ಬೆಳಂ ಬೆಳಗ್ಗೆ ತಾವರಗೇರಾ ಪಟ್ಟಣದ ಡಾ// ರಾಜಕುಮಾರ್ ಸರ್ಕಲ್ ನಲ್ಲಿ ಕಾಯಿಪಲ್ಲೆ (ಕಾಯಿಗಡ್ಡಿ ) ಟಂಟಂ ಪಲ್ಟಿ,
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಡಾ// ರಾಜಕುಮಾರ ಸರ್ಕಲ್ ನಿಂದ ನೇರವಾಗಿ ಪಟ್ಟಣ ಪಂಚಾಯತಿಗೆ ಹಾದು ಹೋಗುವ ಮಾರ್ಕೇಟ್ ರಸ್ತೆಯು ಬಹು ಎತ್ತರವಿದ್ದು ಮೂರು ಗಾಲಿನ ವಾಹನಗಳು ಹಾಗೂ ಟು ವಿಲ್ಲರ್ ವಾಹನಗಳು ಚಲಿಸುವಾಗ ಈ ರಸ್ತೆ ಬಹು ಎತ್ತರ ವಾಗಿದ್ದು, ಈ ರಸ್ತೆಯನ್ನು ಹತ್ತಿ ಹೋಗುವಾಗ ಆಯಾ ತಪ್ಪಿ ವಾಹನಗಳು ಬಿಳುತ್ತಿದ್ದು, ಸದ್ಯ ಮೂರುಗಾಲಿನ ಟಂಟಂ ವಾಹನವು ಕಾಯಿಪಲ್ಲೆ (ಕಾಯಿಗಡ್ಡಿ ) ತುಂಬಿಕೊಂಡು ಮಾರುಕಟ್ಟೆ ರಸ್ತೆಯಾದ ಡಾ// ರಾಜಕುಮಾರ ಸರ್ಕಲ್ ನಿಂದ ನೇರಾ ಪಟ್ಟಣ ಪಂಚಾಯತಿಯ ರಸ್ತೆ ಕಡೆಗೆ ಚಲಿಸುವಾಗ ಈ ಟಂಟಂ ಆಯಾ ತಪ್ಪಿ ಪಲ್ಟಿಯಾಗಿದ್ದು. ಸದ್ಯ ದೇವರ ಧಯೆಯಿಂದ ಯಾವುದೆ ಅಫಘಾತವಾಗದೆ, ಈ ವಾಹನವು ಪಲ್ಟಿಯಾದಾಗ ಕಾಯಿಪಲ್ಲೆ (ಕಾಯಗಡ್ಡಿ) ಮಾತ್ರ ಕೇಳಗೆ ಬಿದ್ದಿದೆ, ಸದ್ಯ ವಾಹನದ ಡ್ರೈವರಗೆ ಯಾವುದೇ ಆಘಾತ ವಾಗಿರುವುದಿಲ್ಲ, ಆದ್ದರಿಂದ ಇನ್ನೂ ಮುಂದಾದರ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ತಕ್ಷಣವೇ ಡಾ// ರಾಜಕುಮಾರ್ ಸರ್ಕಲ್ಲಿನ ರಸ್ತೆಯು ದುರಸ್ತಿಗೊಳಿಸಿ, ವಾಹನದ ಚಾಲಕರಿಗೆ ಅಫಘಾತದಿಂದ ತಪ್ಪಿಸಿ, ವಾಹನದ ಚಾಲಕರಿಗೆ ಸುರಕ್ಷೀತವಾದ ರಸ್ತೆ ನಿರ್ಮಾಣ ಮಾಡಬೇಕೆಂದು ತಾವರಗೇರಾ ಪಟ್ಟಣದ ಸಾರ್ವಜನಿಕರು ಆಗ್ರಹಿಸಿದ್ದಾರೆ. ಹಿಗೇ ಅಧಿಕಾರಿಗಳು ನಿರ್ಲಕ್ಷವಹಿಸಿದರೆ ಮುಂದಾಗುವ ಅನಾಹುತಗಳಿಗೆ ತಾವೆ ಜವಬ್ದಾರರು ಎಂದು ಎಚ್ಚರಿಸುತ್ತಿದ್ದಾರೆ, ಬುದ್ದಂ, ಶರಣಂ,ಗಚ್ಛಾಮಿ ಸೇವಾ ಸಂಘದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು,
ವರದಿ – ಅಮಾಜಪ್ಪ ಹೆಚ್, ಜುಮಲಾಪೂರ