ಪವಿತ್ರವಾದ ಧಾರ್ಮಿಕ ಹಿನ್ನೆಲೆಯ ನಿಮಿತ್ಯ ಯುಗಾದಿ ಹೋಳಿ ಹಬ್ಬ ಆಚರಣೆ ತಾವರಗೇರಾ ಪಟ್ಟಣದಲ್ಲಿ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಅಧ್ದೂರಿಯಾಗಿ ಯುವಕರು/ ಯಜಮಾನರು/ಮಕ್ಕಳ/ಮಹಿಳೆಯರು ಯುಗಾದಿಯ ನಿಮಿತ್ಯ ಮನ ಬಿಚ್ಚಿ ಹೋಳಿ ಹಬ್ಬವನ್ನ ಅಚರಿಸುತ್ತಿದ್ದಾರೆ. ವಿಶೇಷವಾಗಿ ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಬಣ್ಣಗಳ ಓಕುಳಿಯಾಟ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ. ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಪ್ರೀತಿ, ಸಂತಸ ಮತ್ತು ಸಹೋದರತ್ವದ ಪಾಠವನ್ನು ಬಣ್ಣಗಳ ಹಬ್ಬ ಹೋಳಿ ತಿಳಿಸುತ್ತದೆ. ಭಾರತದ ಉತ್ತರ ಭಾಗದಲ್ಲಿ ಹೋಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಬಣ್ಣಗಳ ಎರಚಾಟ ಸಂಭ್ರಮಿಸುವ ಪರಿ, ಸದ್ದು ಗದ್ದಲ ಹೀಗೆ ಹಬ್ಬದ ಸಂಭ್ರಮ ಉತ್ತರ ಭಾರತೀಯರಲ್ಲಿ ಎದ್ದು ಕಾಣುತ್ತದೆ. ಈ ಹೋಳಿ ಹಬ್ಬದ ಆಚರಣೆಗಳು ಮತ್ತು ಸಂಪ್ರದಾಯಗಳು ಹೋಳಿ ಹಬ್ಬಕ್ಕೆ ಪವಿತ್ರತೆಯನ್ನು ತಂದುಕೊಟ್ಟಿದೆ. ಜೀವನದಲ್ಲಿ ಸಂತೋಷವನ್ನು ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ ವಿಶೇಷ ಕಲಾಕೃತಿಯ ಆಕಾಶ ಬುಟ್ಟಿಗಳು ಹಾಗೂ ಮನೆಯಲ್ಲಿ ನೆಲೆಸುವ ಸಂಭ್ರಮದ ವಾತಾವರಣವು ವಿಶೇಷ ಸಂತೋಷವನ್ನು ನೀಡುತ್ತವೆ. ಬಣ್ಣದ ಓಕುಳಿಯಲ್ಲಿ ಭಾಗಿಯಾದ ತಾವರಗೇರಾ ಪಟ್ಟಣದ ಬುದ್ದಂ,ಶರಣಂ,ಗಚ್ಛಾಮಿ ಸೇವಾ ಸಂಘದ ಅದ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲುಗೊಂಡಿದ್ದರು, ವರಧಿ – ಸಂಪಾದಕೀಯ