ತಂದೆಯ ಹೇಗಲ ಮೇಲೆ ಮಕ್ಕಳು ಕುಳಿತ್ತಿಲ್ಲ ಅಂದರೆ ಕಾಣೋದಿಲ್ಲ ಗದ್ದೇರ ಹಟ್ಟಿ ಶಾಲೆ…..ಕನ್ನಾಳದಿಂದ ಗದ್ದೇರಹಟ್ಟಿ ರಸ್ತೆ ಕೆಟ್ಟ ಅವ್ಯವಸ್ಥೆ,,,,,
ತಾವರಗೇರಾ ಪಟ್ಟಣದ ಹತ್ತಿರ ಬರುವ ಸಂಗನಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಕನ್ನಾಳ ಗ್ರಾಮದಿಂದ ಗದ್ದೇರಹಟ್ಟಿ ರಸ್ತೆ ಕೆಟ್ಟ ಅವ್ಯವಸ್ಥೆ,,,,, ಇಲ್ಲಿ ಬರುವ ಬಂಡಿ ಜಾಡಿನಲ್ಲಿ ಶಾಲಾ ಮಕ್ಕಳು ಹಾಗೂ ಪಾಲಕರು ಗದ್ದೇರಹಟ್ಟಿ ದಾರಿ ಮಧ್ಯದಲ್ಲಿ. ಈಜುತ್ತಾ ಬಂದು ಗದ್ದೇರ ಹಟ್ಟಿ ಗ್ರಾಮದ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ತಾವರಗೇರಾ ಪಟ್ಟಣದ ವ್ಯಾಪ್ತಿಯಲ್ಲಿ ಬರುವ 17 ನೇ ವಾರ್ಡಿನ ಕುಟುಂಬಸ್ಥರು ಕನ್ನಾಳ ಗ್ರಾಮದ ಹತ್ತಿರಾ ತಮ್ಮ ಹೋಲದಲ್ಲಿ ಜೀವನ ಸಾಗಿಸುತ್ತಿದ್ದು, ಇವರು ಪ್ರತಿ ನಿತ್ಯ ತಮ್ಮ ಮಕ್ಕಳನ್ನು ಶಾಲೆಗೆ ಕರೇದುಕೊಂಡು ಗದ್ದೇರ ಹಟ್ಟಿ ಗ್ರಾಮಕ್ಕೆ ಬರುವ ಬಂಡಿ ಜಾಡಿನ ರಸ್ತೆ ಇಡಿದು ಸಾಗಬೇಕಾದರೆ ಈ ಅನುಭವ ಪಡೆದುಕೊಂಡು ಸಾಗಲೇಬೇಕು. ಇಲ್ಲಿ ಸಂಪೂರ್ಣ ಸಂಗನಾಳ ಗ್ರಾಮ ಪಂಚಾಯತಿಯ ನಿರ್ಲಕ್ಷವೆ ಕಾರಣ ಇದಾಗಿದೆ. ನಿನ್ನೇ ಆದ ಮಳೆಯ ಒಡೆತಕ್ಕೆ ನಡು ರಸ್ತೆಯಲಿ ನೀರು ತುಂಬಿದ್ದು, ಈ ನಡು ನೀರಿನಲ್ಲಿಯೆ ಜನರು ಹಾಗೂ ವಿದ್ಯಾರ್ಥಿಗಳು ಈಜುತ್ತಾ ಗದ್ದೇರಹಟ್ಟಿ ಗ್ರಾಮಕ್ಕೆ ಸಾಗಬೇಕಾಗಿದೆ. ತಾವರಗೇರಾ ಪಟ್ಟಣದಿಂದ ಸುಮಾರು 3 ಕೀ ಮಿ ದೂರವಿರುವ ಈ ಗದ್ದೇರಹಟ್ಟಿ ಗ್ರಾಮವು ಪಟ್ಟಣದ 17 ನೇ ವಾರ್ಡ್ ಆಗಿ ಕೂಡ ಮಾರ್ಪಟ್ಟಿದೆ. ಆದರೂ ಕೂಡಾ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದಿರುವುದು ಸಂಭಂದಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಬೇಜವಾಬ್ದಾರಿತನವೆ ಮೂಲ ಕಾರಣವಾಗಿದೆ. ಪಟ್ಟಣದ ಗದ್ದೇರಹಟ್ಟಿ ಗ್ರಾಮದಲ್ಲಿ ಯಾದವ್ (ಗೊಲ್ಲರ್) ಸಮಾಜದ ಸುಮಾರು 250 ರಿಂದ 300 ಜನರು ವಾಸಮಾಡುತ್ತಿದ್ದು. ದಿನಾಲೂ ಸಾರ್ವಜನಿಕರು ತಮ್ಮ ತಮ್ಮ ದಿನನಿತ್ಯದ ಜೀವನದ ಬದುಕು ಕಟ್ಟಿಕೊಳ್ಳಲು ಹಾಗೂ ದಿನಸಿ ಪದಾರ್ಥ ತರಲು ಹಾಗೂ ಕೂಲಿ ಅರಸಿ ಪಟ್ಟಣಕ್ಕೆ ಬರಬೇಕಾದರೆ ಅದೆ ನೀರಲ್ಲಿ ಬರಬೇಕಾದ ಅನಿವಾರ್ಯತೆ ಇದೆ. ಎಂದು ಗ್ರಾಮಸ್ಥರು ಹೇಳುತ್ತಾರೆ. ಅಲ್ಲಿ ಒಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ( ಗದ್ದೇರಹಟ್ಟಿ ಗ್ರಾಮದ ಗೊಲ್ಲರ ಸಮಾಜದ ಕುಟುಂಬವು ಕನ್ನಾಳ ಗ್ರಾಮದ ಹತ್ತಿರ ಬರುವ ಹೋಲದಲ್ಲಿ ಜೀವನ ಸಾಗಿಸುತ್ತಿದ್ದು. ಜೊತೆಗೆ ಇಲ್ಲಿ ಬರುವ ಕನ್ನಾಳ ಸೀಮಾದ ಜನರು ಹಾಗೂ ತಾವರಗೇರಾ ಪಟ್ಟಣದ ಸೀಮಾ ವ್ಯಾಪ್ತಿಯ ಜನರು ದಿನ ನಿತ್ಯ ಯುದ್ದ ಮಾಡುವ ಪ್ರಸಂಗವಿದು. ಸದ್ಯ ಗದ್ದೇರ ಹಟ್ಟಿಯ ಕುಟುಂಬದವರು ತಮ್ಮ ಹೋಲದಿಂದ ಈ ಬಂಡಿ ಜಾಡಿನ ರಸ್ತೆ ಇಡಿದು ಮಕ್ಕಳನ್ನು ಗದ್ದೇರ ಹಟ್ಟಿಯ ಶಾಲೆಗೆ ಬರಬೇಕಾದರೆ ಈ ನಡು ನೀರಿನಲ್ಲಿ ನಡೆದುಕೊಂಡು ಶಾಲೆಗೆ ಹೋಗಬೇಕು. ಪುನಃಹ ವಿದ್ಯಾರ್ಥಿಗಳು ಶಾಲೆ ಮುಗಿಸಿಕೊಂಡು ಬರುವಾಗಲು ಇದೇ ನಡು ನೀರಿನಲ್ಲಿ ಬರಬೇಕು. ಸದ್ಯ ಕುಟುಂಬದ ಸದಸ್ಯರಾದ ಮಹೇಶ ದಾಸನೂರು ಇವರು ತಮ್ಮ ಮಕ್ಕಳನ್ನು ಹೊತ್ತುಕೊಂಡು ನಡು ನೀರಿನಲ್ಲಿ ಹೋಗುವ ದೃಶ್ಯ ಒಂದು ಕ್ಷಣ ನೋಡಿದರೆ. ಮೈ ಜಲ್ ಎನಿಸುತ್ತೆ. ಗ್ರಾಮದ ಸಾರ್ವಜನಿಕರು ಪಾಡು ಸರಿಯಾದ ರಸ್ತೆ ಸಂಪರ್ಕವಿಲ್ಲದೆ ನರಕಯಾತನೇ ಅನುಭವಿಸುವಂತ್ತಾಗಿದೆ. ಈ ಪ್ರದೇಶ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ. ಯಾವುದೇ ಕಟ್ಟಡ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಯಾಗಿದೆ ಎಂದು ಗ್ರಾಮದ ಮಹೇಶ ದಾಸನೂರ ರವರು ಹಾಗೂ ರಮೇಶ ಗದ್ದಿಯವರು ಪತ್ರಿಕಾ ಮುಖಾಂತರ ಅಗ್ರಹಿಸಿದ್ದಾರೆ. ಈ ರಸ್ತೆಯಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್, ಮಿನಿ ಸೇತುವೆ ನಿರ್ಮಿಸಬೇಕಿರುವುದು ಅಗತ್ಯ. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಹಳ್ಳದ ಹಿನ್ನೀರು ಬಂದಾಗೊಮ್ಮೆ ಶಾಲೆಗೆ ಗೈರಾಗುವುದು, ಅನಾರೋಗ್ಯ ಸಂದರ್ಭದಲ್ಲಿ ಆಸ್ಪತ್ರೆ ಹೋಗುವುದು ಕಷ್ಟವಾಗುತ್ತಿದೆ. ಈ ಸಮಸ್ಯೆಗೆ ಜಿಲ್ಲಾಡಳಿತ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ..ಜೊತೆಗೆ ಈ ಸಂಭಂದ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಹೆಚ್ಚೆತ್ತು ಶಿಘ್ರದಲ್ಲಿ ಗ್ರಾಮಕ್ಕೆ ಸಮರ್ಪಕ ವಾಗಿ ರಸ್ತೆ ಕಲ್ಪಿಸಬೆಕೆಂದು ಪತ್ರಿಕೆ ಮನವಿ.
ವರದಿ – ಉಪ-ಸಂಪಾದಕೀಯ