ಕೂಡ್ಲಿಗಿ:ಕ.ಜ್ಞಾ.ವಿ.ಸಮಿತಿಗೆ ಪದಾಧಿಕಾರಿಗಳ ಆಯ್ಕೆ-ವಿಜಯನಗರ ಜಿಲ್ಲೆ ಕೂಡ್ಲಿಗಿ,..

Spread the love

 ಕೂಡ್ಲಿಗಿ:ಕ.ಜ್ಞಾ.ವಿ.ಸಮಿತಿಗೆ ಪದಾಧಿಕಾರಿಗಳ ಆಯ್ಕೆ-ವಿಜಯನಗರ ಜಿಲ್ಲೆ ಕೂಡ್ಲಿಗಿ,..

“ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ” ಕೂಡ್ಲಿಗಿ ತಾಲೂಕು ಘಟಕ’ವನ್ನು ಪಟ್ಟಣದಲ್ಲಿ ರಚಿಸಲಾಗಿದೆ. ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಶಿಕ್ಷಕ ಬಿ.ಬಿ.ಶಿವಾನಂದರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಕೂಡ್ಲಿಗಿ ತಾಲೂಕು  ಘಟಕ  ರಚಿಸಲಾಗಿದ್ದು ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಬಿ.ಬಿ.ಶಿವಾನಂದ ಪ್ರಾಸ್ತಾವಿಕವಾಗಿ ಮಾತನಾಡಿ,ಖ್ಯಾತ ಮನೋವೈದ್ಯರಾದ ಡಾ”ಸಿ.ಆರ್.ಚಂದ್ರಶೇಖರ್ ರವರ ನೇತೃತ್ವದಲ್ಲಿ ಕ.ಜ್ಞಾ.ವಿ.ಸಮಿತಿ ರ‍ಜ್ಯಾಧ್ಯಂತ ರಚಿಸಲಾಗಿದೆ. “ಸಮಾಜದಲ್ಲಿನ ಮೌಡ್ಯತೆಯನ್ನು ತೊಲಗಿಸಲು ಶ್ರಮಿಸುತ್ತಿದ್ದು, ಪ್ರತಿಯೊಬ್ಬರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಆಂದೋಲನಗಳು ಅನಿವಾರ್ಯ. “ಜನತೆಗಾಗಿ ವಿಜ್ಞಾನ-ಪ್ರಗತಿಗಾಗಿ ವಿಜ್ಞಾನ-ಒಳಿತಿಗಾಗಿ ವಿಜ್ಞಾನ” ಎಂಬ ಧ್ಯೇಯದೊಂದಿಗೆ ಕ.ಜ್ಞಾ.ವಿ ಸಮಿತಿ ಕಾರ್ಯನಿರ್ವಹಿಸಲಿದೆ‌. ಸಮಾಜದಲ್ಲಿ ಅನೇಕ ಸಮಸ್ಯೆಗಳಿಗೆ ಜನರ ಅಜ್ಞಾನವೇ ಮೂಲ ಕಾರಣವಾಗಿದ್ದು,ಮೌಡ್ಯತೆಯ ಮೂಲೋಚ್ಛಾಟನೆ ಆಗದ ಹೊರತು ನವ್ಯ ಸಮಾಜವನ್ನು  ನಿರ್ಮಿಸಲಾರೆವು. ನಾವೆಲ್ಲರೂ ಜ್ಞಾನವಂತರನ್ನ ಹುಟ್ಟು ಹಾಕುವ ನಿಟ್ಟಿನಲ್ಲಿಕಾರ್ಯೋನ್ಮುಖರಾಗಬೇಕಿದೆ” ಎಂದರು‌. ಪದಾಧಿಕಾರಿಗಳು-  ಕೂಡ್ಲಿಗಿ ತಾಲೂಕು ಕ.ಜ್ಞಾ.ವಿ.ಸಮಿತಿ ಅಧ್ಯಕ್ಷರಾಗಿ ಗಂಗಮ್ಮನಹಳ್ಳಿ ಜಗದೀಶ್‌,ಉಪಾಧ್ಯಕ್ಷರಾಗಿ ಜಿ.ಕೆ. ವಿನುತಾ, ಕಾರ್ಯದರ್ಶಿ ಕೆ. ಕುಮಾರಸ್ವಾಮಿ, ಖಜಾಂಚಿ ಕೆ.ಎಂ. ರವಿಪ್ರಸಾದ್, ಸಹಕಾರ್ಯದರ್ಶಿ ಎನ್.ಜೆ.ಸರ್ವಂಮಗಳ. ಸದಸ್ಯ ಪದಾಧಿಕಾರಿಗಳಾಗಿ ಎ.ಎಂ. ಚನ್ನಬಸಯ್ಯ,ಕೆ.ಎರಿಬಸಪ್ಪ, ಆರ್. ಮೂಗನಗೌಡ,ಮಣಿಗಾರ್ ಷೇಕ್ಷಾವಲಿ,ಕೆ.ರಾಜೇಶ್ವರಿ, ಬಸವರಾಜಗೌಡ,ಮಂಜುನಾಥ, ನವೀನ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428         

Leave a Reply

Your email address will not be published. Required fields are marked *