ಸಾಧನೇಯ ಹಾದಿಯಲ್ಲಿ ಕ್ರೈಂ–ಥ್ರಿಲ್ಲರ್ ಸ್ಟೋರಿ….
ನಮ್ಮ ಉತ್ತರ ಕರ್ನಾಟಕದ ಯುವ ಪ್ರತಿಭೆ, ನಮ್ಮ ಸಿಂಧನೂರು ತಾಲೂಕಿನ ಹುಡುಗ ಅನ್ನೋದೇ ನಮಗೆಲ್ಲಾ ಅತ್ಯೆಂತ ಹೆಮ್ಮೆಯ ಮಹತ್ತರ ಸಂತೋಷ. ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷಗಳಿಂದ ಹಲವಾರು ಹೆಸರಾಂತ ನಿರ್ದೇಶಕರ ಬಳಿ ಕೆಲಸ ಕಲಿತು, ಈಗ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟು ಆಕ್ಷನ್, ಕಂ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರದ ಚಿತ್ರವನ್ನು ತೆರೆಮೇಲೆ ಹೇಳಲು ಹೊರಟಿದ್ದಾರೆ ನಿರ್ದೇಶಕ ನಿರ್ಣಯ್ ಡಿ. ಕೆ. ಈ ಚಿತ್ರಕ್ಕೆ ಹೊಸ ನಾಯಕ ನಟನನ್ನು ಪರಿಚಯಿಸುತಿದ್ದು, ಕಲ್ಪನಾ ವಿಲಾಸಿ, ಖಡಕ್ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ ಐಶ್ವರ್ಯ ಪೂಜಾರಿ ಅವರು ನಟಿಸುತ್ತಿದ್ದು ಪೋಷಕ ಪಾತ್ರಕ್ಕೆ ಚಿತ್ರರಂಗದ ಹೆಸರಾಂತ ಹಿರಿಯ ಕಲಾವಿದರು ಇರುತ್ತಾರೆ. ಈಗಾಗಲೇ ಚಿತ್ರದ ಪ್ರೀ-ಪ್ರೊಡಕ್ಷನ್ ಮುಗಿಸಿರುವ ಚಿತ್ರತಂಡ, ಇದೇ ಅಕ್ಟೋಬರ್ ವೇಳೆಗೆ ಚಿತ್ರದ ಮುಹೂರ್ತ ನಡೆಸಿ, ಟೈಟಲ್ ಅನೌನ್ಸ್ ಮಾಡುವ ಪ್ಲಾನ್ ನಲ್ಲಿದೆ. ತಮ್ಮ ಚೊಚ್ಚಲ ನಿರ್ದೇಶನದ ಬಗ್ಗೆ ಮಾತನಾಡುವ ನಿರ್ದೇಶಕ ನಿರ್ಣಯ್ ಡಿ. ಕೆ. ಸಾಧನೆಯ ಹಾದಿಯಲ್ಲಿ ಹೊರಟ ಹುಡುಗನೊಬ್ಬನ ಜೀವನದಲ್ಲಿ ನಡೆಯುವ ಅನಿರೀಕ್ಷಿತ, ಅಚ್ಚರಿಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಆಕ್ಷನ್ ಕಂ ಸಸ್ಪೆನ್ಸ್ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿದೆ. ಬಹುತೇಕ ಹೊಸ ಪ್ರತಿಭೆಗಳ ಪರಿಶ್ರಮದಿಂದ ಈ ಸಿನಿಮಾ ಶುರುವಾಗಿದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥ ಕಥೆ ಸಿನಿಮಾದಲ್ಲಿದೆ. ಬೆಂಗಳೂರು, ಕುದುರೆಮುಖ, ಮೂಡಿಗೆರೆ, ಬಾಳೆಹೊನ್ನೂರು, ಕೊಪ್ಪ, ರಾಯಚೂರು, ವಿಶಾಖಪಟ್ಟಣಂ ಮೊದಲಾದ ಕಡೆಗಳಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ ನಿರ್ದೇಶಕ ನಿರ್ಣಯ್ ಡಿ. ಕೆ. ಇನ್ನು ಈ ಚಿತ್ರಕ್ಕೆ ಹಂಸಲೇಖ, ವಿ. ಹರಿಕೃಷ್ಣ, ಅರ್ಜುನ್ ಜನ್ಯ ಅಂತ ಮಹಾನ್ ಸಂಗೀತ ನಿರ್ದೇಶಕರ ಗರಡಿಯಲ್ಲಿ ಪಳಗಿದ ಜಿಯೋ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದು, ವೀನಸ್ ಮೂರ್ತಿಯವರ ಛಾಯಾಗ್ರಹಣವಿದ್ದು, ರಾಕೇಶ್ ಅವರಗಲ್ಲು ಮತ್ತು ಅಂಬರೀಷ್ ಲಿಂಗಸ್ಗೂರು ಅವರು ಬಂಡವಾಳ ಹಾಕಿ ನಿರ್ಮಿಸುತ್ತಿದ್ದು. ಈ ಚಿತ್ರದ ನಿರ್ವಹಣೆ ದಿನೇಶ್ ಬಿ ರಾಜ್ ತುಮಕೂರು ಅವರು ಹೊತ್ತಿದ್ದಾರೆ.
ವರದಿ – ಸಂಪಾದಕೀಯ