ಕಟ್ಟಡ ಕಾರ್ಮಿಕರೇ ಮಂಡಳಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಿ….
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಕಾರ್ಮಿಕರು ಸದುಪಯೋಗಪಡದುಕೊಳ್ಳಬೇಕು ಮತ್ತು ನಮ್ಮ ಭಾರತ ದೇಶದ ಕೋಟ್ಯಾಂತರ ಕಟ್ಟಡ ಕಾರ್ಮಿಕರು ಅಭದ್ರತೆಯಲ್ಲಿ ದಿನ ದುಡಿಯುತ್ತಿದ್ದಾರೆ ಎಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ. ಮಹಾಂತೇಶ್ ಅವರು ಮಾತನಾಡಿದರು. ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ ಪ್ರ.ಪ್ರಥಮ ಬಾರಿಗೆ ತಾಲೂಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಅತ್ಯಂತ ಅಪಾಯಕಾರಿ ಸನ್ನಿವೇಶಗಳಲ್ಲಿ ಕೆಲಸ ಮಾಡುವ ಈ ಕಾರ್ಮಿಕರಿಗೆ ಸರ್ಕಾರ ಸೌಲಭ್ಯಗಳ ಜತೆ ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕನಿಷ್ಠ ಶೌಚಾಲಯ, ಕುಡಿಯುವ ನೀರು ಮಕ್ಕಳಿಗೆ ಶಿಶುಪಾಲನ ಕೇಂದ್ರ ಮತ್ತು ಅಪಘಾತಗಳಾದಾಗ ತಕ್ಷಣವೇ ವೈದ್ಯಕೀಯ ನೆರವು ಸಿಗುವಂತಾಗಬೇಕು. ಕಾರ್ಮಿಕರ ಮಂಡಳಿಯಿಂದ ಸಿಗುವ ಸೌಲಭ್ಯಗಳ ಜತೆಗೆ ಸುರಕ್ಷತೆಯ ಬದುಕಿಗಾಗಿ ಸರಕಾರ ಗಮನ ನೀಡಬೇಕು ಎಂದರು. ಜಿಲ್ಲಾ ಕಾರ್ಮಿಕಾಧಿಕಾರಿ ವೀಣಾ ಮಾಸ್ತಿ ಮಾತನಾಡಿ, ಕೊವೀಡ್ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಡಕ್ಕೆಒಳಗಾಗಿದ್ದರು ಇಂತಹ ಸನ್ನಿವೇಶದಲ್ಲಿ ಸರ್ಕಾರ ಅವರಿಗೆ ಆಹಾರ, ನಗದು ಹಣ ಮತ್ತು ಪಡಿತರ ವ್ಯವಸ್ಥೆಯನ್ನು ಒದಗಿಸಿ ಅವರ ಬದುಕನ್ನು ರಕ್ಷಿಸಲು ಪ್ರಯತ್ನಗಳನ್ನು ನಡೆಸಿದೆ. ಕಾರ್ಮಿಕರೆಲ್ಲರೂ ಮಂಡಳಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಸಂಚಾಲಕರಾದ CWFI & CITU ಕಾಸಿಂಸಾಬ್ ಸರ್ದಾರ್. ಕೊಪ್ಪಳ ತಾಲೂಕು CWFI ಮುಖಂಡರಾದ ಇಸ್ಮಾಯಿಲ್ ಅಗಳಕೇರಾ. ಕೊಪ್ಪಳ ಬಾಲ ಕಾರ್ಮಿಕ ಇಲಾಖೆಯ ನಿರ್ದೇಶಕರು ಬಸವರಾಜ್ ಹಿರೇಗೌಡರ್. ಯಲಬುರ್ಗಾ ತಾಲೂಕು CWFI ಮುಖಂಡರಾದ ಅಬ್ದುಲ್ ರಜಾಕ್ ಇಲ್ಕಲ್. ಇನ್ನು ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ವರದಿ – ಹುಸೇನ್ ಮೋತೆಖಾನ್