ದಲಿತ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಪೆಟ್ರೋಲ್ ಸುರಿದು ಕೊಲೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ ಡಾ|| ಎನ್.ಮೂರ್ತಿ ಸ್ಥಾಪಿತ ಸಮಿತಿಯಿಂದ ಮನವಿ…
ಚೌಡೇಶ್ವರಾಳ ಗ್ರಾಮದ ದಲಿತ ಮಹಿಳೆ ಮೇಲೆ ಅತ್ಯಾಚಾರ ಪೆಟ್ರೋಲ್ ಸುರಿದು ಕೊಲೆ ಗಬ್ಬೂರು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ ಡಾ|| ಎನ್.ಮೂರ್ತಿ ಸ್ಥಾಪಿತ ಸಮಿತಿ ಯಿಂದ ಉಪತಹಶೀಲ್ದಾರರು ಕಾರ್ಯಾಲಯ ಗಬ್ಬೂರು ಇವರ ಮುಖಾಂತರ ಗೌರವಾನ್ವಿತ ರಾಜ್ಯಪಾಲರು ಕರ್ನಾಟಕ ಸರಕಾರ ಬೆಂಗಳೂರು ಇವರಿಗೆ ಕಳುಹಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು. ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ಚೌಡೇಶ್ವರಹಾಳ ಗ್ರಾಮದಲ್ಲಿ ದಲಿತ ಮಹಿಳೆಯ ಮೇಲೆ ಬಲತ್ಕಾರ ಮಾಡಲು ಯತ್ನಿಸಿದರು ಅದನ್ನು ತಿರಸ್ಕರಿಸಿದ ಮಹಿಳೆಯನ್ನು ಅಕ್ರಮಕೂಟ ಕಟ್ಟಿಕೊಂಡ ಆಕೆಯನ್ನು ದೌರ್ಜನ್ಯದಿಂದ ಬಲತ್ಕಾರ ಮಾಡಿ ಆಕೆಯ ಮೇಲೆ ಪೆಟ್ರೋಲ್ ಸುರುವಿ ಬೆಂಕಿ ಹಚ್ಚಿದರು ಈ ರೀತಿಯಾಗಿ ಘಟನೆ ಸಂಭದಿಸಿದ್ದು 9 ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಮತ್ತು ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ರೇಣುಕಾಳ ಮೇಲೆ ದೇವದಾಸಿ ಎಂದು ಸುಳ್ಳು ಹೇಳಿಸಿ ನಿರಾಪರಾಧಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು ನಿಜವಾದ ಆರೋಪಿಗಳಾದ ನಾಗರಾಳ ದುರುಗಪ್ಪ ಸುರುಪುರ ತಾಲೂಕು , ಭೀಮಪ್ಪ ಇನ್ನಿತರ ಆರು ಜನರು ಸೇರಿ ಆಕೆಗೆ ದೈಹಿಕ ಹಿಂಸೆ ,ಮಾನಸಿಕ ಹಿಂಸೆ ನೀಡಿ ಆಕೆಗೆ ಅತ್ಯಾಚಾರ ಮಾಡಿದ್ದು ಇನ್ನೂಳಿದ 5 ಜನ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ರಾಜ್ಯದಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದನ್ನು ತಡೆಯಲು ವಿಶೇಷ ಕಾನೂನು ರಚಿಸಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಂಡು ಎಲ್ಲಿ ಅತ್ಯಾಚಾರ ಘಟನೆ ನಡೆಯುತ್ತದೆ ತನಿಖೆ ಮಾಡದೆ ಅಲ್ಲೆ ಕಾನೂನಿನ ಶಿಕ್ಷೆ ಒದಗಿಸಬೇಕು ಎಂದು ಗಬ್ಬೂರು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ ಡಾ|| ಎನ್.ಮೂರ್ತಿ ಸ್ಥಾಪಿತ ಸಮಿತಿ ಗಬ್ಬೂರು. ಈ ಸಂಘಟನೆಯಲ್ಲಿ ಗುರುರಾಜ ಮಡಿವಾಳ ಮುಖಂಡರು ಗಬ್ಬೂರು. ರಾಜಪ್ಪ ಸಿಂಗ್ರಿ ತಾಲೂಕು ಉಪಾಧ್ಯಕ್ಷರು ಗಬ್ಬೂರು . ರಮೇಶ್ ಇಡಚೇಡಿ ಗ್ರಾಮ ಘಟಕ ಅಧ್ಯಕ್ಷರು ಗಬ್ಬೂರು. ರತ್ನಾಕರ ಶಾವಂತಗೇರಾ ದಲಿತ ಮುಖಂಡರು. ಮಲ್ಲಿಕಾರ್ಜುನ್ ಸಿಂಗ್ರಿ MRHS ಗಬ್ಬೂರು ಹೋಬಳಿ ಅಧ್ಯಕ್ಷರು. ಮಲ್ಲೇಶ ಸಿಂಗ್ರಿ ಷರ ಕಾರ್ಯದರ್ಶಿ . ಸಂಗಮ್ಮ ಶಿರೆಡ್ಡಿ ತಾ. ಮಹಿಳೆ ಅಧ್ಯಕ್ಷರು. ಮಲ್ಲೇಶ್ ಸಿಂಗ್ರಿ ಪ್ರಧಾನ ಕಾರ್ಯದರ್ಶಿ. ದಲಿತ ಮುಖಂಡರಾದ ಬಸವರಾಜ್ ಜಗ್ಲಿ . ಮಂಜುನಾಥ್ ಸಿಂಗ್ರಿ. ರಾಜ ಸಿಂಗ್ರಿ. ರಾಜಗೋಪಾಲ. ಹುಲಿಗೇಶ ಗಬ್ಬೂರು. ಸಂಗಯ್ಯ ರಾಮದುರ್ಗ. ರೆಡ್ಡಿ ರಾಮದುರ್ಗ. ಇನ್ನೂ ಗ್ರಾಮದ ಜನರು ಉಪಸ್ಥಿತರಿದ್ದರು.
ವರದಿ – ಉಪ-ಸಂಪಾದಕೀಯ