ಜಾಗತಿಕವಾಗಿ ಹಸಿವಿನ ಸೂಚ್ಯಂಕದಲ್ಲಿ ಭಾರತವು 101 ಕ್ಕೆ ಕುಸಿದಿದೆ. 2020 ರಲ್ಲಿ 94 ಸಂಖ್ಯೆಯಲ್ಲಿತ್ತು.
ಮ್ಯಾನ್ಮಾರ್ (71 ನೇ ಸ್ಥಾನ) ನೇಪಾಳ(76 ನೇ ಸ್ಥಾನ) ಬಾಂಗ್ಲಾದೇಶ (76 ನೇ ಸ್ಥಾನ) ಪಾಕಿಸ್ತಾನ (92 ಸ್ಥಾನ) ಇತರೆ ಸಣ್ಣ ಸಣ್ಣ ದೇಶಗಳು ಭಾರತಕ್ಕಿಂತ ಮೇಲಿನ ಸಂಖ್ಯೆಯಲ್ಲಿವೆ. ಮೋದಿ ಸರ್ಕಾರದ ಕಾರ್ಪೋರೇಟ್ ಪರ ನೀತಿಯಿಂದ ದೇಶ ದಿವಾಳಿಯಾಗುತ್ತಿದೆ. ಕಳೆದ 40 ವರ್ಷಗಳಲ್ಲಿ ಈ ಪ್ರಮಾಣದ ನಿರುದ್ಯೋಗ ಸಮಸ್ಯೆ ಉದ್ಬವಿಸರಲಿಲ್ಲವೆಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಭವಿತೇಕ ಸಂಪತ್ತು ಅದಾನಿ, ಅಂಬಾನಿ ಇತರೆ ಕಾರ್ಪೋರೇಟ್ ಕಂಪನಿಗಳಲ್ಲಿ ಗುಡ್ಡೆ ಹಾಕಿಕೊಂಡಿದ್ದರಿಂದಲೇ, ಹಸಿವಿನ ಸೂಚ್ಯಂಕ ಏರಿಕೆಯಾಗಿದೆ. ಬಹುತೇಕ ಬಂಡವಾಳಿಗರು ತಮ್ಮ ಬಂಡವಾಳವನ್ನು ಬಂಗಾರದಲ್ಲಿ ಮತ್ತು ಸೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಲಿದ್ದ ಬಂಡವಾಳವನ್ನು ಸರ್ಕಾರ ವಾಪಸ್ ಪಡೆಯುತ್ತಿದೆ. ಇದಲ್ಲದೆ ದೇಶದ 6 ಲಕ್ಷ ಕೋಟಿ ಸಂಪತ್ತನ್ನು ಕಾರ್ಪೋರೇಟ್ ಕಂಪನಿಗಳಿಗೆ 99 ವರ್ಷಗಳವರೆಗೆ ಗುತ್ತಿಗೆ ಕೊಡುವ ತೀರ್ಮಾನವಾಗಿದೆ. ಏಕಸ್ವಾಮ್ಯ ದೈತ್ಯ ಕಾರ್ಪೋರೇಟ್ ಬೃಹತ್ ಕಂಪನಿಗಳ ದುರ್ದಾಳಿಯಿಂದ, ಉದ್ಯೊಗಗಳಿಗೆ ಜೀವಾಳವಾಗಿದ್ದ ಸ್ಥಳೀಯ ಸಣ್ಣ ಮಧ್ಯಮ ಕೈಗಾರಿಕೆಗಳು ನೆಲ ಕಚ್ಚಿವೆ. ವಿಜ್ಞಾನ ತಂತ್ರಜ್ಞಾನ ಸರ್ವ ಜನರ ಅಭಿವೃದ್ಧಿಗಾಗಿರಬೇಕು; ಆದರೆ ಕಾರ್ಪೋರೇಟ್ ಪೋಷಿತ ತಂತ್ರಜ್ಞಾನ ಜನರ ಉದ್ಯೋಗವನ್ನು ಕಿತ್ತಿಕೊಳ್ಳುತ್ತಿದೆ. ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಪ್ರತಿ ವರ್ಷ ಕೋಟ್ಯಾಂತರ ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯಿಂದ ಇಬ್ಬರು ಮಾಡುವ ಕೆಲಸವನ್ನು ಒಬ್ಬ ಕಾರ್ಮಿಕನಿಂದಲೆ ಮಾಡಿಸಿಕೊಳ್ಳಲಾಗುತ್ತಿದೆ. ಕಾಯಂ ಕೆಲಸಗಾರನಿಗೆ ದೊರೆಯುತ್ತಿದ್ದ ತಿಂಗಳ ವೇತನದಲ್ಲಿ ಮೂರು ಜನ ಗುತ್ತಿಗೆ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದ ಕಾರಣ ರೈತರು ದಿವಾಳಿಯಾಗಿದ್ದಾರೆ. ರೈತರ ಒಡೆತನದ ಕೃಷಿ ಕ್ಷೇತ್ರವನನ್ನು ಅಭಿವೃದ್ಧಿಪಡಿಸುವ ಬದಲು ಹಾಳು ಮಾಡಲಾಗುತ್ತಿದೆ. ದೇಶದ ಕೃಷಿ ಭೂಮಿಯನ್ನು ಸಂಪೂರ್ಣ ನೀರಾವರಿಗೊಳಪಡಿಸಿದರೆ; ದೇಶದಲ್ಲಿ ಹೊಸದಾಗಿ 50 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಬಹುದು. ಸರ್ಕಾರಕ್ಕೆ ಇದು ಬೇಕಾಗಿಲ್ಲ. ರೈತರು ದಿವಾಳಿಯಾಗಬೇಕು ಅವರ ಭೂಮಿ ಕಂಪನಿಗಳ ವಶವಾಗಬೇಕು. ಇದು ಸರ್ಕಾರದ ಗುಪ್ತ ಕಾರ್ಯಸೂಚಿ. ಈ ಕಾರಣದಿಂದಲೇ ಮೂರು ಕೃಷಿ ಕಾಯ್ದೆ ಗಳಿಗೆ ತಿದ್ದುಪಡಿ ತರಲಾಗಿದೆ. ಪೆಟ್ರೋಲ್ ಡೀಸೆಲ್ ಅಡಿಗೆ ಅನಿಲ್- ಸಿಲೆಂಡರ-ಇತರೆ ಅಗತ್ಯ ವಸ್ತುಗಳ ಬೆಲೆಯನ್ನು ಮೂರು ಪಟ್ಟು ಹೆಚ್ಚಿಸಿ, ಸಾಮಾನ್ಯ ಜನರ ಒಂದೂತ್ತಿನ ಊಟಕ್ಕೂ ಕೊಳ್ಳಿ ಇಡಲಾಗಿದೆ. ಮೋದಿ ಸರ್ಕಾರದ ನೀತಿಯ ಪ್ರಕಾರ ದೇಶದ ಅಭಿವೃದ್ಧಿಯೆಂದರೆ, ಅದಾನಿ ಅಂಬಾನಿ ಇತರೆ ಕಾರ್ಪೋರೇಟ್ ಕಂಪನಿಗಳ ಅಭಿವೃದ್ಧಿಯಾಗಿದೆ.
1) ನಿರುದ್ಯೋಗ, ಬಡತನ, ಹಸಿವು ಕೊನೆಗೊಳ್ಳಬೇಕಾದರೆ; ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರನ್ನು ಅಪೌಷ್ಟಿಕ ತೆಯಿಂದ ರಕ್ಷಿಸಬೇಕಾದರೆ ಸರ್ಕಾರದ ನೀತಿಗಳು ಬದಲಾಗಬೇಕು.
2)ವಿಜ್ಞಾನ ತಂತ್ರಜ್ಞಾನ ಉನ್ನತ ಮಟ್ಟದಲ್ಲಿ ಬೆಳವಣಿಯಾಗಿದ್ದರಿಂದ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 6 ಗಂಟೆಗೆ ಇಳಿಸಿದರೆ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ.
3) ರೈತರ ಕೃಷಿಗೆ ಶೇಕಡ 50 ರಷ್ಟು ಸಬ್ಸಿಡಿ ಕೊಡಬೇಕು.
4) ದೇಶದ ಎಲ್ಲಾ ಭೂಮಿಯನ್ನು ನೀರಾವರಿಗೊಳಪಡಿಸಿ, ರೈತರ ನೇತೃತ್ವದಲ್ಲಿ ಕೃಷಿ ಸಹಕಾರಿ ಸೊಸೈಟಿಗಳನ್ನು ಸ್ಥಾಪಿಸಬೇಕು. 5)ಕೃಷಿಗೆ ಪೂರಕವಾದ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕು.
6)ಆಹಾರ ಪದಾರ್ಥಗಳು; ಸಕ್ಕರೆ, ಖಾದ್ಯತೈಲ, ಹೈನುಕಾರಿಕೆ ಉತ್ಪಾನ್ನಗಳನ್ನು ಬೇರೆ ದೇಶಗಳಿಂದ ರಫ್ತು ಮಾಡಿಕೊಳ್ಳಬಾರದು. ( ಈ ವರ್ಷ ಶೇಕಡಾ 60 ರಷ್ಟು ಖಾದ್ಯತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದ.)
7) ಜನರ ಅಗತ್ಯಕ್ಕೆ ತಕ್ಕಷ್ಟು ವಸ್ತುಗಳನ್ನು ಉತ್ಪಾದನೆ ಮಾಡುವ ನೀತಿಗಳನ್ನು ಜಾರಿಗೊಳಿಸಬೇಕು.
8) ಮಾರುಕಟ್ಟೆಗಾಗಿ ಅಥವಾ ಕಂಪನಿಗಳ ಲಾಭಕ್ಕಾಗಿ ನಡೆಯುವ ಅನಗತ್ಯವಾದ ಉತ್ಪನ್ನಗಳಿಗೆ ಕಡಿವಾಣ ಹಾಕಬೇಕು.
9) ಮದ್ಯಪಾನವನ್ನು ಸಂಪೂರ್ಣವಾಗಿನಿಷೇಧಿಸಬೇಕು ಮತ್ತು ವೈದ್ಯರ ಪ್ರಮಾಣ ಪತ್ರ ಆದರಸಿ ತೀರ ಅಗತ್ಯವಿದ್ದವರಿಗೆ ಮಾತ್ರ ಮದ್ಯಪಾನ ನೀಡುವ ಕಾಯ್ದೆ ಜಾರಿಗೊಳಿಸಬೇಕು.
10) ದ್ವಿಚಕ್ಕರ್, ಇತರೆ ವಾಹನಗಳು,ಮೊಬೈಲ ಇತರೆ ಅನಗತ್ಯ ವಸ್ತುಗಳ ಬಳಕೆಯನ್ನು ನಿರ್ಬಂಧಕೊಳಪಡಿಸುದರೊಂದಿಗೆ, ದೇಶದ ಖನಿಜ ಸಂಪತ್ತು ಮತ್ತು ಪರಿಸರ ರಕ್ಷಣೆ ಮಾಡಬೇಕು.
11) ಅದಾನಿ, ಅಂಬಾನಿ, ಇತರೆ ಕಾರ್ಪೋರೇಟ್ ಕಂಪನಿಗಳ ಮತ್ತು ಎಲ್ಲಾ ಪಕ್ಷಗಳ ರಾಜಕಾರಣಿಗಳ ಅಕ್ರಮ ಆಸ್ತಿಯನ್ನು ಸರಕಾರ ಮುಟ್ಟುಗೋಲ್ಹಾಕಿಕೊಳ್ಳಬೇಕು.
12)ಇದೆಲ್ಲಸಾಧ್ಯವಾಗಬೇಕಾದರೆ ಸ್ವಾತಂತ್ರ್ಯ ಸಂಗ್ರಾಮ ಮಾದರಿಯ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಚಳುವಳಿ ಜರುಗಬೇಕು
ವಿಶೇಷ ಲೇಖನ – ಡಿ.ಹೆಚ್.ಪೂಜಾರ. ರಾಜ್ಯಾಧ್ಯಕ್ಷರು. ಕರ್ನಾಟಕರೈತ ಸಂಘ (AIKKS) 9448633710