ಅಕ್ರಮ ಶ್ರೀಗಂಧ ಮರ ಕಡಿದು ಪರಿವರ್ತನ’ ಓರ್ವ ಬಂಧನ, ಮತ್ತೋರ್ವ ಪರಾರಿ-…
ಕಾಡು ಪ್ರದೇಶದಲ್ಲಿ ಶ್ರೀಗಂಧದ ಮರ ಕಡಿದು ಪರಿವರ್ತಿಸುತ್ತಿದ್ದವರ ಮೇಲೆ ಹನೂರು ತಾಲ್ಲೂಕು ಪಿ.ಜಿ.ಪಾಳ್ಯ ವಲಯದ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 38 ವರ್ಷದ ಸಿದ್ದೇಗೌಡ ಬಂಧಿತ ಆರೋಪಿ. ಈ ವೇಳೆ ಮತ್ತೋರ್ವ ಆರೋಪಿ 30 ವರ್ಷದ ರುದ್ರ ಎಂಬಾತ ಪರಾರಿಯಾಗಿದ್ದು ಆತನ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ. ವಲಯ ಅರಣ್ಯ ಅಧಿಕಾರಿ ಶ್ರೀ ಸೈಯದ್ ಸಾಬ್ ನದಾಫ್ ಅವರ ನೇತೃತ್ವದ ತಂಡ ಚಿಕ್ಕಮ್ಮನ ಕೆರೆ ಅರಣ್ಯ ಪ್ರದೇಶದಲ್ಲಿ ಗಸ್ತು ಸಂಚರಿಸುತ್ತಿದ್ದಾಗ ಆರೋಪಿಗಳು ಶ್ರೀಗಂಧದ ಮರವನ್ನು ಕಡಿದು ಪರಿವರ್ತಿಸುತ್ತಿದ್ರು. ಕೂಡಲೇ ದಾಳಿ ಮಾಡಿದ ತಂಡ ಅಕ್ರಮವನ್ನು ತಡೆದಿದ್ದಾರೆ. ಆರೋಪಿಯಿಂದ ಒಟ್ಟು 13 KG ತೂಕದ 10 ಶ್ರೀಗಂಧದ ತುಂಡುಗಳು ಹಾಗೂ ಮರ ಕಡಿಯಲು ಬಳಸಿದ್ದ ಗರಗಸ, ಕೊಡಲಿ ಮತ್ತು ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿ.ನವೀನ್ ಕುಮಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ರು. ಇನ್ನು ಬಂಧಿತನನ್ನು ಕೊಳ್ಳೇಗಾಲ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಲಾಗಿದೆ.
ವರದಿ – ಸೋಮನಾಥ ಹೆಚ್ ಎಮ್