪ್ರೇರಣೆ ನೀಡುವಂತಹದು ಎಂದರು. ಇದೆ ಸಂದರ್ಭದಲ್ಲಿ ನಾಡಿಗೆ ಅಗಣಿತ ಸಾಹಿತ್ಯಿಕ ಸೇವೆ ನೀಡಿ ಅನೇಕ ಸಂಘಟನೆಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ,ಸೈ ಎನಿಸಿಕೊಂಡಿರುವ ಖ್ಯಾತ ಸಾಹಿತಿಗಳಾದ ಡಾ. ಗವಿಸಿದ್ದಪ್ಪ ಪಾಟೀಲರವರಿಗೆ ರಾಜ್ಯಮಟ್ಟದ ಸಾಹಿತ್ಯ ಸಂಘಟನಾ ಚತುರ ಪ್ರಶಸ್ತಿ ಹಾಗೂ ಶ್ರೀ ರಾಮರೆಡ್ಡಿ ಮುಖ್ಯ ಆಡಳಿತಧಿಕಾರಿಗಳು ನ್ಯಾಯಾಂಗ ಇಲಾಖೆ ಸೇವೆಯನ್ನು ಗುರುತಿಸಿ ನ್ಯಾಯದೀಪ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಮೇಶ್ ಬಾಬು ಮಠ ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದಾರ್ಥ ಮಿತ್ರಾ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಶರದ ನಾರಾಯಣಪೇಟ, ತಿಪ್ಪಣ್ಣಾ ಶರ್ಮಾ, ಶಿವರಾಜ್ ಮೇತ್ರೆ, ಕೆ.ವೀರಾರೆಡ್ಡಿ,ಗೀತಾರೆಡ್ಡಿ, ಸುನಿತಾ ಪಾಟೀಲ್, ಸಂಗೀತಾ ದಯಾಸಾಗರ, ಲಕ್ಷ್ಮಿ ತ್ಯಾಪಿ, ಶಶಿಕಾಂತ ಗಾವಲ್ಕರ್ ಉಪಸ್ಥಿತರಿದ್ದರು.
ವರದಿ –ಸಂಗಮೇಶ ಎನ್ ಜವಾದಿ