ಕಡಿಮೆ ಅವಧಿಯಲ್ಲಿಯೆ ಒಲಿದು ಬಂತು ಮಲ್ಲಿಕಾರ್ಜುನ ರಡ್ಡೇರಗೆ ‘ಶ್ರಮೀಕ ರತ್ನ’ ಪ್ರಶಸ್ತಿ….
ಕುಂದಗೋಳ:ಅಕ್ಷರ ತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಧಾರವಾಡ ಇವರಿಂದ 10 ಜನರಿಗೆ ಶ್ರಮೀಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಹೌದು. ಇದೇ ತಿಂಗಳು 30 ರಂದು ನಡೆಯುವ ಸಮಾರಂಭದಲ್ಲಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಗ್ರಾಮ ಪಂಚಾಯತಿ ಸದಸ್ಯನಾಗಿ ಆಯ್ಕೆಯಾದ ಮಲ್ಲಿಕಾರ್ಜುನ ರಡ್ಡೇರ ಅವರು, ಕರೋನಾ ಸಂದರ್ಭದಲ್ಲಿ ಗ್ರಾಮದಲ್ಲಿ ಮಾಡಿದ ಕಾರ್ಯವನ್ನು ಹಾಗೂ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೆ ಮಾಡಿದ ಅಭಿವೃದ್ಧಿ ಕಾರ್ಯಗಳು ಗಮನಿಸಿ ಅಕ್ಷರ ತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ‘ಶ್ರಮೀಕ ರತ್ನ’ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಹಗಲಿರುಳೆನ್ನದೇ ಗ್ರಾಮದ ಅಭಿವೃದ್ಧಿ ಗೆ ಟೋಂಕ ಕಟ್ಟಿ ನಿಂತಿರುವ ಇವತ ಕಾರ್ಯಕ್ಕೆ ರಾಜ್ಯಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಿಗುರು ಮಿಸೆ ಹುಡುಗ ಇಷ್ಟೋಂದು ಅನುದಾನವನ್ನು ಗ್ರಾಮಕ್ಕೆ ಹೇಗೆ ತರುತ್ತಿದ್ದಾನೆ ಎಂಬುದು ಬೆರೆ ಜಿಲ್ಲೆಯ ಗ್ರಾಮ ಪಂಚಾಯತಿ ಸದಸ್ಯರಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಮಲ್ಲಿಕಾರ್ಜುನ ರಡ್ಡೆರ ಅವರಿಗೆ ಈ ಪ್ರಶಸ್ತಿ ನೀಡಿದ್ದಕ್ಕೆ ರಾಜ್ಯದ ಜನತೆ ಶುಭ ಹಾರೈಸುತ್ತಿದ್ದಾರೆ
ವರದಿ – ಸೋಮನಾಥ ಹೆಚ್ ಎಮ್