ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಣೆ ಮಾಡಿದ ಶಿವರಾಮೇಗೌಡರ ಕರವೇ ಕಾರ್ಯಕರ್ತರು .

Spread the love

ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಣೆ ಮಾಡಿದ ಶಿವರಾಮೇಗೌಡರ ಕರವೇ ಕಾರ್ಯಕರ್ತರು .

ಆರೋಗ್ಯ ಇಲಾಖೆ ಸಹಕಾರದೊಂದಿಗೆ  ಆಟೋರಾಜ ಫೌಂಡೇಶನ್  ಸೇರಿಸಿ ಉತ್ತಮ ಚಿಕಿತ್ಸೆ ಕೊಡಿಸಲು ನೆರವಾದ ಕರವೇ ಕಾರ್ಯಕರ್ತರು.. ದಿನಾಂಕ : 10/10/2021 ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಗೆ ಸೇರಿದ ಕೆಳಗೆ ಕಾಗಡಿಕಟ್ಟೆಯಲ್ಲಿ ಸುಮಾರು 60 ವರ್ಷದ ಅನಾಥ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ತಿರುಗಾಡುತ್ತಾ ಮೈಮೇಲೆ ಪ್ರಜ್ಞೆ ಇಲ್ಲದ ರೀತಿಯಲ್ಲಿ ತಿರುಗಾಡುತ್ತಿದ್ದು ಸಾರ್ವಜನಿಕರು ಇದರಿಂದ ತೀವ್ರ ಮುಜುಗರ ಪಡುವಂತಾಗಿತ್ತು .ಹಾಗಾಗಿ ಕರವೇ ತಾಲ್ಲೂಕು ಅಧ್ಯಕ್ಷರಿಗೆ ಕಾಗಡಿಕಟ್ಟೆ ಗ್ರಾಮಸ್ಥರಿಂದ ಈ  ಮಹಿಳೆಯನ್ನು ಒಳ್ಳೆಯ ಆಶ್ರಮಕ್ಕೆ ಸೇರಿಸಿ  ಚಿಕಿತ್ಸೆ ಕೊಡಿಸಬೇಕೆಂದು ಗ್ರಾಮಸ್ಥರು ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ  ಫ್ರಾನ್ಸಿಸ್ ಡಿಸೋಜ ರವರಿಗೆ ಫೋನಿನ ಮುಖಾಂತರ ಮನವಿ ಬಂದಿತ್ತು .ಈ ಮನವಿಗೆ ಸ್ಪಂದಿಸದ ಕರವೇ ಕಾರ್ಯಕರ್ತರು ದೊಡ್ಡಮಳ್ತೆ ಗ್ರಾಮ ಪಂಚಾಯತಿಗೆ ತಿಳಿಸಿ  ಪಂಚಾಯಿತಿ ಅವರಿಂದ ಇವರಿಗೆ ಯಾರೂ  ಎಲ್ಲಾ ಅನಾಥ ಎಂದು 1ಲೆಟರ್ ತೆಗೆದುಕೊಂಡು ಹೋಗಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ಕೊಟ್ಟು  ಇದೆ ಠಾಣೆಯಿಂದ ಮಡಿಕೇರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 1ಲೆಟರನ್ನು ಮಾಡಿಸಿ ಕರವೇ ಕಾರ್ಯಕರ್ತರು ಮಡಿಕೇರಿಗೆ ಖುದ್ದಾಗಿ ಹೋಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಎಲ್ಲಾ ದಾಖಲೆಗಳನ್ನು ಕೊಟ್ಟು ಇವರನ್ನು ಒಳ್ಳೆಯ ಆಶ್ರಮಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕೆಂದು ತಿಳಿಸಿದ ಮೇರೆಗೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಈ ಮಾನಸಿಕ ಅಸ್ವಸ್ಥ ಮಹಿಳೆಯ ಕೊರೋನಾ ಟೆಸ್ಟ್ ಮಾಡಿಸಬೇಕೆಂದು ಕರವೇ ಕಾರ್ಯಕರ್ತರರಲ್ಲಿ  ತಿಳಿಸಿದ ಮೇರೆಗೆ ಕರವೇ ಕಾರ್ಯಕರ್ತರು ಕೊರೋನಾ ಸಂಚಾರಿ ವಾಹನದ ಆರೋಗ್ಯ ಇಲಾಖೆ ಸಿಬ್ಬಂದಿಯಾದ ಮಹೇಶ್ ರವರು ನಾವು ಕರವೇ ಕಾರ್ಯಕರ್ತರು  ಸಂಪರ್ಕಿಸಿದಾಗ ಇವರು ಬಂದು ಈ ಮಾನಸಿಕ ಅಸ್ವಸ್ಥ ಮಹಿಳೆಗೆ ಕೊರೊನ ಟೆಸ್ಟ್ ಸಹ ಮಾಡಿಕೊಟ್ಟಿರುತ್ತಾರೆ .  ದಿನಾಂಕ 10/10/2021 ರಂದು ಬೆಳಿಗ್ಗೆ 7ಗಂಟೆಗೆ  ಆರೋಗ್ಯ ಕುಟುಂಬ ಕಲ್ಯಾಣ  ಇಲಾಖೆಯ ಸಿಬ್ಬಂದಿಗಳಾದ ಶಿವಕುಮಾರ್ ರವರು ಮತ್ತು ತಂಡ ಆಂಬ್ಯುಲೆನ್ಸ್ ನಲ್ಲಿ ಬಂದು  ಮಾನಸಿಕ ಅಸ್ವಸ್ಥ ಮಹಿಳೆಯನ್ನು ಬೆಂಗಳೂರು ಆಟೋ ರಾಜ ಫೌಂಡೇಶನ್ ಗೆ ಸೇರಿಸಲು ಯಶಸ್ವಿಯಾದರು .ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಿಗೆ ಸಹಾಯ ಮಾಡಿದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯವರಿಗೆ ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ವಿಶ್ವ ನಮ್ಮ ಜೊತೆ ಎಲ್ಲ ಸಮಯದಲ್ಲೂ ನಿಂತು ನಮಗೆ ಸಹಕಾರ ನೀಡಿದ ವಿಶ್ವ ರವರಿಗೆ  ಅವರಿಗೆ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದಗಳು. ಹಾಗೆಯೇ ಕೊರೋನಾ ಟೆಸ್ಟ್ ಮಾಡಿ ಕೊಟ್ಟಂತಹ ಆರೋಗ್ಯ ಇಲಾಖೆ ಸಿಬ್ಬಂದಿಯಾದ ಮಹೇಶ್ ಅವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ . ಹಾಗೆಯೇ ಸೋಮವಾರಪೇಟೆ ಠಾಣಾಧಿಕಾರಿ ಮತ್ತು ಸಿಬ್ಬಂದಿ ಗಳಿಗೆ ಧನ್ಯವಾದಗಳು ಅರ್ಪಿಸುತ್ತೇನೆ .ಹಾಗೆಯೇ ಕೊಡಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ  ಮತ್ತು ಸಿಬ್ಬಂದಿಗಳಿಗೆ ಮತ್ತು ಆಟೋರಾಜ ಫೌಂಡೇಶನ್ ಗೆ ಈ ಮಾನಸಿಕ ಅಸ್ವಸ್ಥ ಮಹಿಳೆ  ಕರೆದುಕೊಂಡು ಹೋದ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ  ಶಿವಕುಮಾರ್ ರವರಿಗೆ ಧನ್ಯವಾದಗಳು ಅರ್ಪಿಸುತ್ತೇವೆ  .ಹಾಗೆಯೇ ಈ ಅಜ್ಜಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಆಟೋರಾಜ ಫೌಂಡೇಶನ್ ನವರು ಮುಂದೆ ಬಂದಿದ್ದು ಇವರಿಗೂ  ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ .ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ರಾದ ಫ್ರಾನ್ಸಿಸ್ ಡಿಸೋಜಾ ಮತ್ತು ರಾಮನಳ್ಳಿ ಕರವೇ ಘಟಕದ ಅಧ್ಯಕ್ಷರಾದ ಹರೀಶ್ ರವರು ಮತ್ತು ಕರವೇ ಕಾರ್ಯಕರ್ತರಾದ ರಂಜಿತ ರವರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ  ಶಿವಕುಮಾರರವರು ಉಪಸ್ಥಿತರಿದ್ದರು .. 9449255831 ಮತ್ತು 9686095831

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *