ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಕುಂಬಳಗುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಎಸ್.ಕೆ.ಪಿ ಗೊಲ್ಲರಹಟ್ಟಿ ನಿರ್ಲಕ್ಷ್ಯಕ್ಕೊಳಗಾಗಿದೆ.
-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಕುಂಬಳಗುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿ,ಎಸ್.ಕೆ.ಪಿ ಗೊಲ್ಲರಹಟ್ಟಿ ಗ್ರಾಮ ಈ ವರೆಗೂ ಮೂಲಭೂತ ಸೌಕರ್ಯಗಳನ್ನು ಕಂಡಿಲ್ಲ.ಚರಂಡಿಗಳನ್ನು ರಸ್ಥೆಗಳನ್ನು ಕಂಡಿಲ್ಲ ಬೀದಿ ದೀಪಗಳ ಪರಿಚಯ ಮೊದಲೇ ಇಲ್ಲ, ರಾತ್ರಿಯಾದರೆ ಗ್ರಾಮವೇ ಕಗ್ಗತ್ತಲಲ್ಲಿರುತ್ತೆ ಗುಡ್ಡ ಹಾಗೂ ಅರಣ್ಯದಂಚಿನ ಗ್ರಾಮವಾಗಿದ್ದು.ವನ್ಯ ಪ್ರಾಣಿ ವಿಷಜಂತುಗಳ ಹಾವಳಿಯ ಆತಂಕದ ಛಾಯೆಯಲ್ಲಿಯೇ ನಿದ್ರಿಸಬೇಕಾಗಿದೆ,ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದ್ದರಿಂದಾಗಿ ರಾತ್ರಿಹೊತ್ತಲ್ಲಿ ವಿಷಜಂತುಗಳಿಗೆ ಬಲಿಯಾಗುತ್ತಿದ್ದಾರೆ.ಶೀಘ್ರವೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯತ್ ಬೆಳಕಿನ ಸೌಲಭ್ಯವಾಗಬೇಕಿದೆ, ಸಂಬಂದಿಸಿದಂತೆ ಗ್ರಾಮ ಪಂಚಾಯ್ತಿ ಅಧಿಕಾರಿ ಶೀಘ್ರವೇ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಪ್ರಮುಖ ರಸ್ಥೆಗಳು ಕೆಸರು ಗುಂಡೆಗಳಾಗಿವೆ ಪಾದಾಚಾರಿಗಳು ನಡೆದಾಡಲು ಸರ್ಕಸ್ ಮಾಡಬೇಕಿದೆ,ಗ್ರಾಮದಲ್ಲಿ ನೈರ್ಮಲ್ಯತೆ ಕಾಣೆಯಾಗಿದ್ದು ಸಾಂಕ್ರಾಮಿಕ ರೋಗಗಳು ತಾಂಡವ ಆಡುತ್ತಿವೆ.ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ನೈರ್ಮಲ್ಯತೆ ಕಾಪಾಡುವಂತೆ ಕೋರಲಾಗಿದೆ,ಗ್ರಾಮ ಪಂಚಾಯ್ತಿ ಅಧಿಕಾರಿಗೆ ಈವರೆಗೂ ಗ್ರಾಮಕ್ಕೆ ಭೆಟ್ಟಿ ನೀಡಿಲ್ಲ ನಿರ್ಲಕ್ಷ್ಯ ತೋರಿದ್ದು.ಅವರ ನಿರ್ಲಕ್ಷ್ಯದ ವಿರುದ್ಧ ಜಿಲ್ಲಾಧಿಕಾರಿಗಳಲ್ಲಿ ಮತ್ತು ಜಿಲ್ಲಾ ಪಂಚಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ಗ್ರಾಮದ ಜನ ತಿಳಿಸಿದ್ದಾರೆ. ಗ್ರಾಮದ ಸದಸ್ಯರು ಹೆಸರಿಗೆ ಸದಸ್ಯರಾಗಿದ್ದು ಅವರು ಜನರ ಕೂಗು ಆಲಿಸುತ್ತಿಲ್ಲ,ಹಲವು ವರ್ಷಗಳಿಂದಲೂ ಗ್ರಾಮದ ದುಸ್ಥಿತಿ ಹೀಗಿದ್ದು ಸರಿಪಡಿಸಲಾರದೆ ಸದಸ್ಯರು ಹೊಣೆಗೇಡಿತನದಿಂದ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾಮವು ಸರ್ಕಾರದ ಕನಿಷ್ಠ ಸೌಲಭ್ಯಗಳಿಂದ ವಂಚಿತವಾಗಿದೆ,ಸಾಂಕ್ರಾಮಿಕ ರೋಗಗಳ ತಾಣವಾಗಿದೆ ಸಮಸ್ಯೆಗಳ ಗೂಡಾಗಿದೆ ಕಾರಣ, ತಾಲೂಕು ಪಂಚಾಯ್ತಿ ಅಧಿಕಾರಿ ಶೀಘ್ರವೇ ಗ್ರಾಮಕ್ಕೆ ಭೇಟ್ಟಿ ನೀಡಿ ಪರಿಶೀಲಿಸಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಎಸ್.ಕೆ.ಪಿ ಗೊಲ್ಲರಹಟ್ಟಿ ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428