ಕೂಡ್ಲಿಗಿ:ಮಂಗಳಮುಖಿಯರಿಗೆ ಕಾನೂನು ಅರಿವು ಕಾರ್ಯಕ್ರಮ,,,,,
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ, ಭಾರತದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಜಾಪ್ರಭುತ್ವದಲ್ಲಿ ಪುರಷ ಪ್ರಧಾನ ಮಹಿಳೆರಂತೆ ಭಾವನಾತ್ಮಕ ಇರುವ (ಮಂಗಳಮುಖಿಯರು)ಗೆ ಸ್ವವಲಂಬಿಗಳಾಗಿ & ಅರ್ಥಿಕವಾಗಿ ಸದೃಡವಾಗಲು ವಿವಿದ ಇಲಾಖೆ ಕಾರ್ಯಕ್ರಮ ಯೋಜನೆ ಪರಿಕಲ್ಪನೆ ಮೂಡಿಸುವ ಕಾನೂನು ಅರಿವು-ನೆರವು ಕಾರ್ಯಕ್ರಮ ಜರುಗಿತು.ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಎಮ್.ನಾಗೇಶ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,ಮಂಗಳ ಮುಖಿಯರು ಸಮಾಜದಲ್ಲಿ ಎಲ್ಲರಂತೆ ತಾವುಗಳು ಸಮಾನತೆಯಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಿದೆ. ಸರಕಾರ ಸೌಲಭ್ಯ ಗಳನ್ನು ಅರ್ಹರು ಪಡೆದುಕೊಳ್ಳಬೇಕಿದೆ,ಎಲ್ಲರೂ ಜಾಗೃತರಾಗಿ ಕಾನೂನಿನ ತಿಳುವಳಿಕೆಯನ್ನು ಪಡೆದು ಮುಖ್ಯವಾಹಿನಿಗೆ ಬರಬೇಕಾಗಿದೆ. ತಹಸಿಲ್ದಾರರಾದ ಟಿ.ಜಗದೀಶ ಮಾತನಾಡಿದರು, ತಾಲೂಕಿನಲ್ಲಿರುವ ಎಲ್ಲ ಮಂಗಳಮುಖಿಯರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ತಾಲೂಕಾಡಳಿತ ಸಿದ್ಧ ಎಂದರು. ತಾಲೂಕು ಪಂಚಾಯತಿ ಕಾರ್ಯನಿರ್ವಹಣಾದಿಕಾರಿ ಜಿಎಂ ಬಸಣ್ಣ ಮಾತನಾಡಿ, ಮಂಗಳಮುಖಿಯರಿಗೆ ನಿವೇಶನ ಹಾಗೂ ವಸತಿ, ಪ್ರೋತ್ಸಾಹಧನ, ಸ್ವಯಂ ಉದ್ಯೋಗ ಆರ್ಥಿ ಸಹಕಾರ ನೆರವು ಮತ್ತು ಇನ್ನಿತರ ಯೋಜನೆಗಳನ್ನು ನೀಡಲಾಗುವುದು. ಸೌಲಭ್ಯಗಳನ್ನು ಪಡೆಯಲು ಸರಿಯಾದ ದಾಖಲಾತುಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ, ಪರಿಶೀಲಿಸಿ ಸಂಬಂಧಪಟ್ಟ ನಿಗಮಗಳಿಗೆ ಕಳಿಸಿಕೊಟ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು. ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮಂಗಳ ಮುಖಿಯರನ್ನು ಸಮಾಜದಲ್ಲಿ ಜನ ದೈವೀ ಸ್ವರೂಪಿಗಳೆಂದು ಗೌರವದಿಂದ ಕಾಣುತ್ತಿದೆ. ನ್ಯಾಯಾಲಯ ಅವರ ರಕ್ಷಣೆಗೆ ಕಾನೂನನ್ನ ಕಲ್ಪಿಸಿ ಸರಕಾರಗಳಿಂದ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದು, ಅದನ್ನ ಪಡೆದು ಸ್ವಯಂ ಉದ್ಯೋಗ ರೂಪಿಸಿಕೊಂಡು ತಮ್ಮ ಕುಟುಂಬದವರ ಜೊತೆ ಸಾಮರಸ್ಯದಿಂದ ಬದುಕಬೇಕಿದೆ, ಪ್ರತಿಯೊಬ್ಬರು ಕಾನೂನಿನ ತಿಳುವಳಿಕೆ ಪಡೆದು ಇಲಾಖೆಗಳ ಯೋಜನೆಗಳನ್ನು ಪಡೆಯಬೇಕಿದೆ ಎಂದರು. ವಕೀಲರಾದ ಶರಣಗೌಡ ಹಾಗೂ ಭಾರತೀ ಕಮ್ಯೂನಿಷ್ಟ್ ಪಕ್ಷದ ಕಾರ್ಯದರ್ಶಿ ಹಾಗೂ ಪತ್ರಕರ್ತ ಹೆಚ್.ವೀರಣ್ಣ ಉಪನ್ಯಾಸ ನೀಡಿದರು. ಸಿಡಿಪಿಒ ನಾಗನಗೌಡ, ಕೂಡ್ಲಿಗಿ ತಾಲೂಕು ಮಂಗಳಮುಖಿಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಾಲಮ್ಮ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಂದಾಯ ಇಲಾಖಾಧಿಕಾರಿ ಕುಮಾರಸ್ವಾಮಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ನವೀನ್ ಕುಮಾರ್. ಮಂಗಳಮುಖಿಯರ ಜಿಲ್ಲಾ ಸಂಯೋಜಕರಾದ ಕೆ.ಕೃಷ್ಣ, ರೇಣುಕಮ್ಮ,ಜಿಲ್ಲಾ ಅಧ್ಯಕ್ಷರು ಹಾಗೂ ದೇವದಾಸಿ ಮಹಿಳೆಯರ ಸಂಘ ಹಾಗೂ ವಕೀಲರ ಸಂಘದ ಕಾರ್ಯದರ್ಶಿ ಬಿ ಸಿದ್ದಲಿಂಗಪ್ಪ. ಹಿರಿಯ ಮಹಿಳಾ ನ್ಯಾಯವಾದಿ ಶ್ರೀಮತಿ ಕೆ.ಹೆಚ್.ಎಮ್.ಶೈಲಜಾ ಸ್ವಾಗತಿಸಿದರು,ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಮಂಗಳ ಮುಖಿಯರು ಹಾಗೂ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ನ್ಯಾಯಾಂಗ ಇಲಾಖೆ ಸಿಬ್ಬಂದಿ ಮತ್ತು ವಕೀಲರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428