20 ಎಸ್,ಎನ್,ಡಿ,೧-ಸಚಿವೆ ಶಶಿಕಲಾ ಜೊಲ್ಲೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು….
ಸಿಂದಗಿ- ಕೋವಿಡ್, ಮಹಾಪೂರದಂತಾಹ ಅನೇಕ ಪ್ರಭಲ ಸಮಸ್ಯೆಗಳ ಮಧ್ಯದಲ್ಲು ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ದಿಗೆ ಹತ್ತಾರು ಯೋಜನೆಗಳನ್ನು ರೂಪಿಸಿ ಜನತೆಯ ಕಲ್ಯಾಣಕ್ಕಾಗಿ ಕೆಲಸಮಾಡುತ್ತಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕೃಷ್ಣಾ ಮತ್ತು ಭೀಮಾ ನದಿ ಪ್ರವಾಹದಿಂದ ಜಲಾವೃತಗೊಂಡ ತಾಲೂಕಿನ ೧೪ ಹಳ್ಳಿಗಳ ರೈತರ ಸುಮಾರು ೨೨೫೬ ಹೇಕ್ಟೇರ್ ಕೃಷಿ ಭೂಮಿಗಳ ಕಬ್ಬು, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ, ಶೇಂಗಾ, ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿದ್ದವು ಆ ರೈತರಿಗೆ ರೂ ೩೪೫೩ ಲಕ್ಷ ಹಣವನ್ನು ಹಾನಿಗೊಳಗಾದ ರೈತರ ಖಾತೆಗೆ ಜಮಾ ಮಾಡಿದೆ. ಪ್ರವಾಹದಿಂದ ಹಾನಿಗೀಡಾದ ೧೬೬ ಮನೆಗಳಿಗೆ ಮನೆ ನಿರ್ಮಾಣಕ್ಕಾಗಿ ಪರಿಹಾರವನ್ನು ನೀಡಲಾಗಿದೆ. ತಾಲೂಕಿನ ತಾರಾಪೂರ, ತಾವರಖೇಡ, ಬ್ಯಾಲಿಹಾಳ ಗ್ರಾಮಗಳು ಮಹಾಪೂರಕ್ಕೆ ತುತ್ತಾಗುತ್ತವೆ ಅದಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ ಪುನರ ವಸತಿ ಕೇಂದ್ರಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡುವ ಹಂತದಲ್ಲಿ ಇದ್ದೇವೆ. ವಿಜಯಪುರದಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಿದೆ. ಸಿಂದಗಿ ಉಪ ಚುಣಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಾಗ ಮತದಾರರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ. ಭೂಸನೂರ ೧೦ ವರ್ಷಗಳ ಕಾಲ ಈ ಕ್ಷೇತ್ರವನ್ನು ಆಳಿದ್ದಾರೆ. ಅವರ ಅಧಿಕಾರದ ಸಂಧರ್ಭದಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ಮತ ಕ್ಷೇತ್ರದ ಜನತೆಯ ಅಭಿವೃದ್ದಿಗೆ ದುಡಿದಿದ್ದಾರೆ. ಮತ್ತೋಮ್ಮೆ ಅವರನ್ನು ವಿಧಾನಸಭೆಗೆ ಕಳಿಸಿದಲ್ಲಿ ಸಿಂದಗಿ ಕ್ಷೇತ್ರ ರಾಜ್ಯದಲ್ಲಿಯೆ ಮಾದರಿಯಾಗಲಿದೆ. ಕನ್ನೋಳ್ಲಿ ಮತ್ತು ದೇವಣಗಾಂವ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಲಲಿತಾ ಭೂಸನೂರ, ವಿಜುಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗೂರ, ಈರಣ್ಣ ರಾವೂರ ಸೇರಿದಂತೆ ಅನೇಕರು ಇದ್ದರು.
ವರದಿ – ಮಹೇಶ ಶರ್ಮಾ