ತಾಲೂಕ ಆಡಳಿತ,ತಾಲೂಕ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಕುಷ್ಟಗಿ, ಇವರ ಸಹಯೋಗದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ…
ತಾಲೂಕ ಆಡಳಿತ,ತಾಲೂಕ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಕುಷ್ಟಗಿ, ಇವರ ಸಹಯೋಗದಲ್ಲಿ ಇಂದು ಕಂದಕೂರ ಗ್ರಾಮದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ(ದೌರ್ಜನ್ಯ ಪ್ರತಿಬಂಧ) ಅಧಿನಿಯಮ -1989ರಡಿ ಹಾಗೂ ತಿದ್ದುಪಡಿ ಅಧಿನಿಯಮ, 2015 ಮತ್ತು ತಿದ್ದುಪಡಿ ನಿಯಮಗಳು, 2016ರ ಪ್ರಕಾರ ಅಸ್ಪೃಶ್ಯತಾ ನಿವಾರಣೆ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಮೂಲಕ ಗ್ರಾಮಸ್ತರಿಗೆ ಅಸ್ಪೃಶ್ಯತಾ ಆಚರಣೆಯ ನಿವಾರಣೆಯ ಬಗ್ಗೆ ತಿಳುವಳಿಕೆ ಹಾಗೂ ಅರಿವು ಮೂಡಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಮಾನ್ಯ ತಹಶೀಲ್ದಾರರು,ತಾಲೂಕ ಕಾರ್ಯನಿರ್ವಾಹಣಾಧಿಕಾರಿಗಳು,ಆರಕ್ಷಕ ವೃತ್ತ ನಿರೀಕ್ಷಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.
ವರದಿ – ಉಪ-ಸಂಪಾದಕೀಯ