ರೈತ ಸಂಜೀವಿನಿ ತೊಟ್ಟಿ ಧಾರವಾಡ ಜಿಲ್ಲೆಯಲ್ಲೇ ಮಾದರಿ ತೊಟ್ಟೆ ನಿರ್ಮಾಣ: ಶ್ಲಾಘನೆ ಮಲ್ಲಿಕಾರ್ಜುನ ರಡ್ಡೇರ ಕಾರ್ಯಕ್ಕೆ ಕುಂದಗೋಳ :
ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಧಾರವಾಡ ಜಿಲ್ಲೆಯ ಇಲ್ಲಿಯೇ ಮಾದರಿಯಾಗಬಹುದಾ ಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 27 ಸಾವಿರ ರೂಪಾಯಿ ವೆಚ್ಚದಲ್ಲಿ ರೈತರು, ತಮ್ಮ ಸ್ವಂತ ಜಾಗದಲ್ಲಿ ಎರೆ ಹುಳು ತೊಟ್ಟಿ ನಿರ್ಮಿಸಿದ್ದು. ಹೌದು. ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ರೈತರು ತಮ್ಮ ಸ್ವಂತ ಜಾಗದಲ್ಲಿ, ರೈತನ ಜೀವಾಳವಾಗಿರುವ ಈ ಎರೆ ಹುಳು ತೊಟ್ಡಿಯ ಮೂಲಕ ರೈತರಿಗೆ ತಮ್ಮ ಹೊಲಗಳಿಗೆ ಸ್ವಂತ ತಾವೇ ಎರೆ ಹುಳು ಗೊಬ್ಬರವನ್ನು ತಯಾರು ಮಾಡಿ, ತಮ್ಮ ಹೊಲಗಳ ಫಲವತ್ತತೆಯನ್ನು ಹೆಚ್ಚಿಸಲು ಮತ್ತುಉತ್ತಮ ಇಳುವರಿ ಬರಲು ರೈತರಿಗೆ ರೈತಬಂಧು ಅಭಿಯಾನ ಉಪಯೋಗವಾಗಿದೆ. ಯೋಜನೆ ಪೂರಕವಾಗಿದೆ ಕಾರ್ಯಕ್ರಮದಡಿಯಲ್ಲಿ ಕುಂದಗೋಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುರಿ ಮಾತನಾಡಿ ಮಾತನಾಡಿ ತ್ಯಾಜ್ಯಯ ವಸ್ತುಗಳ ಸದ್ಬಳಕೆಯಿಂದಾಗಿ ಪರಿಸರ ಮಾಲಿನ್ಯ ಕಡಿಮೆಗೊಳಿಸಿ ಸ್ವಚ್ಛ ಪರಿಸರ ಸೃಷ್ಟಿಸಲು ಹಾಗೂ ರೈತರಲ್ಲಿ ಎರೆಹುಳು ಗೊಬ್ಬರ ಉತ್ಪಾದನೆ, ಬಳಕೆ ಮತ್ತು ಸಾವಯವ ಕೃಷಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಈ ಅಭಿಯಾನದ ಉದ್ದೇಶವಾಗಿದೆ ಎಂದರು ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಅಜಯ್ ಮತ್ತು IEC ತಾಲ್ಲೂಕು ಅಧಿಕಾರಿಯಾದ ಪ್ರಕಾಶ್ ಬಿರಾದರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಕುರಣಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ್ ರಡ್ಡೇರ ರೈತರು ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬ ರೈತರು ತಮ್ಮ ಜಾಗದಲ್ಲಿ ಹಾಗೂ ಜಮೀನಿನಲ್ಲಿ ಎರೆಹುಳು ತೊಟ್ಟಿ ನಿರ್ಮಿಸಲು ಅರಿವು ಮೂಡಿಸುವಲ್ಲಿ ಎಲ್ಲರೂ ಮುಂದಾಗಿದ್ದಾರೆ, ಹಾಗೂ *ನರೇಗಾ ತಾಂತ್ರಿಕ ಸಹಾಯಕರಾದ ಶಿವಕುಮಾರ್ ಹಂಚಿನಮನಿ ಅವರ ಸಲಹೆ ಮೇರೆಗೆ ಮತ್ತು ಇಲ್ಲಿನ ಗ್ರಾ.ಪಂ ಸದಸ್ಯ ಮಲ್ಲಿಕಾರ್ಜುನ ರಡ್ಡೇರ. ಈ ಯುವಕ ಸಾಮಾಜಿಕ ಕಾರ್ಯಗಳ ಮೂಲಕ ಇದೀಗ ಹಿಲ್ಲೆಯಲ್ಲಿಯೇ ಹೆಸರು ಮಾಡಿದ್ದು, ಗ್ರಾಮ ಪಂಚಾಯತಿ ಸದಸ್ಯನಾಗಿ ಆಯ್ಕೆಯಾದ ಮೇಲಂತೂ ಈತ ತನ್ನ ಮನೆಯಲ್ಲಿರುವುದೇ ಕಡಿಮೆ. ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಅತ್ಯಂತ ಪ್ರಾಮಾಣಿಕವಾಗಿ ಮುಟ್ಟಿಸಲು ಪಣ ತೊಟ್ಟಿರುವ. ಮಲ್ಲಿಕಾರ್ಜುನ ರಡ್ಡೇರ, ಅಲ್ಲಾಪೂರ ಗ್ರಾಮವನ್ನು ಇಡೀ ಜಿಲ್ಲೆಯಲ್ಲಿ ಮಾದರಿಯನ್ನಾಗಿಸಲು ಪಣತೊಟ್ಟಿದ್ದಾಗಿ ಹೇಳುತ್ತಾರೆ. ಇದೀಗ ಎರೆ ಹುಳು ತೊಟ್ಟಿ ರೈತರ ಹೊಲಗಳಿಗೆ ಈ ತೊಟ್ಟಿಗಳು ಬಹಳಷ್ಟು ಉಪಕಾರಿಯಾಗುವುದಂತೂ ಗ್ಯಾರಂಟಿ. ಅತ್ಯಂತ ಸುಂದರವಾದ ಈ ತೊಟ್ಟಿಗಳ ಉಪಯುಕ್ತತೆ ರೈತರ ತಮ್ಮಹೊಲಗಳಿಗೆ ಲಾಭ ತಟ್ಟಲಿ ಎಂಬುದೇ ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ ರಡ್ಡೇರ ಆಶಯ.
ವರದಿ – ಮಹೇಶ ಶರ್ಮಾ