ಜೆ ಇ ಸಂಸ್ಥೆಯ ನೂರು ವರ್ಷದ ಹಿನ್ನೋಟವೇ ಶತದಳ ಸ್ಮರಣ ಸಂಚಿಕೆ – ಡಾ ಕೆ ಸಿದ್ದಗಂಗಮ್ಮ.

Spread the love

ಜೆ ಸಂಸ್ಥೆಯ ನೂರು ವರ್ಷದ ಹಿನ್ನೋಟವೇ ಶತದಳ ಸ್ಮರಣ ಸಂಚಿಕೆಡಾ ಕೆ ಸಿದ್ದಗಂಗಮ್ಮ.

ಜನಸ್ಪಂದನ ನ್ಯೂಸ್, ಅಥಣಿ : ಶತದಳ ಎಂಬ ಈ ಸಂಚಿಕೆಯಲ್ಲಿ ಪವಿತ್ರವಾದ, ಪರಿಶುದ್ದವಾದ ಶಿಕ್ಷಣ ಸಂಸ್ಥೆಯ ಚರಿತ್ರೆಯಿದೆ, ವರ್ತಮಾನವಿದೆ ಹಾಗೂ ಭವಿಷ್ಯವಿದೆ, ಸಂಸ್ಥೆಯ ನೂರು ವರ್ಷಗಳ ಸಾಧನೆಯ ಹಿನ್ನೋಟದ ಈ ಕಿರುಹೊತ್ತಿಗೆ ಮಾದರಿ ಸಂಚಿಕೆಯಾಗಿದೆ ಎಂದು ಬೆಂಗಳೂರಿನ ಸಾಹಿತಿ ಡಾ ಕೆ. ಆರ್. ಸಿದ್ದಗಂಗಮ್ಮ ಅವರು ಹೇಳಿದರು. ಅವರು ಸ್ಥಳೀಯ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಜೆ ಇ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಶತದಳ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಂಗ್ಯಾಬಾಳ್ಯಾ ಬೈಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಸಂಸ್ಥೆಯಲ್ಲಿ‌ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ ಶಿಕ್ಷಕರ ಪರಿಚಯ, ವಿದ್ಯಾರ್ಥಿಗಳ ಸಾಧನೆ, ಸಂಸ್ಥೆಯ ಬೆಳವಣಿಗೆ, ಮುನ್ನೋಟ ಇತ್ಯಾದಿ ಅಂಶಗಳನ್ನು ಒಳಗೊಂಡ ಶತದಳ ಸಂಚಿಕೆ ಸುಂದರ ಹೊತ್ತಿಗೆಯಾಗಿದೆ.‌ ಸಂಗ್ಯಾಬಾಳ್ಯಾ ಬೈಲಾಟವು ನಮ್ಮ ನಾಡಿನ ಭವ್ಯ ಪರಂಪರೆಯನ್ನು ಪರಿಚಯಿಸುವ ಬೈಲಾಟವನ್ನು ಈ ಪುಸ್ತಕ ಬಿಡುಗಡೆ ಸಮಾರಂಭದ ಜೊತೆ ಆಯೋಜಿಸಿ ವಿದ್ಯಾರ್ಥಿಗಳ ಪಠ್ಯದ ಜೊತೆಗೆ ಸಹಕಾರಿಯಾಗುವಂತೆ ಮಾಡಿದ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು. ಅನಂತರ ಮಾತನಾಡಿದ ಪ್ರಧಾನ ಸಂಪಾದಕ ಅರವಿಂದರಾವ ದೇಶಪಾಂಡೆ ಅವರು ಮಾತನಾಡುತ್ತಾ ಶತದಳ‌ ಸಂಚಿಕೆಯು ನಮ್ಮ ಸಂಸ್ಥೆಯ ಇತಿಹಾಸವನ್ನು ತಿಳಿಸುವ ಪುಟ್ಟಪ್ರಯತ್ನವಾಗಿದೆ, ಜೆ ಇ ಸಂಸ್ಥೆ ಸರಸ್ವತಿ ಮಂದಿರವಾಗಿದ್ದು ಈ ಶತದಳ ಎಂಬ ಸಂಚಿಕೆಯನ್ನು ವಿದ್ಯಾರ್ಥಿ ದೇವತೆಗಳಿಗೆ ದಳದ ರೂಪದಲ್ಲಿ ಅರ್ಪಿಸುತ್ತಿದ್ದೆವೆ, ಸಂಗ್ಯಾ ಬಾಳ್ಯಾ ಬೈಲಾಟ ನಮ್ಮ ಸಾಂಪ್ರದಾಯಿಕ ಶೈಲಿಯ‌ ಪ್ರತಿರೂಪ, ವಿವಿಧ ರೀತಿಯ ನಾಟಕಗಳನ್ನು ಅಥಣಿಯಲ್ಲಿ ಪ್ರದರ್ಶನ ಮಾಡುವಂತ ವ್ಯವಸ್ಥೆಗಾಗಿ ನಮ್ಮ ಸಂಸ್ಥೆ ಸದಾ ಸಿದ್ದ ಎಂದರು. ಸಾಹಿತಿ ಡಾ ವಿ ಎಸ್ ಮಾಳಿ ಅವರು ಮಾತನಾಡುತ್ತಾ ಕನ್ನಡದ ಅಮೂಲ್ಯ ರಂಗರೂಪಕಗಳನ್ನು ನಮ್ಮ ವಿದ್ಯಾರ್ಥಿಗಳು ಮರೆಯುತ್ತಿದ್ದಾರೆ, ಇಡೀ ಕನ್ನಡ ಜನಪದ ರಂಗಭೂಮಿಗೆ ಬೆಳಗಾವಿಯ ಕೊಡುಗೆ ಅಪಾರವಿದೆ, ಅಂತಹ ಜಾನಪದ ಕಲೆಯ ರೂಪವಾದ ಬೈಲಾಟ ಇಲ್ಲಿ ಪ್ರದರ್ಶನ ಮಾಡುತ್ತಿರುವುದು ಗಮನಾರ್ಹ ಎಂದರು.  ಅನಂತರ ಕೇಂದ್ರ ಸಾಹಿತ್ಯಾ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪೂರ ಹಾಗೂ ಜೆ ಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ ರಾಮ‌ ಬಿ ಕುಲಕರ್ಣಿ ಅವರು ಮಾತನಾಡಿದರು. ವೇದಿಕೆ‌ ಮೇಲೆ ಪ್ರಾಚಾರ್ಯ ಆರ್ ಎಮ್ ದೇರಡ್ಡಿ, ಡಾ  ಈ ವೇಳೆ ಎಸ್ ವಿ ಜೋಶಿ, ನಾರಾಯಣ ಆನಿಕಿಂಡಿ, ಅನೀಲರಾವ ದೇಶಪಾಂಡೆ, ರವಿ ಕುಲಕರ್ಣಿ, ಎಸ್ ಜಿ ಕುಲಕರ್ಣಿ, ಪ್ರಕಾಶ ಖೋತ, ಡಾ ಆರ್ ಎಸ್ ದೊಡ್ಡನಿಂಗಪ್ಪಗೊಳ, ಎಸ್ ಬಿ ಇಂಗಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಿ ಎಮ್ ಹುಲಗಬಾಳಿ, ಎನ್ ಬಿ ಝರೆ ನಿರೂಪಿಸಿದರು, ಸತೀಶ ಕುಲಕರ್ಣಿ ಅವರು ವಂದಿಸಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *