ತಾವರಗೇರಾ ಪಟ್ಟಣದ ಕರ್ನಾಟಕ ಪಬ್ಲೀಕ್ ಶಾಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಡನೆ ಹೋರಾಡಿದ ಪ್ರಪ್ರಥಮ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ 243 ಜಯಂತೋತ್ಸವ ಆಚರಿಸಲಾಯಿತು……

Spread the love

ತಾವರಗೇರಾ ಪಟ್ಟಣದ ಕರ್ನಾಟಕ ಪಬ್ಲೀಕ್ ಶಾಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಡನೆ ಹೋರಾಡಿದ ಪ್ರಪ್ರಥಮ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ 243 ಜಯಂತೋತ್ಸವ ಆಚರಿಸಲಾಯಿತು……

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ, ಪ್ರಾಥಮಿಕ ವಿಭಾಗ ಸರ್ಕಾರಿ ಮಾಧ್ಯಮ ಶಾಲೆಯಲ್ಲಿ ಇಂದು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಡನೆ ಹೋರಾಡಿದ ಪ್ರಪ್ರಥಮ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ 243 ಜಯಂತೋತ್ಸವ ಆಚರಿಸಲಾಯಿತು.

ವೀರಮಹಿಳೆ ಕಿತ್ತೂರು ರಾಣಿ ಚನ್ನಮ್ಮನ ಕೀರು ಪರಿಚೆಯ, 1585-1824ರ ಅವಧಿಯಲ್ಲಿ ಕಿತ್ತೂರು ಸಂಸ್ಥಾನ ಆಳಿದ ಪ್ರಮುಖ 12 ದೇಸಾಯರಲ್ಲಿ ಕಾಕತಿಯ ದೇಸಾಯಿ ದೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿ ಚನ್ನಮ್ಮ ಒಬ್ಬಳು. ಬ್ರಿಟಿಷರದ್ದು ಒಡೆದು ಆಳುವ ನೀತಿ. ಈ ಕುತಂತ್ರಕ್ಕೆ ಟಿಪ್ಪು ಹಾಗೂ ಪೇಶ್ವೆಯಂಥ ರಾಜರು ಬಲಿಯಾಗಿದ್ದರು. ಇದು ದೇಶಾಭಿಮಾನಿ ಮಲ್ಲಸರ್ಜನ ಕಳವಳಕ್ಕೆ ಕಾರಣವಾಗಿತ್ತು. ಹಾಗಾಗಿ, ಕೊಲ್ಲಾಪುರದ ದೇಸಾಯರು ಒಳಗೊಂಡಂತೆ ದಕ್ಷಿಣದ ದೇಸಾಯರನ್ನು ಒಗ್ಗೂಡಿಸುವ ಪ್ರಯತ್ನವಾಗಿ ಊರೂರು ಅಲೆದ. ಒಮ್ಮೆ ಕಾಕತಿಗೂ ಬಂದ. ಕಾಕತಿಯಲ್ಲಿ ಹುಲಿಬೇಟೆ ಸಂದರ್ಭ ಮಲ್ಲಸರ್ಜನೊಂದಿಗೆ ಚನ್ನಮ್ಮನ ಭೇಟಿಯಾಯಿತು. ನಂತರ ಇಬ್ಬರ ವಿವಾಹವಾಯಿತು ಎಂದು ಲೇಖಕ ಯ.ರು.ಪಾಟೀಲ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಟಿಪ್ಪು ಸುಲ್ತಾನನ ಸಮಕಾಲೀನ ಮಲ್ಲಸರ್ಜನು 1782 ರಲ್ಲಿ ಸಿಂಹಾಸನವೇರಿದ. ಆತ ಸಾಹಸಿ ಮತ್ತು ಸಮರ್ಥ ಆಡಳಿತಗಾರನಾಗಿದ್ದ. ದೇಸಾಯಿಣಿ ಚನ್ನಮ್ಮನೊಂದಿಗೆ ಸುಖದಿಂದ ರಾಜ್ಯವಾಳಿ 1816ರಲ್ಲಿ ತೀರಿಕೊಂಡ. ಆಗ ಹಿರಿಯ ದೇಸಾಯಿಣಿ ರುದ್ರಮ್ಮಳ ಮಗ ಶಿವಲಿಂಗಸರ್ಜನಿಗೆ ಆಡಳಿತ ನೀಡಲಾಯಿತು. ಆದರೆ, ರೋಗ ಪೀಡಿತನಾದ ಈತನೂ ಮೃತಪಟ್ಟ. ಆಗ ದತ್ತಕ ತೆಗೆದುಕೊಳ್ಳಲು ಹೊರಟಾಗ ಬ್ರಿಟಿಷ್ ಸರ್ಕಾರ ಒಪ್ಪಿಗೆ ನೀಡಲಿಲ್ಲ. ಈ ಕುಂಟುನೆಪದೊಂದಿಗೆ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ಅಧೀನಪಡಿಸಿಕೊಳ್ಳುವ ಹೊಂಚು ಹಾಕಿದರು. ಇದನ್ನು ರಾಣಿ ಚನ್ನಮ್ಮ ವಿರೋಧಿಸಿದಳು. ಶಿವಲಿಂಗಸರ್ಜನ ಮರಣದ ನಂತರ ಆಗಿನ ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರಿಗೆ ಬಂದು ರಾಜಭಂಡಾರಕ್ಕೆ ಬೀಗ ಹಾಕಿ ತನ್ನ ಅಧಿಕಾರಿಗಳನ್ನು ನೇಮಕ ಮಾಡಿದ. ಈ ಕ್ರಮ ಚನ್ನಮ್ಮನಿಗೆ ಸರಿ ಅನಿಸದೆ ಥ್ಯಾಕರೆ ವಿರುದ್ಧ ಯುದ್ಧ ಸಾರಿದಳು. ಆದರೆ, ಸಂಧಾನ ಬಾಗಿಲು ತೆರೆದಿತ್ತು. ಮಾತುಕತೆ ನೆಪದಲ್ಲಿ ಥ್ಯಾಕರೆ ಹೊರಬಂದ. ಆಗ ಕಿತ್ತೂರ ಕೋಟೆ ಬಾಗಿಲು ಮುಚ್ಚಿತು. ಬಾಗಿಲು ತೆರೆಯಲು ನೀಡಿದ ಆದೇಶ ವಿಫಲವಾಯಿತು. ಆಗ ಚನ್ನಮ್ಮನ ಆದೇಶದಂತೆ ಅಮಟೂರ ಬಾಳಪ್ಪ ಗುಂಡುಹಾರಿಸಿದ್ದೇ ತಡ, ಥ್ಯಾಕರೆ ಹೆಣ ಕೆಳಗೆ ಬಿತ್ತು. ನಂತರ ನಡೆದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಕಿತ್ತೂರು ಸಂಸ್ಥಾನ ಜಯ ಸಾಧಿಸಿತು. ಆದರೆ 2ನೇ ಯುದ್ಧದಲ್ಲಿ ಚನ್ನಮ್ಮ ಸೋತು ಬ್ರಿಟಿಷರಿಗೆ ಸೆರೆಯಾಗಿ 1829 ಫೆ.2ರಂದು ಬೈಲಹೊಂಗಲದ ಕಾರಾಗೃಹದಲ್ಲಿ ದೇಹತ್ಯಾಗ ಮಾಡುತ್ತಾಳೆ.

ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಡನೆ ಹೋರಾಡಿದ ಪ್ರಪ್ರಥಮ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ 243 ಜಯಂತೋತ್ಸವ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಶ್ರೀ ಈರಪ್ಪ ಸೂಡಿ ಮುಖ್ಯೋಪಾಧ್ಯಾಯರು ಮಾಲಾರ್ಪಣೆ ಮಾಡಿದರು ಹಾಗೂ ಶ್ರೀಪರಸಪ್ಪ ಹೊಸಮನಿ ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯಕ್ರಮ ನಿರ್ವಹಿಸಿದರು ಶ್ರೀ ಮಲ್ಲಂಗಸಾ ವಾಲೇಕರ್ ಶ್ರೀ ದೊಡ್ಡಪ್ಪ ಅಲಬನೂರು ಶ್ರೀಮತಿ ಬಸಮ್ಮ ಕೆಂಭಾವಿ ಹಾಗೂ ಶ್ರೀ ಶಾಮಣ್ಣ ಉಪ್ಪಾರ್ ಮತ್ತು ಅಡುಗೆ ಸಿಬ್ಬಂದಿ ನಮ್ಮ ಶಾಲೆಯ ಮುದ್ದು ಮಕ್ಕಳು ಇದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ವರದಿ – ಉಪ – ಸಂಪಾದಕೀಯ

Leave a Reply

Your email address will not be published. Required fields are marked *