ಕೊಪ್ಪಳ  ಹಿಂದೆ ಕಾಂಗ್ರೆಸ್ ಸರ್ಕಾರ 60ವರ್ಷ ಆಳಿದರು ದೇಶವನ್ನು ಉದ್ಧಾರ ಮಾಡಿಲ್ಲ ಹಾಲಪ್ಪ ಆಚಾರ್.

Spread the love

ಕೊಪ್ಪಳ  ಹಿಂದೆ ಕಾಂಗ್ರೆಸ್ ಸರ್ಕಾರ 60ವರ್ಷ ಆಳಿದರು ದೇಶವನ್ನು ಉದ್ಧಾರ ಮಾಡಿಲ್ಲ ಹಾಲಪ್ಪ ಆಚಾರ್.

ಹಿಂದೆ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಮತಬ್ಯಾಂಕ್ ಪಡೆದುಕೊಂಡು ರೈತರನ್ನು ದಿವಾಳಿ ಎಬ್ಬಿಸಿದರು ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಪ್ರತಿಯೊಬ್ಬ ರೈತರಿಗಾಗಿ ವಿಶೇಷ ಪ್ಯಾಕೇಜ್ ತರುವ ಮೂಲಕ ಮುಕ್ತಮಾರುಕಟ್ಟೆಯ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ  ಕಾಂಗ್ರೆಸ್ ಸರ್ಕಾರ 60ವರ್ಷ ಆಳಿದರು ದೇಶವನ್ನು ಉದ್ಧಾರ ಮಾಡಕಾಗಿಲ್ಲ ಬರಿ 7ವರ್ಷಗಳಲ್ಲಿ ಯಾವುದೇ ಒಂದು ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲದ ಸುಭದ್ರ ಆಡಳಿತವನ್ನು ನಡೆಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಂತ ಸಚಿವರಾದ ಹಾಲಪ್ಪ ಆಚಾರ್ ಹೇಳಿದರು. ಯಲಬುರ್ಗಾ ತಾಲೂಕಿನ ಚಿಕ್ಕೊಪ್ಪ ತಾಂಡಾ, ಹೊಸಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಹಿಂದಿನ 5 ವರ್ಷ ಆಡಳಿತದಲ್ಲಿ ನೀವು ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದನ್ನು ಮತ್ತೆ ನೆನಪು ಮಾಡಿಕೊಳ್ಳಿ ಎಂದು ನನ್ನ ಅವಧಿ ಯಾವುದೇ ಕೆಲಸದಲ್ಲಿ ಕಳಪೆ ಕಾಮಗಾರಿ ಗುತ್ತಿಗೆದಾರರನ್ನು ಮನೆಗೆ ಕಳಿಸುವೆ ಅಧಿಕಾರಿಗಳನ್ನು ತಲೆದಂಡ ಮಾಡುತ್ತೇನೆ ಎಂದು ಹೇಳಿದರು. ಈ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಶಾಸಕನಾಗಿ ಸಚಿವನಾಗಿದ್ದೇನೆ  ನಿಮ್ಮೆಲ್ಲರ ಸೇವೆ ಮಾಡುವುದೇ ನನ್ನ ಗುರಿ ಎಂದು ನಾನು ಬೆಂಗಳೂರು ಧಾರವಾಡ ಹುಬ್ಬಳ್ಳಿ ಯಾವುದೇ ಮನೆ ಕಟ್ಟಿಕೊಂಡಿಲ್ಲ ಜನರ ಮಧ್ಯೆ ಇದ್ದು ಕೊಂಡು ಜನಗಳ ಮದ್ಯ ಇದ್ದು ಕೊಂಡು ಅವರ ಸಮಸ್ಯೆಗಳನ್ನು ಆಲಿಸುವುದೇ ನನ್ನ ಕೆಲಸ ಚುನಾವಣೆ ಬಂದಾಗ ಮಾತ್ರ ನೀರಾವರಿ ನೆಪಹೊಡ್ದಿ ಎಲ್ಲವನ್ನೂ ನಾನೇ ಮಾಡಿದ್ದೇನೆ ಎಂದು ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಾರದಾ ಕೊಡತಗೇರಿ.  ಉಪಾಧ್ಯಕ್ಷರಾದ ರೇಣುಕಾ ತೊಗರಿ. ಸದಸ್ಯರಾದ ಪ್ರೇಮ ಪಾಟೀಲ್. ತಾಲೂಕಿನ ತಹಸೀಲ್ದಾರರಾದ ಶ್ರೀಶೈಲ ತಳವಾರ್. ಅಧಿಕಾರಿಗಳಾದ ಮೌನೇಶ್ ಬಡಿಗರ್.  ಮುಖಂಡರಾದ ಬಸಲಿಂಗಪ್ಪ ಭೂತೆ. ರತನ ದೇಸಾಯಿ. ಸಿಎಚ್ ಪಾಟೀಲ್. ಎಸ್ ಏನ್ ಶಾಗೋಟಿ ವಕೀಲರು. ಇನ್ನು ಹಲವಾರು ಉಪಸ್ಥಿತರು ಭಾಗಿಯಾಗಿದ್ದರು. ನಂತರ ಅದೇ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಾಂಸ್ಕೃತಿಕ ಸಂಘದ ವತಿಯಿಂದ ಎರಡು ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸ್ಮಾರ್ಟ್ ಕ್ಲಾಸನ್ನು ಸಚಿವರಾದ ಹಾಲಪ್ಪ ಆಚಾರ್ ಅವರು ಉದ್ಘಾಟನೆ ಮಾಡಿದರು ಈ ವೇಳೆ ನಂದನ ಗೌಡ  ಪೊಲೀಸ್ ಪಾಟೀಲ್. ಪ್ರಾಚಾರ್ಯರಾದ ವಿ ಬಿ ಹನುಮ ಶೆಟ್ಟಿ. ರಘುರಾಜ್ ಕಲಬುರ್ಗಿ ಇತರ ಶಿಕ್ಷಕರು ಭಾಗಿಯಾಗಿದ್ದರು.

ವರದಿ – ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *