#ವಿಜಯೀಭವಭಾರತ: ಭಾರತ-ಪಾಕ್ ಪಂದ್ಯಕ್ಕೆ ಹರಸುತ್ತಿರುವ ಅಭಿಮಾನಿಗಳು…..

Spread the love

#ವಿಜಯೀಭವಭಾರತ: ಭಾರತಪಾಕ್ ಪಂದ್ಯಕ್ಕೆ ಹರಸುತ್ತಿರುವ ಅಭಿಮಾನಿಗಳು…..

ಬೆಂಗಳೂರು: ಐದು ವರ್ಷಗಳ ಬಳಿಕ ನಡೆಯುತ್ತಿರುವ ಟಿ-20 ವಿಶ್ವಕಪ್ ನಲ್ಲಿ  ಭಾರತ ಮತ್ತು ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಿನ ಪಂದ್ಯವು ಭಾರೀ ಕುತೂಹಲವನ್ನು ಮೂಡಿಸಿದ್ದು, ಇದಕ್ಕಾಗಿ ದೇಶದ ಎಲ್ಲೆಡೆಯಿಂದ ಅಭಿಮಾನಿಗಳು ಭಾರತ ಗೆಲುವು ಸಾಧಿಸಲೆಂದು ಸಾಮಾಜಿಕ ಜಾಲತಾಣ ಕೂ ನಲ್ಲಿ ಹಾರೈಸಿದ್ದಾರೆ. ಅಕ್ಟೋಬರ್‌ 24ರಂದು ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಸಾಂಪ್ರದಾಯಿಕ ಎದುರಾಳಿಗಳ ಹೈವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ವಿಶ್ವದಾದ್ಯಂತ ಕ್ರಿಕೆಟ್‌ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.  ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಎಂದಿಗೂ ಸೋತಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಏಳು ಹಾಗೂ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಐದು ಜಯ ಸೇರಿದಂತೆ ಒಟ್ಟು 12 ಬಾರಿ ಗೆಲುವು ದಾಖಲಿಸಿದೆ. ಈ ಬಾರಿಯ  ‘ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುಧ್ದ ಅಜೇಯವಾಗಿರುವ ಭಾರತ ನಾಳೆಯೂ ಗೆದ್ದು ಬೀಗಲಿದೆ . ಇನ್ನೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆಯಾ ದುಬೈ ಕ್ರೀಡಾಂಗಣ?’ ಎಂದು ಅರವಿಂದ್ ಭಟ್ ಕೂ ಮಾಡಿದ್ದಾರೆ.  ‘ನಾಳೆ ಮ್ಯಾಚ್ ನಲ್ಲಿ ಇಂತ ಎಷ್ಟು ರೋಚಕ ಕ್ಷಣಗಳು ಅಡಗಿ ಕೂತಿವೆಯೋ ಏನೋ. ಅವುಗಳನ್ನು ಅನುಭವಿಸುತ್ತಾ ಕೂನಲ್ಲಿ ಹಂಚಿಕೊಳ್ಳೋಣ. ಕೂ ಕುಟುಂಬಕ್ಕ ನಿಮ್ಮ ಅಭಿಪ್ರಾಯ ಹೇಳೋದನ್ನು ಮರೀಬೇಡಿ’ ಎಂದು ಗಣೇಶ್ ಅಭಿಪ್ರಾಯ ಪಟ್ಟಿದಾರೆ. ‘ಭಾರತ ಮತ್ತು ಪಾಕಿಸ್ತಾನ ನಡುವಿನ ಮೈ ನವಿರೇಳಿಸುವ 1996ರ ಪಂದ್ಯ ವೀಕ್ಷಿಸುತ್ತಿದ್ದೆ, ನಿಜಕ್ಕೂ ಅದ್ಭುತ ಆಟ.. ನಾಳಿನ ಪಂದ್ಯದಲ್ಲೂ ಇಂತಹ ರೋಚಕತೆಯ ಅನುಭವಕ್ಕಾಗಿ ಕಾಯುತ್ತಿದ್ದೇನೆ.. ನೀವು?’ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.  ‘ಹುಚ್ಚು ಹಿಡಿಸುವ ಮೆಚ್ಚಿನ ಆಟ ಕ್ರಿಕೆಟ್. ವಿಶ್ವಕಪ್ಎಂದರೆ ಎಲ್ಲವನ್ನು ಮರೆತು ನೋಡಲು ಪ್ರೇರೇಪಿಸುತ್ತದೆ. ನಮ್ಮ ಮೆಚ್ಚಿನ ಹುಲಿಗಳು ಭಾರತದ ಕಲಿಗಳು ಮೈದಾನಕ್ಕೆ ಇಳಿದರೆಂದರೆ ಘರ್ಜಿಸುವದು ನಿಶ್ಚಿತ. ಭಾರತದ ಆಟ ನೋಡಲು ನಿಜಕ್ಕೂ ಕಣ್ಣಿಗೆ ಹಬ್ಬ ಜಯಗಳಿಸಿ ಕಪ್ ಗೆಲ್ಲಲಿ, ಎಲ್ಲರ ಹೃದಯ ಗೆಲ್ಲಲಿ. ವಿಜಯೀ ಭವ ಭಾರತ 🙋‍♀️  ಚಕ್ದೇ ಇಂಡಿಯಾ 🇮🇳 ಜೈ ಹೋ…. ಜೈ ಹೋ..’ ಎಂದು ಶ್ವೇತಾ ಭಟ್ ಕೂ ಮಾಡಿದ್ದಾರೆ.  ‘ಭಾರತ ಮತ್ತು ಪಾಕಿಸ್ತಾನದ ಮೆಗಾ ಘರ್ಷಣೆಗೆ ಕೇವಲ 1 ದಿನ ಬಾಕಿಯಿದೆ, ವಿರಾಟ್ ಕೊಹ್ಲಿ ಇನ್ನೂ 3 ಸ್ಥಾನಗಳ ಬಗ್ಗೆ ನಿರ್ಧರಿಸಿಲ್ಲ’ ಎಂದು ಗೌತಮಿ ಬರೆದುಕೊಂಡಿದ್ದಾರೆ. ‘ಬೆಂಕಿ ಬಿರುಗಾಳಿ ಸುಂಟರಗಾಳಿ ಅಲ್ಲ, ಅದಕ್ಕಿಂತ ಜಾಸ್ತಿ!!! ಬರ್ತಿರೋದು ಬ್ಲೂ ಬಾಯ್ಸ್ ಪಾಕಿಸ್ತಾನದ ಸೊಕ್ಕು ಮುರಿಯಲು’ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ವರದಿ – ಸೋಮನಾಥ ಹೆಚ್ ಎಮ್

 

Leave a Reply

Your email address will not be published. Required fields are marked *