ಕೊಪ್ಪಳ ದೃಢ ಸಂಕಲ್ಪದಿಂದ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಮುಧೋಳದಲ್ಲಿ ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶ…
ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ – ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಶ್ರೀ ಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಾಧವ ನಾಯಕ್ ಕೊಪ್ಪಳ ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿಗಳು ಪ್ರಾಸ್ತವಿಕವಾಗಿ ಮಾತನಾಡಿದರು ಮನ ಪರಿವರ್ತನೆ ಮೂಲಕ ಮದ್ಯ ವ್ಯಸನ ಮುಕ್ತ ಸಮಾಜರೂಪಿಸುವಲ್ಲಿ ಮಾಡಿದ ಸೇವೆ, ಸಾಧನೆ ಶ್ಲಾಘನೀಯವಾಗಿದೆ. ವ್ಯಸನ ಮುಕ್ತ ಸಮಾಜರೂಪಿಸಲು ಹೋರಾಟ ಮಾಡುವಾಗ ಸಹಜವಾಗಿ ಸಮಾಜ ದಿಂದ ಅನೇಕ ರೀತಿಯಲ್ಲಿ ವಿರೋಧಗಳು ವ್ಯಕ್ತವಾಗುತ್ತವೆ. ದೃಢ ಸಂಕಲ್ಪದಿಂದ ಮಾತ್ರ ವ್ಯಸನ ಮುಕ್ತವಾದ ಆರೋಗ್ಯಪೂರ್ಣ ಸಮಾಜರೂಪಿಸಲು ಸಾಧ್ಯ ಎಂದು ಹೇಳಿದರು. ಯಲಬುರ್ಗಾದ ಪಿಎಸ್ಐ ಹನುಮಂತಪ್ಪ ಮುಗ್ಗಳ್ಳಿ ಗಾಂಧಿ ಸ್ಮೃತಿ ಹಾಗೂ ವ್ಯಸನ ಮುಕ್ತ ಸಾಧಕರನ್ನು ಅಭಿನಂದಿಸಿ ಮಾತನಾಡಿದರು. ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ, ರಾಮರಾಜ್ಯದಕಲ್ಪನೆ, ಸ್ವಚ್ಛತೆ ಮೊದಲಾದ ವಿಚಾರಗಳನ್ನು ಹೇಳುವುದು ಸುಲಭ.ಆದರೆ ಆಚರಣೆ ಮಾಡಿ ಅನುಷ್ಠಾನಕ್ಕೆ ತರುವುದು ಹರಸಾಹಸದ ಕೆಲಸವಾಗಿದೆ. ದುಶ್ಚಟಕ್ಕೆ ಬಲಿಯಾದವರು ಚಟದಿಂದ ಮುಕ್ತರಾಗಲು ಬಹಳ ಕಷ್ಟವಾಗುತ್ತದೆ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಅನೇಕ ಕುಟುಂಬಗಳಿಗೆ ಹೊಸ ಬೆಳಕನ್ನು ನೀಡಿ ಸಾರ್ಥಕಜೀವನ ನಡೆಸಲು ಪ್ರೋತ್ಸಾಹ ನೀಡಿದ್ದಾರೆ . ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಗಾಂಧೀಜಿಯವರ ವಿಚಾರಗಳು ಹಾಗೂ ತತ್ವಾದರ್ಶಗಳ ಬಗ್ಯೆ ಮಾತನಾಡುವುದಕ್ಕಿಂತಲೂ ಜೀವನದಲ್ಲಿ ಅನುಷ್ಠಾನಗೊಳಿಸಿದಲ್ಲಿ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯಬಹುದು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷತೆ ವಹಿಸಿದರು ಶ್ರೀ ಭಾರತಿ ಶಿವಾನಂದ ಅರಬರ. ಅವರು ಉಪಾಧ್ಯಕ್ಷರಾದ ಚಂದ್ರ ಬಾಯಿ ಕುದುರಿ. ಮುಖ್ಯ ಅತಿಥಿಗಳಾಗಿ ಸದಾನಂದ ಬಂಗೇರ ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕರು ಕೊಪ್ಪಳ. ಚಂದ್ರಪ್ಪ ಕಳಕಪ್ಪ ದೇಸಾಯಿ ತ್ರಿಲಿಂಗೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರು. ಸಂಗಣ್ಣ ಟೆಂಗಿನಕಾಯಿ ಜಿಲ್ಲಾ ಜನಜಾಗೃತಿ ವೇದಿಕೆ ಕೊಪ್ಪಳ. ವೀರಣ್ಣ ನಿಂಗೋಜಿ ಶರಣಪ್ಪ ದಾನಕೈ ಜನ ಜಾಗೃತ ವೇದಿಕೆ ಕೊಪ್ಪಳ. ಶಿವಶರಣಪ್ಪ ಬಳಿಗಾರ ಬಸವ ಜ್ಯೋತಿ ಶಾಲೆಯ ಅಧ್ಯಕ್ಷರು. ಸತೀಶ್ ಟಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಯಲಬುರ್ಗಾ ತಾಲೂಕು ಮತ್ತು ಮೊದಲ ಗ್ರಾಮದ ಎಲ್ಲಾ ಗಣ್ಯಮಾನ್ಯರು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ – ಹುಸೇನ್ ಮೋತೆಖಾನ್