ಕುಷ್ಟಗಿ ತಾಲ್ಲೂಕಿನ ತಾವರಗೇರ ಪಟ್ಟಣದ ನಾಡ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಇಂದು ಮಹಿಳೆ ಹತ್ಯ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೀಮವಾದ ಸಂಘಟನೆಯಿಂದ ತಾವರಗೇರ ನಾಡ ತಹಶೀಲ್ದಾರರಿಗೆ ಮನವಿ….
ಕುಷ್ಟಗಿ ತಾಲ್ಲೂಕಿನ ತಾವರಗೇರ ಪಟ್ಟಣದ ನಾಡ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿಮವಾದ ಸಂಘಟನೆ ಯಿಂದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ಖಂಡಿಸಿ ಹಾಗೂ ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕ ಬಸವರಾಜ ಎಂಬ ವ್ಯಕ್ತಿ ಶಾಲಾ ವಿದ್ಯಾರ್ಥಿಗಳಿಗೆ ದೌರ್ಜನ್ಯ ಮಾಡಿ ಬಟ್ಟೆ ತೊಳೆಸುವುದು ಮೈ ಕೈ ಮುಟ್ಟಿ ಎಳೆದಾಡುವದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈಗಿನ ಪ್ರಸಕ್ತ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮದ ಪಾಲಮ್ಮ ಮರಿಯಪ್ಪ ಇವರ ಕುಟುಂಬಕ್ಕೆ ನ್ಯಾಯ ಸಿಗಲಿ ಮತ್ತು ಅವರ ಕುಟುಂಬಕ್ಕೆ ಸರ್ಕಾರ ಇಲಾಖೆ ಅಧಿಕಾರಿಗಳು ಇವರಿಗೆ ಸಂಪೂರ್ಣ ಸೂಕ್ತ ರಕ್ಷಣೆ ನೀಡಿ
ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ..
ಆರೋಪಿ ಗಂಗಪ್ಪ ಅಳ್ಳಳ್ಳಿ ಯನ್ನು ಕಾಯ್ದೆ ಗೆ ಅನುಗುಣವಾಗಿ 1989/2015 ರ ಪ್ರಕಾರ ಅವರ ಆಸ್ತಿಯನ್ನು ಜಿಲ್ಲಾಡಳಿತ ಸರಕಾರ ಮುಟ್ಟುಗೋಲು ಹಾಕಿಕೊಂಡು ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ನಾಡ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿಮವಾದ ಸಂಘಟನೆ ಪದಾಧಿಕಾರಿಗಳಾದ. ದುರುಗೇಶ ನವಲಹಳ್ಳಿ. ಸಂಜೀವ ಚಲುವಾದಿ. ಲಕ್ಷ್ಮಿ ಬಾಯಿ ದಾಯಿಪುಲ್ಲೆ. ಶಂಕರಪ್ಪ ಜುಮಲಾಪೂರ. ಗೌತಮ ಭಂಡಾರಿ. ದುರುಗೇಶ ದೇವರಮನಿ. ರಾಜು ನಾಯಕ ನಂದಾಪುರ. ಪಾಂಡಪ್ಪ ಜುಮಲಾಪೂರ. M ಭಾಗ್ಯ ಶ್ರೀ. ಎಸ್ ಮಲ್ಲನಗೌಡ ಜುಮಲಾಪೂರ ಬಸವರಾಜ ಪರಶುರಾಮ ಹರಿಜನ ಮೌಲಸಾಬ ಇನ್ನಿತರರು ಇದ್ದರು…
ವರದಿ – ಸೋಮನಾಥ ಹೆಚ್ ಎಮ್