ಕವಿತಾಳ ಪಟ್ಟಣದಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ…

Spread the love

ಕವಿತಾಳ ಪಟ್ಟಣದಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ…

ಕವಿತಾಳ ಪಟ್ಟಣದ ಮಸ್ಕಿ ಕ್ರಾಸ್ ಬಳಿ ಇರುವ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭೀಮಣ್ಣ ನಾಯ್ಕ ಕಾಚಾಪೂರು ಇವರ ನೇತೃತ್ವದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು..  ಕಾರ್ಯಕ್ರಮದ ಉದ್ದೇಶಿ ಮಾತನಾಡಿದ ಅವರು ಈ ವರ್ಷವು ಸಹ ಕರೋನಾ ನಿಯಮದ ಪ್ರಕಾರ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಣೆ ಮಾಡುತ್ತಿದ್ದೇವೆ ಈ ಪ್ರಸ್ತುತ ದಿನ ಮಾನಗಳಲ್ಲಿ ಆಚರಣೆಗಿಂತ ಆರೋಗ್ಯ ಮುಖ್ಯವಾಗಿದೆ ಆದ್ದರಿಂದ ಈದ್ ಮಿಲಾದ್ ಹಬ್ಬ ಮತ್ತು ವಾಲ್ಮೀಕಿ ಜಯಂತಿಯ ಅಂಗವಾಗಿ ಆರೋಗ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ವತಿಯಿಂದ ವಿಶೇಷವಾಗಿ ಇಂದು ಕರೋನಾ ಲಸಿಕೆ ಮೇಳವನ್ನು ಆಯೋಜಿಸಿದ್ದು ಇರದ ಸದುಪಯೋಗ ವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಭೀಮಣ್ಣ ನಾಯ್ಕ ಕಾಚಾಪೂರು ಮನವಿ ಮಾಡಿದರು. ನಂತರ ಮಾತನಾಡಿದ ಬಿ. ಎ. ಕರೀಮ್ ಸಾಬ ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸಿಮೀತವಾಗಿರದೇ ಮಾನವ ಕುಲಕ್ಕೆ ಸಿಮೀತವಾಗಿದ್ದಾರೆ ಅವರು ರಾಮಾಯಣದಂತಹ ಮಹಾಕಾವ್ಯ ರಚಿಸಿ ಜಗತ್ತಿಗೆ ರಾಮಾಯಣವನ್ನ ಪರಿಚಯಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಈ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಮುಖಂಡರು ಮತ್ತು ಯುವಕರು ಭಾಗಿಯಾಗಿದ್ದು ಸಂತೋಷಕರ ವಿಚಾರ ಎಂದು ಹೇಳಿದರು. ಈ ಕಾರ್ಯಕ್ರಮ ಉದ್ದೇಶಿಸಿ ಪಿಎಸ್ಐ ವೆಂಕಟೇಶ್. ಎಂ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಗಫೂರ ಸಾಬ ಮಾತನಾಡಿದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಅಮೃತ ರಾಠೋಡ್. ವಾಲ್ಮೀಕಿ ಹೋಬಳಿ ಘಟಕದ ಅಧ್ಯಕ್ಷ ಹನುಮ ಗೌಡ ನಾಯಕ. ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೌನೇಶ್ ಹಿರೇಕುರುಬರ್. ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಾರುತಿ. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರದೀಪ ಕುಮಾರ್ ಮುಖಂಡರಾದ ಯಮನಪ್ಪ ದಿನ್ನಿ. ರುಕ್ಮದ್ದೀನ್. ಮುಸ್ತಾಫ್ ಸಿಲ್ಲಾರ ಸಾಬ ಲಾಳೇಶ ನಾಯಕ. ವಿ. ಸುರೇಶ್. ಅನ್ಸರ್ ಪಾಷ. ಮಂಜುನಾಥ್ ಸ್ವಾಮಿ. ಸುರೇಶ್ ನಾಯಕ್. ಸೇರಿದಂತೆ ಇತರರು ಇದ್ದರು.

ವರದಿ – ಆನಂದ ಸಿಂಗ್ ಕವಿತಾಳ

Leave a Reply

Your email address will not be published. Required fields are marked *