“ಕಿತ್ತೂರು ರಾಣಿ ಚೆನ್ನಮ್ಮರ ಜೀವನಗಾಥೆ ಸರ್ವರಿಗೂ ಸ್ಫೂರ್ತಿದಾಯಕ”
ಸ್ವಾತಂತ್ರ್ಯ ಹೋರಾಟಗಾರ್ತಿ, ಕರುನಾಡಿನ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮಾಜಿ ಅವರ ಜಯಂತಿ ಪ್ರಯುಕ್ತ, ಬೆಳಗಾವಿ ಜಿಲ್ಲೆಯ ಕಿತ್ತೂರಿನ ಕೋಟೆ ಆವರಣದಲ್ಲಿ “ಕಿತ್ತೂರು ಉತ್ಸವ – 2021” ಬೆಳ್ಳಿ ಹಬ್ಬಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಜಿ ಅವರ ನೇತೃತ್ವದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಚಾಲನೆ ನೀಡಿದರು. ಬಳಿಕ ರಾಷ್ಟ್ರಪ್ರಶಸ್ತಿ ಪುರಸ್ಕೃತ, ಮಾದರಿ ರೈತ ಮಹಿಳೆ ಶ್ರೀಮತಿ ಕವಿತಾ ಮಿಶ್ರಾ ಅವರನ್ನು ಸನ್ಮಾನಿಸಿ, ಗೌರವಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೂಡಲಸಂಗಮ ಮಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಹಾಗೂ ಹರಿಹರ ಮಠದ ಶ್ರೀ ವಚನಾನಂದ ಸ್ವಾಮೀಜಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಜಿ, ರಾಜ್ಯ ಸಚಿವರಾದ ಶ್ರೀ ಉಮೇಶ್ ಕತ್ತಿ ಜಿ, ಶ್ರೀ ಮುರುಗೇಶ್ ನಿರಾಣಿ ಜಿ, ವಿಧಾನಸಭೆ ಉಪಸಭಾಪತಿಗಳಾದ ಶ್ರೀ ಆನಂದ ಮಾಮನಿ ಜಿ, ವಿಧಾನಪರಿಷತ್ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ ಕವಟಗಿಮಠ ಜಿ, ಜಿಲ್ಲೆಯ ಗಣ್ಯರು, ಸಂಸದರು, ಶಾಸಕರು, ಸ್ಥಳೀಯ ಮುಖಂಡರು ಹಾಗೂ ಇತರೆ ಪ್ರಮುಖರು ಪಾಲ್ಗೊಂಡಿದ್ದರು.
ವರದಿ – ಮಹೇಶ ಶರ್ಮಾ