ತಿರುಗಲ್ ತಿಮ್ಮಪ್ಪ ಧನ್ವಂತರಿ ಪರಿಸರ ವೀಕ್ಷಿಸಿ ಸಂಭ್ರಮಿಸಿದ ಪೊಲೀಸ್ ಇಲಾಖೆ ಸಿಬ್ಬಂದಿ…..
ಕೊಪ್ಪಳ,ಅ.13-ಜಿಲ್ಲೆಯ ಶಿಲಾಯುಗದ ಪ್ರಾಗೈತಿಹಾಸಿಕ ಹಾಗೂ ಐತಿಹಾಸಿಕ ತಾಣವಾದ ಶ್ರೀ ತಿರುಗಲ್ ತಿಮ್ಮಪ್ಪ ಧನ್ವಂತರಿ ಪರಿಸರಕ್ಕೆ ಇಂದು ಭೇಟಿ ನೀಡಿದ್ದ ಪೊಲೀಸ್ ಇಲಾಖೆ ಸಿಬ್ಬಂದಿ ಅದ್ಭುತವಾದ ಪ್ರಾಕೃತಿಕ ಸೌಂದರ್ಯ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಕೊಪ್ಪಳ ಸಿಪಿಐ ಹಿರೇಗೌಡರ್ ಮತ್ತು ಮುನಿರಾಬಾದ್ ಪೊಲೀಸ್ ಠಾಣೆಯ ಅಧಿಕಾರಿ ಸುಪ್ರೀತ್ ಪಾಟೀಲ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳ್ಳಂಬೆಳಿಗ್ಗೆ ಆಹ್ಲಾದಕರ ತಾಣಕ್ಕೆ ಭೇಟಿ ನಿಡಿ ಪರಿಸರವನ್ನು ಆಸ್ವಾದಿಸಿದರು. ಪರಿಸರ ಪ್ರೇಮಿಗಳಾದ ವೀರಣ್ಣ ಕೋಮಲಾಪುರ ಮತ್ತು ವಸಂತ್ ಸಿಳ್ಳೆಕ್ಯಾತರ್ ಅವರು ತೇರಿನ ಹನುಮಪ್ಪ ಮಂದಿರ, ತಿರುಗಲ್ ತಿಮ್ಮಪ್ಪ ಮತ್ತು ಶ್ರೀ ಲಕ್ಷ್ಮೀದೇವಿ ಮಂದಿರ ಸೇರಿದಂತೆ ಇಡೀ ಪರಿಸರದ ಕುರಿತು ಪೊಲೀಸ್ ಆಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಸೂರ್ಯೋದಯದ ವೇಳೆ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಸಿಬ್ಬಂದಿಗಳು ಮೊಬೈಲ್ ನಲ್ಲಿ ಚಿತ್ರಗಳನ್ನು ಸೆರೆ ಹಿಡಿದರು. ಸೆಲ್ಫೀ ತೆಗೆದುಕೊಂಡರು. ಸುಂದರ, ಸೊಬಗಿನ ತಾಣದಲ್ಲಿ ಕೆಲ ಹೊತ್ತು ವಿಹರಿಸಿ ಪ್ರಾಕೃತಿಕ ಸೊಬಗನ್ನು ವೀಕ್ಷಿಸಿ ಖುಷಿಗೊಂಡರು.
ವರದಿ – ಉಪ – ಸಂಪಾದಕೀಯ