ಕೊಪ್ಪಳ ಜಿಲ್ಲಾಧಿಕಾರಿ ನಡೆ. ಕುಷ್ಟಗಿ ತಾಲ್ಲೂಕಿನ ಗಂಗನಾಳ ಹಳ್ಳಿ ಕಡೆ.
ಸರ್ಕಾರದ ಮಹತ್ತರದ ಕಾರ್ಯಕ್ರಮಗಳಲ್ಲಿ ಒಂದಾದ ಗ್ರಾಮ ವಾಸ್ತವ್ಯಕ್ಕೆ ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡು. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಆಗಮನಕ್ಕೆ ಗ್ರಾಮವನ್ನು ಸ್ವಚ್ಛಗೊಳಿಸಿ,ಶಾಲೆಯನ್ನು ಸಿಂಗರಿದೆ. ಶನಿವಾರದಂದು ತಾವರಗೇರಾ ಹೊಬಳೀಯ ಸಂಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್ ಗಂಗನಾಳ ಗ್ರಾಮದಲ್ಲಿ ವಾಸ್ತವ್ಯ ಹೂಡುವುದಾಗಿ ತಿಳಿಸಲಾಗಿದೆಸ್ಥಳೀಯ ಅಭಿವೃದ್ಧಿ ಅಧಿಕಾರಿ ಕವಿತಾ C ಪಾಟೀಲ್,ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ ಕುರುಮಚಾರಿ ಸೇರಿದಂತೆ ಶಿಕ್ಷಣ ಇಲಾಖೆ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿ ಗ್ರಾಮ ವಾಸ್ಥವ್ಯದ ಬಗ್ಗೆ ಮಾತನಾಡಿದರು. ವಿವಿಧ ಇಲಾಖಾ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಬೇಕು ಎಂದು ಹೇಳಿದರು. ಎಸ್ ಗಂಗನಾಳ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ಥವ್ಯಕ್ಕೆ ಸಕಲ ಸಿದ್ಧತೆಯನ್ನು ಕೈಗೊಂಡಿದ್ದು.ಸ್ವಚ್ಛತಾ ಕಾರ್ಯ ಬರದಿಂದ ಸಾಗಿದೆ.
ಹಲವಾರು ಜ್ವಲಂತಹ ಸಮಸ್ಯೆಗಳು ಪರಿಹಾರಕ್ಕಾಗಿ ಕಾದು ನಿಂತಿದ್ದು,ಶಾಲಾವರಣದಲ್ಲಿ ಮೇಲ್ಚಾವಣಿ ಇಲ್ಲದ ಶೌಚಾಲಯ, ದುರಸ್ಥಿ ಕಾರಣ ಬಸ್ ನಿಲ್ದಾಣ, ಸಮತಟ್ಟಾಗದ ಶಾಲಾವರಣ ಸೇರಿದಂತೆ ಹದೆಗೆಟ್ಟ ರಸ್ತೆ ಸುರಕ್ಷಾ ಕವಚಗಳಿಗೆ ಮುಕ್ತಿ ದೊರೆಯಬೇಕಿದ್ದು, ಗ್ರಾಮದಲ್ಲಿ ಇನ್ನೂ ಅನೇಕ ಕಾರ್ಯಗಳು ನೆನೆಗುದಿಗೆ ಬಿದ್ದಿವೆ.ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ಥವ್ಯದ ಕಾರ್ಯ ಯಶಸ್ವಿಯಾಗಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ.
ವರದಿ – ಉಪ-ಸಂಪಾದಕೀಯ