ಚಿಂತಿಯ ಕಾಮೋ೯ಡ ಕವಿದಿದೆ…..
ಬಡತನ ಬೆಂಕಿಗೆ ಬೆಂದ ಕಂದಗಳ ನೋಡು
ಜಗವಿದು ಅಸಮಾನತೆಯ ತಕ್ಕಡಿಯ ಬೀಡು
ದೀನ ಮಕ್ಕಳಿಗೆ ಅಕ್ಷರಲೋಕ ದೂರದ ಗೂಡು
ಹಸಿವತಾಪಕೆ ಬೀದಿಮಕ್ಕಳ ಬಾಳು ಬೆಂಗಾಡು
ದೀನ ಮಕ್ಕಳಿಗೆ ಬಿಸಿಯೂಟ ಹುಸಿ ಆಯ್ತು
ಜ್ಞಾನ ಬೆಳಕಿಲ್ಲದೆ ಶಾಲೆಗೆ ಬೀಗವು ಜಡಿಯಿತು
ಕೊರೋನಾ ರಾಕ್ಷಸ ಬಡವರ ಬಾಳು ಕಸಿಯಿತು
ದೀನರ ಒಲೆಯು ಹೊತ್ತದೆ ತಣ್ಣಗೆ ಮಲಗಿತು !!
ತುತ್ತಿಗಾಗಿ ಮಕ್ಕಳಾದರು ಬಾಲಕಾಮಿ೯ಕರು
ಮೊಗದಲಿ ಚಿಂತಿಯ ಕಾಮೋ೯ಡ ಕವಿಯಿತು
ಎಲ್ಲಿ ಕೊಡಬೇಕು ವಿಧಿಯ ಈ ಬರಹದ ದೂರು
ಮಕ್ಕಳಬಾಳು ಹೂತೋಟ ಮಾಡುವರ್ಯಾರು
ಆಡುವ ಕೈಗಳಿಗೆ ಆಟಿಕೆಯಿಲ್ಲದೆ ಈಗ ಇಟ್ಟಿಗೆ
ಬೇಕಲ್ಲಾ ಊಟ ಉರಿವ ಮಕ್ಕಳ ಹೊಟ್ಟಿಗೆ
ತಂಗಿಯ ತಲೆಗಿಡುವ ತೂಗಿ ಅಣ್ಣನು ಇಟ್ಟಿಗೆ
ಅಬ್ಬಾಎಂಥ ಬಲವಿಟ್ಟೆ ದೇವಾ ಮಕ್ಕಳ ರಟ್ಟಿಗೆ!!
* ರತ್ನಾ ಎಂ ಅಂಗಡಿ ✍🏽
ಹುಬ್ಬಳ್ಳಿ