ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತಾ ನಿವಾರಣೆ ಅರಿವು ಕಾರ್ಯಕ್ರಮ……
ವಿಶ್ವದಲ್ಲಿ ಇರುವುದು ಒಂದೇ ಜಾತಿ ಅದು ಮನುಷ್ಯ ಜಾತಿ ಮಾತ್ರ. ಜಾತೀಯ ವಿಷ ಬೀಜಗಳನ್ನು ಬಿತ್ತುವ ಮೂಲಕ ಸಮಾಜದಲ್ಲಿನ ಅನ್ಯೂನ್ಯತೆಯ ಭಾವಗಳನ್ನು ಯಾರೂ ಕೂಡಾ ಕದಡ ಬಾರದು ಎಂದು V K ಬಡಿಗೇರ ಅವರು ಹೇಳಿದರು ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಅಸ್ಪೃಶ್ಯತಾ ನಿವಾರಣೆ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದರು ಪ್ರಾಸ್ತವಿಕವಾಗಿ ಮಾತನಾಡಿದ ಯಲಬುರ್ಗಾ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯ V K ಬಡಿಗರ್ ಅವರು ಅಂಬೇಡ್ಕರ್ ಈ ಜಗತ್ತು ಕಂಡ ಪರಮೋಚ್ಛ ಮನುಷ್ಯತ್ವವಾದಿ. ವಿಭಿನ್ನ ಸಂಸ್ಕೃತಿ, ನೂರಾರು ಜಾತಿ, ಸಾವಿರಾರು ಭಾಷೆ, ನಾಲ್ಕಾರು ಧರ್ಮಗಳನ್ನೊಳಗೊಂಡ ಭವ್ಯ ಭಾರತಕ್ಕೆ ಸಮಗ್ರವಾದ ಸಕಲರೂ ಒಪ್ಪುವಂಥ ಸಂವಿಧಾನವನ್ನು ಅಂಬೇಡ್ಕರ್ ಕೊಡದೇ ಇದಿದ್ದರೆ ನಾವೆಲ್ಲರೂ ಪರೋಕ್ಷವಾಗಿ ಮತ್ತೆ ದಾಸ್ಯಕ್ಕೆ ಒಳಪಡುತ್ತಿದ್ದೆವೇನೋ? ಎಂದು ಹೇಳಿದರು, ಕಾರ್ಯಕ್ರಮದ ಉದ್ಘಾಟನೆ ಮೂಲಕ ಯಲಬುರ್ಗಾ ತಹಸೀಲ್ದಾರರಾದ ಶ್ರೀಶೈಲ್ ತಳವಾರ್ ಅವರು ಮಾತನಾಡಿ ಜಗತ್ತು ಇಂದು ಅಂಗೈಯಲ್ಲಿದೆ, ಒಂದು ಬಟನ್ ಹೊತ್ತಿದರೆ ಇಡೀ ಜಗತ್ತು ತೆರೆದುಕೊಳ್ಳುತ್ತದೆ, ವಿದ್ಯಾವಂತ ಸಮಾಜ ನಿರ್ಮಾಣವಾಗುತ್ತಿದೆ, ಆದರೂ ಇನ್ನೂ ಅಸ್ಪೃಶ್ಯತೆ ಎಂಬ ಅಮಾನವೀಯ ಘಟನೆಗಳು ಇನ್ನೂ ವರದಿಯಾಗುತ್ತಿವೆ, ಕೊಪ್ಪಳ ಜಿಲ್ಲೆಯಲ್ಲಿ ಇಂಥ ಘಟನೆಗಳು ಆಗಾಗ ವರದಿಯಾಗುತ್ತಲೆ ಇವೆ.ಇದಕ್ಕೆ ಇತ್ತೀಚಿನ ವರದಿ ಜಗತ್ತು ಇಷ್ಟು ಮುಂದುವರಿದರೂ ಇನ್ನೂ ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ, ಇದಕ್ಕೆ ಉದಾಹರಣೆ ಕೊಪ್ಪಳ ಜಿಲ್ಲೆಯಲ್ಲಿ ಆಡುವ ಮಗುವೊಂದು ದೇವಸ್ಥಾನಕ್ಕೆ ಹೋಗಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿ ದೇವಸ್ಥಾನ ಶುದ್ದಿಕರಿಸಿ ಅಸ್ಫಶ್ಯತೆ ಆಚರಿಸಿದ್ದರು.ದೇವಸ್ಥಾನಕ್ಕೆ ದಲಿತ ಮಗು ಪ್ರವೇಶಿದ್ದಕ್ಕೆ ಶುದ್ದಿಕರಣ ಮಾಡಿ ದಂಡ ವಿಧಿಸಿದ ಪ್ರಕರಣದರು ಎಂದು ಮಾತನಾಡಿದರು, ಈ ಸಂದರ್ಭದಲ್ಲಿ ಕಾನೂನು ಅರಿವು ಸಹಾಯಕ ಅಧಿಕಾರಿಗಳಾದ ಆದಿಮನೆಯವರು ಮತ್ತು ಆರೋಗ್ಯ ಇಲಾಖೆಯ ಶಂಕ್ರಣ್ಣ ಅಂಗಡಿಯವರು ಮಾತನಾಡಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಶಿವಾನಂದ್ ಚಲವಾದಿ ಅವರು ಅಧ್ಯಕ್ಷತೆ ವಹಿಸಿದರು ಮತ್ತು ಉಪಾಧ್ಯಕ್ಷರಾದ ಚಂದ್ರ ಬಾಯಿ ಶರಣಪ್ಪ ಕುದರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು, ದುರ್ಗಪ್ಪ ವಡ್ಡರ್, ಚೆನ್ನಮ್ಮ ಶಾನಭೋಗರ ಹಿರಿಯ ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ಗ್ರಾಮ ಲೆಕ್ಕಾಧಿಕಾರಿಗಳು ಕುಮಾರ್, ಗುಲಾಮ್ ಅಮ್ಮದ್ ಎಸ್ಐ ಪೋಲೀಸ್, ಹಾಗೂ ಪಿಡಿಒ ಪಕೀರಪ್ಪ ಕಟ್ಟಿಮನಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಶಿಕ್ಷಕಿಯರು ಪಂಚಾಯತಿ ಸಿಬ್ಬಂದಿ ವರ್ಗದವರು ಗ್ರಾಮದ ಎಲ್ಲಾ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ – ಹುಸೇನ್ ಮೋತೆಖಾನ್