ಬಿಸಿ ಊಟ ಸ್ಟಾರ್ಟ್….
ದಿನಾಂಕ: ೨೧/೧೦/೨೦೨೧ ಆಂಕರ್: ಕೊರೋನಾ ಮಹಾಮಾರಿಯಿಂದ ಮಕ್ಕಳ ಬಿಸಿ ಊಟವೂ ಬಂದ್ ಆಗಿತ್ತು. ೧೮ ತಿಂಗಳ ನಂತರ ಮತ್ತೆ ಬಿಸಿ ಊಟ ಆರಂಭವಾಗಿದೆ. ಗದಗ ಜಿಲ್ಲೆನಲ್ಲೂ ಎಲ್ಲಾ ಶಾಲೆಗಳಲ್ಲಿ ಸರ್ಕಾರದ ಮಾರ್ಗ ಸೂಚಿಯಂತೆ ಬಿಸಿ ಊಟ ಆರಂಭವಾಗಿದೆ. ಆರಂಭದ ಮೊದಲ ದಿನ ಸಿಹಿ ಊಟವಾದ ಕೇಸರಿ ಬಾತ್ ಹಾಗೂ ಅನ್ನ ಸಂಬಾರ ಊಟಮಾಡಿ ಸಂತಸ ಪಟ್ಟರು. ಕೊರೋನಾ ಮಹಾಮಾರಿ ಮತ್ತೆ ಬಾರದಿರಲೆಂದು ಮಕ್ಕಳು ಸರಸ್ವತಿ ಹಾಗೂ ಅನ್ನಪೂರ್ಣೇಶ್ವರಿ ಶ್ಲೋಕ ಹೇಳುವ ಮೂಲಕ ಭಕ್ತಿಯಿಂದ ಪ್ರಾರ್ಥಿಸಿದರು. ಅನೇಕ ಬಡವ ಮಕ್ಕಳು ಮೊಲದ ದಿನದ ಬಿಸಿ ಸೇವಿಸಿ ಖುಷಿ ವ್ಯಕ್ತಪಡಿಸಿದರು.
ವರದಿ – ಸೋಮನಾಥ ಹೆಚ್ ಎಮ್