ರಾಜ್ಯಾದ್ಯಂತ ನಗರ, ಬೀದಿಗಳನ್ನು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯ ರಕ್ಷಿಸುವ, ಪೌರಕಾರ್ಮಿಕರ  ಜೀವನದ ಇತಿಹಾಸ ಕೆಣಕಿದರೆ ಹಲವು ಖೇದಕರ ಸಂಗತಿಗಳು ದೊರೆಯುತ್ತವೆ….

Spread the love

ರಾಜ್ಯಾದ್ಯಂತ ನಗರ, ಬೀದಿಗಳನ್ನು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯ ರಕ್ಷಿಸುವ, ಪೌರಕಾರ್ಮಿಕರ  ಜೀವನದ ಇತಿಹಾಸ ಕೆಣಕಿದರೆ ಹಲವು ಖೇದಕರ ಸಂಗತಿಗಳು ದೊರೆಯುತ್ತವೆ….

ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯಿಸಿ  ಕೆಲಸ ಮಾಡುವ ಸಾವಿರಾರು ಪೌರಕಾರ್ಮಿಕರು, ಹಲವಾರು ಕಾಯ್ಲೆಗಳಿಗೆ ತುತ್ತಾಗಿ  ಮಧ್ಯೆ (50 ರೊಳಗಡೆ) ವಯಸ್ಸಿನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ- ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಇವರ ಆರೋಗ್ಯ ಮತ್ತು ಕುಟುಂಬ ರಕ್ಷಣೆ ವಿಷಯವನ್ನು ಗಂಭೀರವಾಗಿ ಪರಿಗಣಿಸದಿರುವುದು ದುಃಖದ ಸಂಗತಿ. ಸರ್ಕಾರಿ ಇಲಾಖೆಯ ಎಲ್ಲಾ ನೌಕರರಿಗೆ ವಾರದ ರಜಾ ಇದ್ದರೆ, ಈ ಕಾರ್ಮಿಕರಿಗೆ ರಜೆಯ ಭಾಗ್ಯವಿಲ್ಲ (ಹಲವಾರು ಹಕ್ಕುಗಳಿಂದ ವಂಚತಿರಾಗಿದ್ದಾರೆ) ಸಾಮಾನ್ಯವಾಗಿ ನಗರದ ಬೀದಿಗಳಲ್ಲಿ ಓಡಾಡುವ ಜನರು, ಚರಂಡಿ ಇತರೆ ದುರವಾಸನೆಯನ್ನು ಒಂದು ನಿಮಿಷ ಕೂಡ ಸಹಿಸಿಕೊಳ್ಳುವುದಿಲ್ಲ.ಇಡೀ ದಿನ  ದುರ್ನಾತದಲ್ಲಿ ಕೆಲಸ ಮಾಡುವ ಸಪಾಯಿಗಳನ್ನು, ಕೆಲವರು ಸಿಪಾಯಿಗಳಿಗೆ ಹೋಲಿಕೆ ಮಾಡುತ್ತಾರೆ. ಈ ಕೆಲಸಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆಗಾಗಿ ಕೆಲವು ಕಾರ್ಮಿಕರು ಮದ್ಯಪಾನದ ಮೊರೆ ಹೋಗಿ  ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ.  ಮದ್ಯ ವ್ಯಾಸನಿಗಳಾದ ಹಲವರು  ತಮ್ಮ   ಮಕ್ಕಳ ಶಿಕ್ಷಣ, ಪಾಲನೆ ಪೋಷಣೆ  ವಿಷಯದಲ್ಲಿ  ದಿವ್ಯ ನಿರ್ಲಕ್ಷ್ಯತೆ ಮಾಡುತ್ತಾರೆ.95 ರಷ್ಟು ಮಕ್ಕಳು ಉನ್ನತ್ನ  ಶಿಕ್ಷಣ  ಮತ್ತು ಒಳ್ಳೆಯ  ಬದುಕಿನ ಅವಕಾಶಗಳಿಂದ ವಂಚಿತರಾಗಿದ್ದಾರೆ. ಕೆಲವು ಮಕ್ಕಳಿಗೆ ಓದುವ ಅಭಿರುಚಿ ಇದ್ದರೂ ಮನೆಯ  ಪರಿಸರ ಅವರಿಗೆ  ತೊಂದರೆಯಾಗುತ್ತದೆ. ಆದರೂ ಕೆಲವು ಮಕ್ಕಳು  ಕೆಟ್ಟ ಪರಿಸರದಲ್ಲೂ ಒಳ್ಳೆಯ ಸಾಧನೆ ಮಾಡಿದ್ದಾರೆ. (ಇದು ಬೆರಳಣಿಕೆಗೆ ಸೀಮಿತ.) ಈ ಎಲ್ಲಾ ಕಾರಣಗಳಿಂದ  ಕಸ ಗೂಡಿಸುವವರ ಮಕ್ಕಳು, ಕಸಗೂಡಿಸುವ  ಕೆಲಸಕ್ಕೆ ಮೀಸಲು ಎನ್ನುವಂತಾಗಿದೆ.  ಕುಡುಕರ ಮಕ್ಕಳು ಕುಡಕರು ಎನ್ನುವ ಕೆಟ್ಟ ಪರಂಪರೆ ಹಲವು ಭಾಗಗಳಲ್ಲಿ ಮುಂದುವರೆದಿದೆ. ಪೌರಕಾರ್ಮಿಕರನ್ನು, ಅವರ ಕುಟುಂಬವನ್ನು ಸಾಂಸ್ಕೃತಿಕವಾಗಿ ಮೇಲೆತ್ತುವ,  ಮಕ್ಕಳಿಗೆ ಹುನ್ನತ ಶಿಕ್ಷಣ ನೀಡುವ ಕಾರ್ಯಕ್ಕೆ ಸರ್ಕಾರ ಪ್ರಮುಖ ಆದ್ಯತೆ ಕೊಡಬೇಕಾಗಿದೆ. ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ವಿಶೇಷ ಅನುದಾನ ಮೀಸಲಿಟ್ಟು ಕಾರ್ಮಿಕರ ಕುಟುಂಬಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಬೇಕಾಗಿದೆ. ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆಗಳನ್ನು  ಕೊಡಬೇಕು. ಸಿಂಧನೂರ ಸುಕಾಲಪೇಟೆಯ ಅಂಬೇಡ್ಕರ್ ಯುವಕ ಮಂಡಳಿ ಮತ್ತು ಅಂಬೇಡ್ಕರ್ ಸೇವಾ ಟ್ರಸ್ಟ್ ನ ನೇತೃತ್ವದಲ್ಲಿ,  ಪೌರಕಾರ್ಮಿಕರನ್ನು ಮತ್ತು ಅವರ ಕುಟುಂಬದವರನ್ನು ಜಾಗೃತ ಗೊಳಿಸುವ  ಉದ್ದೇಶದಿಂದ ಅಕ್ಟೋಬರ್ 2,3-2021 ರಂದು ಕಾರ್ಯಕ್ರಮ ನಡೆಸಿ… ಯಶಸ್ವಿಗೊಳಿಸಿದ್ದು ತುಂಬಾ ಶ್ಲಾಘನೀಯ. ಡಿ.ಹೆಚ್.ಪೂಜಾರ. ವರದಿ – ಸಂಪಾದಕೀಯ

Leave a Reply

Your email address will not be published. Required fields are marked *