ಶಾಸಕರ ಮಗನೆಂದು ಯುವತಿಯನ್ನು ವಂಚಿಸಿದ ಯುವಕ ಪೊಲೀಸರ ಬಲಿಗೆ,,,!
ರಾಜ್ಯದಲ್ಲಿ ಮೋಶ ಮಾಡುವ ಜನರು ಇರುವವರೆಗೂ ಮುಗ್ದ ಜನರು ಮೋಶಕ್ಕೆ ಬಲಿಯಾಗುತ್ತಾರೆ, ಆದ್ದರಿಂದ ಸಾರ್ವಜನಿಕರಲ್ಲಿ ಮನವಿ, ರಾಜ್ಯದಲ್ಲಿ ಕೆಲಸ ಕಾರ್ಯವಿಲ್ಲದೆ ಯುವಕ ಯುವತಿಯರು ನಾನಾ ವೇಷಧಾರಿಯಾಗಿ ಜನರನ್ನ ನಂಬಿಸಿ ಮೋಶ ಮಾಡುತ್ತಿದ್ದಾರೆ, ಕೊಪ್ಪಳ ಜಿಲ್ಲೆಯೊಂದು ಮೋಶಕ್ಕೆ ಬಲಿಯಾದ ಒಂದು ಘಟನೆ ತಮ್ಮ ಮುಂದೆ, ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಯುವತಿಯನ್ನು ಆರೋಪಿ ನಾನು ಶಾಸಕರ ಮಗನೆಂದು ಯುವತಿಯನ್ನು ಅಪಹರಿಸಿ ಬಾಲಕಿಯನ್ನು ಲೈಗಿಂಕವಾಗಿ ಬಳಸಿಕೊಂಡಿದ್ದ ಯುವಕನನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ಪೊಲೀಸರು ಬಲೆ ಬಿಸುವಲ್ಲಿ ಯಶಸ್ವಿಯಾಗಿದ್ದಾರೆ, ಶಾಸಕರ ಮಗನೆಂದ ಆರೋಪಿಯು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬಾಗೋಡಿಯ ಮಹ್ಮದ ಚಾಂದ ಪಾಷಾ ಅಲಿಯಾಸ ಚಂದು ಪಾಟೀಲ್ ಎಂದು ಪೊಲೀಸರ ಮೂಲಗಳು ತಿಳಿಸಿವೆ. ಆರೋಪಿಯು ಅಭಯ ಪಾಟೀಲ್ ರವರ ಮಗ ಚಂದು ಪಾಟೀಲ್ ಎಂದು ಹೇಳಿಕೊಂಡು ಸಿಂಧನೂರು ಮೂಲದ ಯುವತಿಯನ್ನು ಮದುವೆಯಾಗು ಎಂದು ಪಿಡಿಸಿ, ಕಳೆದ ತಿಂಗಳಲ್ಲಿ ಗೋವಾ ರಾಜ್ಯದಲ್ಲಿ ಯುವತಿಯನ್ನು ಅಪಹರಿಸಿ ಲೈಗಿಂಕವಾಗಿ ಬಳಸಿಕೊಂಡು ಜೊತೆಗೆ ಪೋಟೊ ಹಾಗೂ ವಿಡಿಯೋ ಮಾಡಿಕೊಂಡಿದ್ದ ಚಾಣಕ್ಷತನ ತೋರಿದ ಈ ಯುವಕ ಯುವತಿಯ ಪಾಲಕರಿಗೆ ವಿಡಿಯೋ ಮತ್ತು ಪೋಟೊ ಪಾಲಕರಿಗೆ ಕಳುಹಿಸಿ ಪಾಲಕರಿಂದ ಸುಮಾರು 9 ಲಕ್ಷ ರೂ/ ಹಣದ ಬೇಡಿಕೆಯಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಯುವತಿಯ ಪಾಲಕರು ಕಳೆದ ಫೆಭ್ರವರಿ 27 ರಂದು ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕುಷ್ಟಗಿ ಸಿಪಿಐ ನಿಂಗಪ್ಪ ಆರ್. ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತನಿಂದ ವಂಚಿತಳಾದ ಯುವತಿಯು ತಾವರಗೇರಾ ಪಟ್ಟಣದ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು ಎಂದು ಮೂಲಗಳು ತಿಳಿದು ಬಂದಿದ್ದು, ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಾವರಗೇರಾ ಪೊಲೀಸ್ ಠಾಣೆಯ ಪಿ ಎಸ್ ಐ ಗೀತಾಂಜಲಿ ಶಿಂಧೆಯವರು ತಿಳಿಸಿದ್ದಾರೆ. ವರದಿ – ಅಮಾಜಪ್ಪ ಹೆಚ್, ಜುಮಲಾಪೂರ