ಅಲ್ಲಾಪೂರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಇಡೀ ಜಿಲ್ಲೆಯಲ್ಲಿ ಮಾದರಿ ಗೊಡೆಗಳ ಮೇಲೆ ಮೂಡಿತು ಜ್ಞಾನ ಪೀಠ ಪುರಸ್ಕ್ರತರ ಭಾವಚಿತ್ರಗಳು…..
ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದೆ. ಇದರ ಸಾಹಿತ್ಯದ ರುಚಿಯನ್ನು ಉಣ ಬಡಿಸುತ್ತಿದೆ. ಹೌದು. ಧಾರವಾಡ ಜಿಲ್ಲೆಯ ಅಲ್ಲಾಪೂರ ಗ್ರಾಮದಲ್ಲಿ ಮಾದರಿ ಶುದ್ಧ ಕುಡಿಯುವ ನೀರಿನ ಘಟಕ್ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರವನ್ನು ಬಿಡಿಸುವ ಮೂಲಕ ವಿನೂತನ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ. ಇವತ್ತು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಂ ಕಾರಂತ ಅವರ ಜನುಮ ದಿನ ಇರುವುದರಿಂದ ಅವರಿಗೂ ಸಹ ಗೌರವ ನಮನವನ್ನು ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರಡ್ಡೆರ ಸಲ್ಲಿಸಿದ್ದಾರೆ. ಗ್ರಾಮದ ಗೊಡೆಗಳ ಮೇಲೆ ಈ ರೀತಿ ೮ ಜ್ಞಾನ ಪೀಠ ಪುರಸ್ಕೃತರ ಭಾವಚಿತ್ರ ಮತ್ತು ಗ್ರಾಮದ ಸುಂದರ ಚಿತ್ರವನ್ನು ಬಿಡಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮೋದಲ ಬಾರಿಗೆ ಶುದ್ದ ಕುಡಿಯುವ ನೀರಿನ ಘಟಕದ ಮೇಲೆ ಜ್ಞಾನ ಪೀಠ ಪುರಸ್ಕೃತರ ಭಾವ ಚಿತ್ರವನ್ನು ಬಿಡಿಸಿದ್ದಾರೆ. ರಾತ್ರಿ ಹಗಲು ಎನ್ನದೇ ಗ್ರಾಮ ಪಂಚಾಯತಿ ಸದಸ್ಯ ಮತ್ತು ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ರಡ್ಡೇರ ಮಾಡಿಸಿದ ಕಾರ್ಯ ಗೋಡೆಗಳ ಮೇಲೆ ಭಾವಚಿತ್ರ ನೋಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ವರದಿ – ಸಂಗಮೇಶ ಎನ್ ಜವಾದಿ