ಠರಾವು ಮೂಲಕ ಅಕ್ರಮ ಮದ್ಯ ಮಾರಾಟ ತಡೆಗೆ ಮುಂದಾದ ಕಿಲ್ಲಾರ ಹಟ್ಟಿ ಗ್ರಾ. ಪಂ.
ಅಕ್ರಮ ಮದ್ಯ ಮಾರಾಟದಂಗಡಿ ತೆರವಿಗೆ ಪೊಲೀಸರಿಗೆ ಪತ್ರ ಗಡಿಭಾಗದ ಪ್ರದೇಶಗಳಲ್ಲಿನ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಾವರಗೇರಾವ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿಯೂ ಸಹ ಹೆಚ್ಚಿನ ಬೆಲೆಗೆ ಮದ್ಯವನ್ನು ಗ್ರಾಮದ ಪೆಟ್ಟಿಗೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ರಾಜ್ಯ ಸರಕಾರ ಸಾರಾಯಿ ನಿಷೇಧ ಮಾಡಿದ ಬಳಿಕ ಹೆಚ್ಚಿನ ಬೆಲೆಗೆ ಮದ್ಯವನ್ನು ಬಡವರು ನಗರ ಪ್ರದೇಶಗಳಿಗೆ ಹೋಗಿ ಖರೀದಿ ಮಾಡುವುದು ಕಷ್ಟ ಎಂದು ತಿಳಿದಿದ್ದು, ಅದನ್ನೆ ಬಂಡವಾಳವನ್ನಾಗಿಸಿಕೊಂಡ ಅನೇಕರು ಪುಡಾರಿಗಳು ಈಗ ಹಳ್ಳಿ ಹಳ್ಳಿಗಳ ಲ್ಲಿರುವ ಪೆಟ್ಟಿಗೆ ಅಂಗಡಿಗಳಲ್ಲಿ ದಿನಸಿ ಪದಾರ್ಥಗಳ ಜತೆಗೆ ಮದ್ಯ ಬಾಟಲಿಗಳು ಸಹ ಮಾರಾಟಮಾಡುತಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಇಂತಹ ಅಂಗಡಿಗಳು ನಾಯಿ ಕೊಡೆ ಗಳಂತೆ ಹೆಚ್ಚಿಕೊಂಡಿದ್ದು, ಯುವ ಸಮುದಾಯ ಹೆಚ್ಚಾಗಿ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ದಿನವಹಿ ದುಡಿದ ಕೂಲಿ ಸಮೇತ ಮನೆಗೆ ಸಲ್ಲಿಸದಷ್ಟು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದನ್ನು ಮನಗಂಡ ಗ್ರಾಮ ಪಂಚಾಯತಿಯ,ಅಧ್ಯಕ್ಷರು ಸದಸ್ಯರೆಲ್ಲರೂ ದಿನಾಂಕ 14.09.2021 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲರ ಒಪ್ಪಿಗೆಯನ್ನು ಪಡೆದು. ದೂರು ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮ ಪಂಚಾಯತಿಯಿಂದ ಯಾವುದೇ ಪರವಾನಗಿ ಪಡೆಯದೇ ‘‘ಅಕ್ರಮವಾಗಿ ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಅಬಕಾರಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಲು,ಪ್ರಜ್ಞಾವಂತರು,ಮಹಿಳೆಯರು ಹೆದರುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದನ್ನು ಗಂಭೀರ ವಾಗಿ ಪರಿಗಣಿಸುತ್ತಾ ಸಾರ್ವಜನಿಕರ ದೂರಿನನ್ವಯ ಅಂಗಡಿಗಳಲ್ಲಿ ಅನಧಿಕತವಾಗಿ ಮದ್ಯ ಮಾರಾಟವನ್ನು ತಡೆಯಲು ತಾವರಗೇರಾ ಪೊಲೀಸ್ ಠಾಣಿಗೆ ದೂರು ನೀಡಲಾಗಿದೆ ಎಂದು ಪಿಡಿಓ ರಾಮಣ್ಣ ದಾಸರ ತಿಳಿಸಿದರು. ಮೊದಲ ಹಂತದ ಕಾರ‌್ಯವಾಗಿ . ತಾವುಗಳು ಸೂಕ್ತ ಕ್ರಮವಹಿಸಿ ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡು ವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು,’’ ಎಂದು ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು 16/10/2021 ರಂದು ತಾವರಗೇರಾ ಠಾಣೆಗೆ ದೂರು ನೀಡಿದ್ದಾರೆ. ಕೃಪೆ. ಸುಭಾಷರೆಡ್ಡಿ