ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಪಂಚಾಯತಿಯ ಅಧ್ಯಕ್ಷರ ತವರೂರು. ಎಸ್ಸಿ ಕಾಲೋನಿ ರಸ್ತೆ ಮೇಲೆ. ಗಟಾರು ನೀರು. ಇಲ್ಲಿ ಸಮಸ್ಯೆ ಕೇಳೊರ್ಯಾರು…..
ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಸಾಸ್ವಿಹಾಳ ಗ್ರಾಮದ ಎಸ್ಸಿ ಕಾಲೋನಿ ಯಲ್ಲಿ ತಿಪ್ಪೆ ನೀರು ಗಟಾರು ನೀರು ಸೇರಿ ಗ್ರಾಮದಲ್ಲಿ ಹರಿಯುತ್ತಿದೆ…
ಈ ವಿಷಯಕ್ಕೆ ಸಂಭಂದಿಸಿದಂತೆ ಗ್ರಾಮದ ಜನರು ಈಗಾಗಲೇ ಮೂರು ನಾಲ್ಕು ತಿಂಗಳಿಂದ ಸಂಭಂದ ಪಟ್ಟ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ. ಹಾಗೂ ಪಂಚಾಯತ್ ಅಧ್ಯಕ್ಷರ ಗಮನಕ್ಕೂ ಸದಸ್ಯರು ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಸಾಸ್ವಿಹಾಳ ಗ್ರಾಮದ ಚರಂಡಿಗಳು ಸಾಕಷ್ಟು ಪ್ರಮಾಣದಲ್ಲಿ ಹುಳು ಕಸ ಕಡ್ಡಿ ತುಂಬಿ ನೀರು ಚರಂಡಿ ಯಲ್ಲಿ ಪೋಲು ಆಗದೆ ರಸ್ತೆ ಮೇಲೆ ಹರಿದು ಬರುತ್ತಿದೆ. ಚರಂಡಿ ಒಳಗೆ ಕಸ ಕಡ್ಡಿ ತ್ಯಾಜ್ಯ ವಸ್ತುಗಳು ತುಂಬಿರುವದರಿಂದ ನೀರು ಪೋಲಾಗದೆ ದುರ್ವಾಸನೆ ಬೀರುತ್ತದೆ. ಈ ದುರ್ವಾಸನೆ ಯಿಂದ ಗ್ರಾಮದ ವೃದ್ದರಿಗೆ ಸಣ್ಣ ಸಣ್ಣ ಮಕ್ಕಳು. ಅನಾರೋಗ್ಯಕ್ಕೆ ತುತ್ತಾಗುವ ಸಂಗತಿ ಶೋಚನಿಯವಾಗಬಹುದು. ಹಾಗೆ ಇದರಿಂದ ಪರಿಸರ ಮಾಲಿನ್ಯ ವಾಗುತ್ತದೆ ಕಲುಷಿತ ನೀರು ದಿನ ನಿತ್ಯ ಹರಿಯುವದರಿಂದ ಸೊಳ್ಳೆಗಳ ತವರೂರಾಗುವದರಲ್ಲಿ ಎರಡು ಮಾತಿಲ್ಲ. ಗಟಾರಲ್ಲಿ ಹುಳು ತುಂಬಿದ ತಕ್ಷಣ ಹುಳು ಎತ್ತೀದರೆ ಯಾವುದೇ ರಿತಿಯಿಂದ ಸಾರ್ವಜನಿಕರಿಗೆ ತೊಂದರೆ ಆಗುವದಿಲ್ಲ. ಹಾಗಾಗಿ ಗಟಾರು ನೀರು ತಿಪ್ಪೆ ನೀರು ಎರಡು ಸೇರಿ ರಸ್ತೆ ಮಧ್ಯದಲ್ಲಿ ಹರಿದು ಬರುತ್ತಿದ್ದು. ಇದರಿಂದ ಗ್ರಾಮದ ಸಾರ್ವಜನಿಕರಿಗೆ ಕಲುಷಿತ ನೀರಿನಿಂದ ಬಹಳ ತೊಂದರೆಯಾಗಿದೆ. ಈ ಕೊಳಚೆ ನೀರಿನಿಂದ ಸೊಳ್ಳೆಗಳ ಉತ್ಪತ್ತಿಯಾಗಿ ಆ ಸೊಳ್ಳೆ ಕಡತದಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ಡೆಂಗ್ಯೂ ಚಿಕನ್ ಗುನ್ಯ ಹರಡುತ್ತದೆ ಎಂದು ಅಲ್ಲಿನ ನಿವಾಸಿಗಳ ಹಳಲು ಆಗಿದೆ. ಒಂದೆಡೆ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ಅನೇಕ ಮುಂಜಾಗ್ರತೆ ಕೈಗೊಳ್ಳುವಂತೆ ಸೂಚಿಸುತ್ತದೆ. ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಜಾಗೃತಿ ವಹಿಸಿ ಎಂದೆಲ್ಲಾ ಹೆಳುತ್ತಿದೆ. ರಾಜ್ಯ ಸರ್ಕಾರವು ಗ್ರಾಮ ಸ್ವಚ್ಛತೆಗಾಗಿ ಹಾಗೂ ಅಭಿವೃದ್ಧಿಗಾಗಿ ಲಕ್ಷ ಲಕ್ಷ ರೂ ವ್ಯಹಿಸುತ್ತದೆ. ಆದರೂ ಜನಪ್ರತಿನಿಧಿಗಳು ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮದ ಸ್ವಚ್ಛತೆ ಅಭಿವೃದ್ಧಿ ಯತ್ತ ತಲೆ ಹಾಕದೇ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡದೆ ಇರುವುದು ವಿಪರ್ಯಾಸ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಮಲಾಪೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ತವರೂರಲ್ಲಿ ಇಷ್ಟೆಲ್ಲಾ ಸಮಸ್ಯೆ ಆದರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆ ಯಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಂತೆ ಸಮಸ್ಯೆಗಳತ್ತ ಗಮನ ಹರಸದೆ ಕಾಲ ಹರಣ ಮಾಡುತ್ತಿರುವದು ಅವರ ದಿವ್ಯ ನಿರ್ಲಕ್ಷ್ಯದ ಆಡಳಿತ ಕೈಗನ್ನಡಿಯಾಗಿದೆ. ಹಾಗಾಗಿ ಈ ವಿಷಯ ಸಂಭಂದಿಸಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳು ಕೂಡಲೇ ಹೆಚ್ಚೆತ್ತು ಸಾಸ್ವಿಹಾಳ ಗ್ರಾಮದ ಸಮಸ್ಯೆ ಯನ್ನು ಅತಿ ಶಿಘ್ರದಲ್ಲಿ ಸ್ಪಂದಿಸಿ ಸಾಂಕ್ರಾಮಿಕ ರೋಗದ ಭೀತಿ ಎದುರಿಸುವ ಆತಂಕ ದೂರ ಮಾಡುವಲ್ಲಿ ಶಿಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಸಾಸ್ವಿಹಾಳ ಗ್ರಾಮದ ಮುಖಂಡರಾಗಿರುವ ದೆವಪ್ಪ ಮಡಿವಾಳ. ಬಸವರಾಜ ಮೇಟಿ. ಅಮರೇಶ ಮಡ್ಡೆರ. ಛತ್ರಪ್ಪ ಹರಿಜನ್. ರಾಮಣ್ಣ ಹರಿಜನ್. ತಿಪ್ಪಣ್ಣ ಹರಿಜನ್. ಇನ್ನೂ ಗ್ರಾಮಸ್ಥರು ಆರೋಪಿಸಿದ್ದಾರೆ.
ವರದಿ – ಅಮಾಜಪ್ಪ ಜುಮಲಾಪೂರ