ಕಲಾವಿದರನ್ನ ಪ್ರೋತ್ಸಾಯಿಸಿ ಸಂಪೋಷಿಸಬೇಕು–ಪತ್ರಕರ್ತ ಕೆ.ಎಸ್. ಮುರುಳೀಧರ ಶೆಟ್ರು…….
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀವೆಂಕಟೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ,ಶ್ರೀಲಕ್ಷ್ಮೀನಾರಾಯಣ ಜನರಲ್ ಮತ್ತು ಬುಕ್ ಸ್ಟಾಲ್ ಗೆವಬಂದ ಈ ಅಪರೂಪದ ಅತಿಥಿಗಳು ತಮ್ಮ ಕಲೆಯನ್ನ ಅನಾವರಣಗೊಳಿಸಿದರು. ಹೊಟ್ಟೆಹೊರೆಯಲು ಕಲೆಯನ್ನ ಕಲಿಯೋರು,ಪಾರ್ಯಂಪಾರಿಕವಾಗಿ ತಮ್ಮ ಕುಲಕಸಬುನ್ನಾಗಿಸಿಕೊಂಡಿರುವ ಇವರಿಗೆ ಕಲೆಯ ಆರಾಧ್ಯ ದೇವವಾಗಿದೆ.ಕಲೆಯೇ ಕುಲ ಕಸುಬಿನಿಂದಲೇ ತಮ್ಮ ಹಾಗೂ ತಮ್ಮನ್ನ ನಂಬಿರುವವರ ಮೂರೊತ್ತು ಹೊಟ್ಟೆ ತುಂಬಿಸಿಕೊಳ್ಳೋ ಕಲಾವಿದರಾಗಿದ್ದಾರೆ. ಕಾರಣ ಯಾರೂ ಇಂತಹ ಕಲಾವಿದರನ್ನ ಕೀಳಾಗಿ ನೋಡಬಾರದು,ಬದಲಾಗಿ ತಮ್ಮ ಶಕ್ತಾನುಸಾರ ಅವರಿಗೆ ನೆರವನ್ನು ನೀಡಿ ಕಲೆಯನ್ನ ಗೌರವಿಸಬೇಕೆಂದು ಪತ್ರಕರ್ತ ಹಾಗೂ ದಿನ ಪತ್ರಿಕೆಗಳ ವಿತರಕರಾದ ಕೆ.ಎಸ್.ಮುರುಳೀಧರ ಶೆಟ್ರು ಕೋರಿದ್ದಾರೆ.ಇವರಲ್ಲಿರುವ ಕೆಲೆಗೆ ಬೆಲೆ ಕಟ್ಟಲಸಾಧ್ಯ ಎಂಬುದಂತು ಖಟು ಸತ್ಯ ಎಂದರು.ಅಂಗಡಿ ಮಾಲೀಕ ವೆಂಕಟೇಶ ಶೆಟ್ರು ಪತ್ರಿಕಾ ವಿತರಕ ಹಾಗೂ ಪತ್ರಕರ್ತರ ಕೆ.ಎಸ್.ಮುರುಳಿಧರಶೆಟ್ರು ಅವರನ್ನು ಸತ್ಕರಿಸಿದರು,ನಂತರ ಅವರಿಗೆ ಗೌರವ ಧನ ನೀಡಿ ಕಲೆಯನ್ನು ಪ್ರೋತ್ಸಾಹಿಸಿ ಕಲಾವಿದರನ್ನು ಸಂಪೋಷಿಸುವಂತೆ ನಾಗರೀಕರಲ್ಲಿ ಅವರು ಕೋರಿದರು. ಈ ಅಪರೂಪದ ಕಲಾವಿದರು ತಮ್ಮ ಅಂಗಡಿಗೆ ಅಂಗಳಕ್ಕೆ ಬಂದು ಅವರ ಕಲೆಯನ್ನು ಪ್ರಸ್ತುತ ಪಡಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428