ಕಂಪ್ಲಿಯನ್ನ ಬಳ್ಳಾರಿ ಉಪವಿಭಾಗಕ್ಕೆ ಸೇರ್ಪಡೆ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿದ – ಭಾರತೀಯ ದಲಿತ ಪ್ಯಾಂಥರ್…..
ಕಂಪ್ಲಿ:- ಅ13 ತಹಶೀಲ್ದಾರ್ ಕಚೇರಿಯಲ್ಲಿ ದಿನಾಂಕ 01-10-2021 ರಂದು ಕಂದಾಯ ಇಲಾಖೆಯು ವಿಜಯನಗರ ಜಿಲ್ಲೆಯ ಹೊಸಪೇಟೆ ಉಪವಿಭಾಗದಲ್ಲಿದ್ದ ಕಂಪ್ಲಿ ತಾಲೂಕನ್ನ ಬಳ್ಳಾರಿ ಉಪ ವಿಭಾಗಕ್ಕೆ ಮಾರ್ಪಾಡಿಸಲು ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನ ಖಂಡಿಸಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಕಂಪ್ಲಿ ತಹಸೀಲ್ದಾರರಾದ ಗೌಸಿಯಾ ಬೇಗಂರವರ ಮುಖಾಂತರ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ವಕೀಲ ಮೋಹನ್ ಕುಮಾರ್ ದಾನಪ್ಪ ನೇತೃತ್ವದಲ್ಲಿ ಆಕ್ಷೇಪಣೆಯನ್ನ ಸಲ್ಲಿಸಲಾಯಿತು! ನಂತರ ಮಾತನಾಡಿದ ವಕೀಲ ಮೋಹನ್ ಕುಮಾರ್ ದಾನಪ್ಪನವರು ಬಳ್ಳಾರಿ ಜಿಲ್ಲೆಯಲ್ಲಿದ್ದ ಹೊಸಪೇಟೆಯನ್ನ ಈ ಭಾಗದ ಪಶ್ಚಿಮ ತಾಲೂಕುಗಳ ಜನತೆಗೆ ಸುಲಭವಾದ ಆಡಳಿತ ನೀಡುವ ದೃಷ್ಟಿಯಿಂದ ನೂತನ ವಿಜಯನಗರ ಜಿಲ್ಲೆಯನ್ನಾಗಿ ರಚಿಸಿ ನೂತನ ಜಿಲ್ಲೆಯಿಂದ ಕಂಪ್ಲಿ ತಾಲೂಕನ್ನ ಕೈಬಿಟ್ಟು ಜಿಲ್ಲೆಯನ್ನು ಘೋಷಿಸಿದ್ದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿರುತ್ತದೆ, ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲಾಗಿದ್ದ ಕಂಪ್ಲಿಯು 1859 ರಿಂದ 2017 ರವರವರೆಗೆ ಹೊಸಪೇಟೆ ತಾಲೂಕು ವ್ಯಾಪ್ತಿಯ ಹೋಬಳಿಯಾಗಿ ಕಾರ್ಯನಿರ್ವಹಿಸಿದ ಹೆಮ್ಮೆಯ ಇತಿಹಾಸ ಹೊಂದಿರುವ ಕಂಪ್ಲಿಯು 2017 ರಲ್ಲಿ ನೂತನ ತಾಲೂಕಾಗಿದ್ದರು ನ್ಯಾಯಾಲಯ, ಕಂದಾಯ ವಿಭಾಗ ಕಚೇರಿ , ಪ್ರಾದೇಶಿಕ ಸಾರಿಗೆ ಕಚೇರಿ , ಮಾರ್ಕೆಟಿಂಗ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯು ಹಾಗೂ ಸರ್ಕಾರದ ಅನೇಕ ಕಛೇರಿಗಳು, ಶಿಕ್ಷಣ ಸಂಸ್ಥೆಗಳು , ಹೊಸಪೇಟೆಯಲ್ಲಿಯೇ ಇದ್ದು ಎಂದಿನಂತೆ ಕೆಲಸ ಕಾರ್ಯಗಳಿಗೆ ಹೊಸಪೇಟೆಯನ್ನೆ ಅವಲಂಬಿಸಿರುತ್ತಾರೆ, ಕಂಪ್ಲಿ ಮತ್ತು ಹೊಸಪೇಟೆಗೆ ಅಂದಿನಿಂದ ಪ್ರಸ್ತುತದವರೆಗೆ ಅವಿನಾಭಾವ ಸಂಬಂದ ಹೊಂದಿದ್ದು ಹೊಸಪೇಟೆಯು ಕಂಪ್ಲಿ ತಾಲೂಕಿನಿಂದ ಕೇವಲ 28 ಕೀಲೋ ಮೀಟರ್ ಸಮೀಪವಿದ್ದು ಕೇವಲ 30 ನಿಮಿಷಗಳಲ್ಲಿ ಸಂಚರಿಸುವ ಸಂಚಾರ ವ್ಯವಸ್ಥೆ ತುಂಬಾ ಅತ್ಯುತ್ತಮವಾಗಿದ್ದು ದಿನದ 24 ಗಂಟೆಯು ಸಂಚರಿಸಲು ಸಾರ್ವಜನಿಕರಿಗೆ ತುಂಬಾ ಅನುಕೂಲವಿರುತ್ತದೆ, ಈ ಭಾಗದ ಜನರಿಗೆ ಸರ್ಕಾರೀ ಸೇವೆ ಪಡೆಯಲು ಯಾವುದೇ ಹೊರೆಯಾಗುತ್ತಿರುವುದಿಲ್ಲಾ, ಆದರೆ ಹೊಸಪೇಟೆಗೆ ಸಮೀಪವಿರುವ ಕಂಪ್ಲಿ ತಾಲೂಕನ್ನ ಸುಮಾರು 65 ರಿಂದ 70 ಕಿಲೋ ಮೀಟರ್‌ಗೂ ಅಧಿಕ ದೂರವಿರುವ , ಸಾರ್ವಜನಿಕರಿಗೆ ಅನಾನುಕೂಲವಾಗಿರುವ ಸಂಚಾರ ವ್ಯವಸ್ಥೆ ಹೊಂದಿರದ , ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗುವ ಬಳ್ಳಾರಿ ಜಿಲ್ಲೆಗೆ ಕರ್ನಾಟಕ ಭೂ ಕಂದಾಯ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಸೇರಿಸಿ ಕಂಪ್ಲಿ ತಾಲೂಕನ್ನ ಕೈಬಿಟ್ಟು ನೂತನ ಜಿಲ್ಲೆಯನ್ನ ರಚಿಸಿರುವುದು ಅವೈಜ್ಞಾನಿಕವಾಗಿದ್ದು ಮತ್ತು ರಾಜಕೀಯ ಹಿತಾಸಕ್ತಿಗೆ ಈ ತಾಲೂಕಿನ ಜನರಿಗೆ ಅನ್ಯಾಯ ಮಾಡಿರುವುದು ರಾಜಕೀಯ ಷಡ್ಯಂತ್ರವಾಗಿರುತ್ತದೆ ಎಂದರು ನಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಕೀಲ ಕೆ ಶಿವ ಕುಮಾರ್ ರವರು ಸರ್ಕಾರದ ಈ ಧೋರಣೆಯನ್ನು ಪ್ರಶ್ನಿಸಿ ಮಾನ್ಯ ಘನ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ದಾಖಲಿಸಿದ್ದು ಪ್ರಕರಣಗಳು ಪ್ರಸ್ತುತ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದು ಮತ್ತು ಸದ್ರಿ ಪ್ರಕರಣಗಳಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಮೊದಲನೇ ಪ್ರತಿವಾದಿಯಾಗಿದ್ದರು ಕಂಪ್ಲಿ ತಾಲೂಕನ್ನ ಓಳಪಡಿಸಿ ಬಳ್ಳಾರಿ ಉಪ ವಿಭಾಗಕ್ಕೆ ಸೇರಿಸುವ ಅಧಿಸೂಚನೆ ಹೊರಡಿಸಿರುವುದು ನ್ಯಾಯಾಂಗ ನಿಂದನೆ ಮಾಡಿದಂತಾಗಿರುತ್ತದೆ, ಈ ಸರ್ವಾಧಿಕಾರಿ ಧೋರಣೆಯನ್ನ ಮುಂದಿನ ವಿಚಾರಣೆ ಸಮಯದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದರು ಜಿಲ್ಲಾ ಜಂಟಿ ಕಾರ್ಯದರ್ಶಿ ಸಿ ರಾಮಪ್ಪ ಈ ಹಿಂದೆಯು ಹೊಸಪೇಟೆ ಉಪ ವಿಭಾಗದಲ್ಲಿದ್ದ ಕಂಪ್ಲಿಯನ್ನು ಬಳ್ಳಾರಿ ಉಪ ವಿಭಾಗಕ್ಕೆ ಸೇರಿಸಲು ಕಂದಾಯ ಇಲಾಖೆಯು 2018ರಲ್ಲಿ ಹೊರಡಿಸಿದ್ದ ಅಧಿಸೂಚನೆಗೆ ತೀವ್ರ ವಿರೋಧಿಸಿ ನಮ್ಮ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯು ಕಂಪ್ಲಿಯಲ್ಲಿ ಪ್ರತಿಭಟನೆಯನ್ನ ನಡೆಸಿದ್ದರ ಅಂಗವಾಗಿ ಕಂಪ್ಲಿ ತಾಲೂಕನ್ನು ಹೊಸಪೇಟೆ ಉಪ ವಿಭಾಗದಲ್ಲೇ ಮುಂದುವರೆಸಿ ಆದೇಶ ಹಿಂಪಡೆದಿರುತ್ತಾರೆಂದರು ಕಂಪ್ಲಿ ಕ್ಷೇತ್ರಾಧ್ಯಕ್ಷ ಹೇಮಂತ್ ಕುಮಾರ್ ಡಿ ಮಾತಾನಾಡಿ ಸರ್ಕಾರಿ ಸೇವೆ ಮತ್ತು ಆಡಳಿತ ಸಾರ್ವಜನಿಕರಿಗೆ ಸರಳವಾಗಿ ದೊರೆಯುವ ಸೇವೆಯನ್ನು ಇನ್ನಷ್ಟು ಕಠಿಣಗೊಳಿಸುವ ಈ ಪ್ರಕ್ರಿಯೆಯನ್ನು ಈ ಅಧಿಸೂಚನೆಯನ್ನು ಈ ಕೂಡಲೇ ಕೈಬಿಟ್ಟು ನೂತನ ಜಿಲ್ಲೆಯ ಹೊಸಪೇಟೆ ಉಪ ವಿಭಾಗದಲ್ಲಿ ಕಂಪ್ಲಿ ತಾಲೂಕನ್ನು ಮುಂದುವರೆಸುವಂತೆ ಮತ್ತು ಸದರಿ ಪಿಐಎಲ್ ನ ಪ್ರಕರಣಗಳು ಇತ್ಯರ್ಥವಾಗುವವರೆಗೂ ಕಂಪ್ಲಿ ತಾಲೂಕಿಗೆ ಸಂಬಂದಿಸಿದ ಯಾವುದೇ ಪ್ರಕ್ರಿಯೆಗಳನ್ನ ಕೈಗೊಳ್ಳಬಾರದೆಂದು ಆಕ್ಷೇಪಣೆಯನ್ನು ಸಲ್ಲಿಸಿರುವುದಾಗಿ ತಿಳಿಸಿದರು,ಸರ್ಕಾರವು ಒಂದು ವೇಳೆ ನಮ್ಮ ಆಕ್ಷೇಪಣೆಯನ್ನು ಪರಿಗಣಿಸದೇ ಏಕಾಏಕಿ ನಿರ್ಧಾರ ಕೈಗೊಂಡಲ್ಲಿ ಕಂಪ್ಲಿ ತಾಲೂಕಿನ ಜನತೆಯೊಂದಿಗೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯು ಅನಿರ್ದಿಷ್ಟಾವಧಿಯವರೆಗೂ ಕಂಪ್ಲಿಯಲ್ಲಿ ಯಾವುದೇ ವ್ಯಾಪಾರ ವ್ಯವಹಾರ ವಹಿವಾಟು ನಡೆಸದೇ ಸಂಪೂರ್ಣ ಬಂದ್ ಮಾಡಿ ಹಂತ ಹಂತವಾಗಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಕಂಪ್ಲಿ ತಾಲೂಕು ಅಧ್ಯಕ್ಷ ಕೆ. ಹರ್ಷ, ತಾಲೂಕು ಪ್ರಧಾನ ಕಾರ್ಯದರ್ಶಿ ಸೈಯ್ಯದ್ ವಾರೀಶ್ ಎನ್, ಕಂಪ್ಲಿ ನಗರ ಘಟಕದ ಅಧ್ಯಕ್ಷ ಮನೋಜ್ ಕುಮಾರ್ ಡಿ, ದೇವಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ ಉಮೇಶ್ ಗೌಡ, ನಾಯಕರ ವಾಸು, ಸುಭಾನ್, ನಿಸಾರ್, ಸೋಫಿ ಸಾಬ್, ಎನ್.ಮೌಲಾ ಹುಸೇನ್, ಟಿ.ಶಿವರಾಜ್, ಎಸ್. ರೋಷನ್ ಜಮೀರ್, ಬೆಳಗೋಡು ರಾಜು, ಚನ್ನದಾಸರ ಅಂಜಿನಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು..
ವರದಿ – ಸೋಮನಾಥ ಹೆಚ್ ಎಮ್