ರಾಜ್ಯಕ್ಕೆ ಮಾದರಿಯಾದ ಬೆಳಗಾವಿ Dc ಗ್ರಾಮ ವಾಸ್ತವ್ಯ…..
ಹೌದು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠರವರು ಜಿಲ್ಲೆಯ ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅರ್ಥಪೂರ್ಣವಾದ ಗ್ರಾಮ ವಾಸ್ತವ್ಯದ ಕಾರ್ಯಕ್ರಮವು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ ಎಂಬ ಕಾರ್ಯಕ್ರಮಕ್ಕೆ 10 ಗಂಟೆಗೆ ಬಂದಿಳಿದ ಜಿಲ್ಲಾಧಿಕಾರಿಗಳು ಹಾಗೂ ತಂಡ ವೀರಾಪೂರ ಗ್ರಾಮದ ಶ್ರೀ ಕೇದಾರ ಲಿಂಗೇಶ್ವರ ದೇವಸ್ಥಾನ, ಹಾಗೂ ಗ್ರಾಮ ದೇವತೆ ಸತ್ಯಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ಮಾಡಿ ಮನೆ ಮನೆಗೆ ತೆರಳಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿ, ನಂತರ ಆರೋಗ್ಯ ಮೇಳ ಉದ್ಘಾಟನೆ ಮಾಡಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳಿಗೆ ಭೇಟಿಕೊಟ್ಟು ಸಮಸ್ಯೆಗಳನ್ನು ಪರಿಶೀಲನೆ ಮಾಡಿದರು, ನಂತರ ಅಂಗನವಾಡಿ, ಹಿಂದುಳಿದ ವರ್ಗಗಳ ಕಾಲೋನಿಗಳಿಗೆ ಭೇಟಿಕೊಟ್ಟು ಸಮಸ್ಯೆಗಳನ್ನು ಪಟ್ಟಿ ಮಾಡಿದರು, ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿ, ವೀರಾಪುರಕ್ಕೆ ಗ್ರಾಮ ಪಂಚಾಯಿತಿ ಕೇಂದ್ರ ಕಚೇರಿಯನ್ನು ಉದ್ಘಾಟನೆ ಮಾಡಿ, ಶಾಸಕರೊಂದಿಗೆ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಪಿಂಚಣಿ ಪತ್ರ, ಕೃಷಿ ಉಪಕರಣಗಳು, ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಶ್ಮೀ ಬಾಂಡ್, ಅಂಗವಿಕಲ ಸಲಕರಣೆಗಳು, ಹೀಗೆ ಹಲವಾರು ಸೌಲಭ್ಯಗಳನ್ನು ವಿತರಣೆ ಮಾಡಿದರು, ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂದಿ ಹಾಗೂ ಕನ್ನಡ ಹಾಡನ್ನು ಹಾಡಿದರು. ಅದ್ಯಕ್ಶತೆ ವಹಿಸಿದ್ದ ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರು ಮಾತನಾಡಿ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮ ವು ಗ್ರಾಮೀಣ ಪ್ರದೇಶದ ಜನತೆಗೆ ಸಾಕಷ್ಟು ಅನುಕೂಲಕರವಾಗಿದ್ದು ನಮ್ಮ ಜಿಲ್ಲಾಧಿಕಾರಿಗಳು ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ರಾಜ್ಯಕ್ಕೆ ಮಾದರಿಯಾಗಿದೆ ಎಂದರು, ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಅಶೋಕ್ ದುಡಗುಂಟಿ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್, ಬಿಜೆಪಿ ಮುಖಂಡ ಬಸನಗೌಡ ಸಿದ್ರಾಮಣಿ, Ac ಶಶಿಧರ್ ಬಗಲಿ,Eo ಸುಭಾಷ್ ಸಂಪಗಾವಿ, ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕ ಕೊಡ್ಲಿ, ಸಿಡಿಪಿಓ ಶ್ರೀಮತಿ ರೇವತಿ ಹೊಸಮಠ, ಗ್ರಾಮ ಪಂಚಾಯಿತಿ ಅದ್ಯಕ್ಶ ಉಮೇಶ್ ಸಿದ್ರಾಮಣಿ, ಸಾರ್ವಜನಿಕ ಶಿಕ್ಷಣ ಇಲಾಖೆ Eo ಪ್ರಕಾಶ ಪ್ಯಾಟಿ, Beo ಆರ್.ಟಿ ಬಳಿಗಾರ, ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು ದಳವಾಯಿ, ಕುಡಿಯುವ ನೀರು ಇಲಾಖೆಯ ಅಭಿಯಂತರ ಎ. ಬಿ ಮುಗಸಜ್ಜಿ, tho ಸಿದ್ದಣ್ಣ ನವರ್, ಮುಖ್ಯ ಅಧಿಕಾರಿಗಳು ಆದ ಐ.ಸಿ ಸಿದ್ನಾಳ್, ಗ್ರಾಮದ ಹಿರಿಯರು ಆದ ಸಿದ್ದರಾಮಯ್ಯ ಹಿರೇಮಠ, ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ , ಪ್ರಾಥಮಿಕ, ಪ್ರೌಢ ಶಾಲೆಗಳ ಶಾಲಾ ಶಿಕ್ಷಕ -ಶಿಕ್ಷಕಿಯರು, ಯುವಕರು, ಪತ್ರಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಒಟ್ಟಾರೆ ಸಾಕಷ್ಟು ಸಮಸ್ಯೆಗಳ ಕೂಪ ವಾಗಿದ್ದ ವೀರಾಪುರ ಗ್ರಾಮಕ್ಕೆ ಈ ಗ್ರಾಮ ವಾಸ್ತವ್ಯ ಹೊಸ ಅಭಿವೃದ್ಧಿ ಕೆಲಸಗಳ ಸಂಚಲನವಾಗಿದ್ದು ಇಡೀ ರಾಜ್ಯಕ್ಕೆ ಮಾದರಿಯಾದ ಗ್ರಾಮ ವಾಸ್ತವ್ಯ ಕಾರ್ಯಕ್ರಮವಾಗಿದೆ 💐🙏ವಂದನೆಗಳು. ಶ್ರೀ ಬಸವರಾಜು. ರಾಜ್ಯ ವಿಶೇಷ ಪ್ರತಿನಿಧಿ. 6360224654.
ವರದಿ – ಮಹೇಶ ಶರ್ಮಾ