ದೇವರನಾವದಗಿ “ಬಿಜೆಪಿಗೆ ಮತ ನೀಡಿ, ಅಭಿವೃದ್ಧಿಗೆ ಸಹಕರಿಸಿ”
ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಇಂದು ದೇವರನಾವದಗಿ ಗ್ರಾಮದಲ್ಲಿ, ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀ ರಮೇಶ ಭೂಸನೂರ ಅವರ ಪರ ಮನೆ-ಮನೆಗೆ ತೆರಳಿ ಹಾಗೂ ಸಾರ್ವಜನಿಕ ಸಭೆ ನಡೆಸುವ ಮೂಲಕ ವಿಜಯಪುರ ಜಿಲ್ಲೆಯ ಉಸ್ತುವಾರಿ ಹಾಗೂ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಪ್ರಚಾರ ನಡೆಸಿ, ಜನರ ಹಿತಕ್ಕೆ ಸ್ಪಂದಿಸುವ ನಾಯಕ, ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ, ಪಕ್ಷದ ಗೆಲುವಿಗೆ ಸಹಕರಿಸಿ ಎಂದು ಮತಯಾಚಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಲಲಿತಾ ಭೂಸನೂರ, ಜಿ.ಪಂ.ಸದಸ್ಯರಾದ ಶ್ರೀ ಶ್ರೀಮಂತ ನಾಗೂರ, ಶ್ರೀ ಶರಣು ಮೇತ್ರೆ, ತಾ.ಪಂ.ಸದಸ್ಯರಾದ ಶ್ರೀ ಬಸವರಾಜ್ ಬಮ್ಮನಜೋಗಿ, ಗ್ರಾ.ಪಂ. ಅಧ್ಯಕ್ಷರಾದ ಶ್ರೀ ಶಿವಲಿಂಗಪ್ಪಾ ಕುಮಶಿ, ಸ್ಥಳೀಯ ಮುಖಂಡರಾದ ಶ್ರೀ ಬಿ. ಎಮ್. ಬಿರಾದಾರ, ಶ್ರೀ ಮಲ್ಲು ಬಂಡಗರ್, ಶ್ರೀ ಶ್ರೀಶೈಲ ಕುಮಶಿ, ಶ್ರೀಮತಿ ಶಿಲ್ಪಾ ಕೂದರಗೊಂಡ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ – ಮಹೇಶ ಶರ್ಮಾ