ಬೇಡಿಕೆ ಈಡೇರಿಕೆಗಾಗಿ ಶಾಂತಿಯುತ ಪ್ರತಿಭಟನೆ…..
ಚಿಟಗುಪ್ಪಾ : ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆಯನ್ನು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ವತಿಯಿಂದ ನಗರದಲ್ಲಿ ಶಾಂತಿಯುತವಾಗಿ ಶಿಕ್ಷಕರು ಕಪ್ಪು ಬಟ್ಟೆ ತೊಟ್ಟು ತಾಲೂಕು ಅಧ್ಯಕ್ಷ ರಾಜಪ್ಪಾ ಜಮಾದರ ರವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ರಾಜಪ್ಪಾ ಜಮಾದರ ಮಾತನಾಡಿ ಶಿಕ್ಷಕರ ಪ್ರಮುಖ ಬೇಡಿಕೆಗಳಾದ ಸಿ.ಆರ್ ನಿಯಮ ತಿದ್ದುಪಡಿ, ವರ್ಗಾವಣೆ, ಮುಖ್ಯ ಶಿಕ್ಷಕರ ಸಮಸ್ಯೆ ಸೇರಿದಂತೆ ಇನ್ನಿತರ ಹಲವು ಜ್ವಲಂತ ಸಮಸ್ಯೆಗಳು ಶಿಕ್ಷಕರ ಸಮುದಾಯಕ್ಕೆ ಕಾಡುತ್ತಿವೆ. ಈ ಕೂಡಲೇ ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇಸಬೇಕೆಂದು ಆಗ್ರಹಿಸಿ,ತರಬೇತಿ ಬಹಿಸ್ಕರಿಸಲಾಗಿದೆ. ಅದೇ ರೀತಿ ಅಕ್ಟೋಬರ್ 21 ರಿಂದ 29 ರವರಿಗೆ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶನದಂತೆ ಶಾಲಾ ಕರ್ತವ್ಯದ ಜೊತೆಗೆ ಕಪ್ಪು ಬಟ್ಟೆ ತೊಟ್ಟು ಪ್ರತಿನಿತ್ಯ ಮುಷ್ಕರ ನಡೆಯುತ್ತದೆ. ಬೇಡಿಕೆ ಈಡೇರಿಕೆಗಾಗಿ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ರಮೇಶ ಕಲ್ಯಾಣಿ, ಶಿಕ್ಷಕರಾದ ರೇವಶೆಟ್ಟಿ ತಂಗಾ, ಸಂಜು ರಡ್ಡಿ, ಸಂತೋಷ, ಶಿಕ್ಷಕಿಯರಾದ ಸುನೀತಾ,ಸಂಗೀತಾ,ದೀಪಿಕಾ ಪ್ರೇಮಿಲಾ,ವಸೀಮ್ ಸುಲ್ತಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ – ಸಂಗಮೇಶ ಎನ್ ಜವಾದಿ.