ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕುರಿತು ಶಾಂತಿ ಸಭೆ ಜರುಗಿತು..
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟಟ್ಣದ ಪೊಲೀಸ್ ಠಾಣೆಯಲ್ಲಿ ವಾಲ್ಮೀಕಿ (ನಾಯಕ ) ಜನಾಂಗದವರನ್ನು ಕರೇದು ನಾಳೆ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಠಾಣೆಯ ಪಿ.ಎಸ್.ಐ. ಶ್ರೀಮತಿ ವೈಶಾಲಿ ಝಳಕಿಯವರು ದೇಶದಲ್ಲಿ ಕೊರೋನ ಅಲೆಯ ಇನ್ನೂ ಇರುವುದರಿಂದ ಸರ್ಕಾರದ ಮಾರ್ಗ ಸೂಚಿಯ ಪ್ರಕಾರ ಹಬ್ಬವನ್ನು ಆಚರಿಸಬೇಕು, ಸಮಾಜಭಾಂದವರು ಮಾಸ್ಕ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಬೇಕು. ಗುಂಪು ಗುಂಪಾಗಿ ಸೇರುವ ಹಾಗಿಲ್ಲ, ಡಿ.ಜೆ ಮತ್ತು ಮೆರವಣಿಗೆ ಮಾಡುವಂತಿಲ್ಲ, ಹಾಗಾಗಿ ಸರ್ಕಾರದ ಮಾರ್ಗ ಸೂಚಿ ಪಾಲನೆ ಮಾಡುವುದರ ಮೂಲಕ ಹಬ್ಬವನ್ನು ಆಚರಣೆ ಮಾಡಬೇಕು ಎಂದರು ಈ ಸದರ್ಭದಲ್ಲಿ ವಾಲ್ಮೀಕಿ ಜನಾಂಗದ ಹಿರಿಯರು ಹಾಗೂ ಮುಖಂಡರಾದ ದುರುಗಪ್ಪ ಸಿದ್ದಾಪೂರ, ಯಮನೂರಪ್ಪ ಬಿಳೆಗುಡ್ಡ, ಶ್ಯಾಮೂರ್ತಿ ಅಂಚಿ, ವೆಂಕಟೇಶ ಗೋತಗಿ, ಸಂತೋಷ ಬಿಳೆಗುಡ್ಡ, ಮಂಜುನಾಥ್ ಬಿಳೆಗುಡ್ಡ
ಶ್ಯಾಮೂರ್ತಿ ಬಂಗಾರಿ, ಚಂದ್ರು ಸಿ.ಎಮ್. ಅಂಬ್ರೇಶ ಅಂಚಿ, ವೆಂಕಟೇಶ್ ಹುಲಸನಹಟ್ಟಿ, ಶ್ಯಾಮ್ ನಾರಿನಾಳ ಇನ್ನಿತರರು ಪಾಲುಗೊಂಡಿದ್ದರು,
ವರದಿ – ಉಪ – ಸಂಪಾದಕೀಯ