ಬೀದರ ಜಿಲ್ಲಾ ವಿಜ್ಞಾನ ಪರಿಷತ್ತಿನ ನೂತನ ಪದಾಧಿಕಾರಿಗಳ ಆಯ್ಕೆ.
ಬೀದರ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಇತ್ತೀಚೆಗೆ ನಡೆದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಗರದ ಭೂಮರಡ್ಡಿ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿತ್ತು. ರಾಜ್ಯ ಸಮಿತಿಯ ಸದಸ್ಯರು,ವೀಕ್ಷಕರಾದ ಬಾಬುರಾವ ದಾನಿ ಹಾಗೂ ಮಾಹಾರುದ್ರಪ್ಪಾ ಅಣದೂರ ರವರು ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಸುರೇಂದ್ರ ಹುಡಿಗೀಕರ್,ಉಪಾಧ್ಯಕ್ಷರಾಗಿ ರಾಜಕುಮಾರ ಆರ್ಯ, ಅನೀಲಕುಮಾರ ಸಿರಮುಂಡಿ, ಕಾರ್ಯದರ್ಶಿ ಮಂಜುನಾಥ ಬೆಳಕೇರಾ, ಜಂಟಿ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಖಜಾಂಚಿ ದೇವಿಪ್ರಸಾದ ಕಲಾಲ್, ಸದಸ್ಯರಾಗಿ ರಾಜಕುಮಾರ ಧುಮ್ಮನಸೂರೆ,ಉದಯಕುಮಾರ ಕಮಠಾಣೆ,ಸಂತೋಷ ಮಂಗಳೂರೆ, ವಿಠಲರಡ್ಡಿ ಯವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿ,ಅಧಿಕೃತವಾಗಿ ಘೋಷಣೆ ಮಾಡಿದರು. ಈ ಸಭೆಯಲ್ಲಿ ವೆಂಕಟರಡ್ಡಿ ಕೋಪಿಗರ್, ಸುರೇಶ ಚನ್ನಶೆಟ್ಟಿ, ರಾಜಕುಮಾರ ಬೆಲೂರೆ ಸೇರಿದಂತೆ ಕ ರಾ ವಿ ಪರಿಷತ್ತಿನ ಸದಸ್ಯರು ಹಾಜರಿದ್ದರು.
ವರದಿ – ಸಂಗಮೇಶ ಎನ್ ಜವಾದಿ.