ಕನಸು ನುಚ್ಚು ನೂರು ಮಾಡಿದ ಭಾರತ ಪಾಕ್ ವಿರುದ್ದ ಹೀನಾಯ ಸೋಲು…
ಪಾಕ್ ವಿರುದ್ದ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದ್ದು, ಭಾರತದ ಸೋಲಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಎಡವಟ್ಟು ನಿರ್ಧಾರವೇ ಕಾರಣ ಅನ್ನೋ ಕುರಿತು ಚರ್ಚೆ ಶುರುವಾಗಿದೆ ದುಬೈ : ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಭಾರತ ಮುಗ್ಗರಿಸಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದ ಭಾರತ, ಬೌಲಿಂಗ್‌ನಲ್ಲಿಯೂ ಹಿಡಿತ ಸಾಧಿಸುವಲ್ಲಿ ವಿಫಲವಾಗಿದೆ. ಪಾಕ್ ವಿರುದ್ದ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದ್ದು, ಭಾರತದ ಸೋಲಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಎಡವಟ್ಟು ನಿರ್ಧಾರವೇ ಕಾರಣ ಅನ್ನೋ ಕುರಿತು ಚರ್ಚೆ ಶುರುವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಪರ ಟಿ20 ಸ್ಪೆಷಲಿಸ್ಟ್ ಕನ್ನಡಿಗ ರಾಹುಲ್ ಹಾಗೂ ರೋಹಿತ್ ಶರ್ಮಾ ನಿರಾಸೆ ಮೂಡಿಸಿದ್ರು. ಒಂದನೇ ಕ್ರಮಾಂಕದಲ್ಲಿ ವಿರಾಟ್ ಕೊಯ್ಲಿ ಹಾಗೂ ರಿಷಬ್ ಪಂತ್ ಉತ್ತಮ ಬ್ಯಾಟಿಂಗ್ ನಡೆಸಿದ್ದರೂ ಕೂಡ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ನಿರಾಸೆ ಮೂಡಿಸಿದ್ರು. ಟೀಂ ಇಂಡಿಯಾ 6 ಮಂದಿ ಬ್ಯಾಟ್ಸಮನ್ ಹಾಗೂ 5 ಬೌಲರ್‌ಗಳೊಂದಿಗೆ ಪಾಕ್ ವಿರುದ್ದ ಕಣಕ್ಕೆ ಇಳಿದಿದ್ದ ಭಾರತದಕ್ಕೆ ಹೆಚ್ಚುವರಿ ಬೌಲರ್ ಕೊರೆತೆ ಪಂದ್ಯದುದ್ದಕ್ಕೂ ಎದ್ದು ಕಾಣಿಸಿತ್ತು. ಆಲ್‌ರೌಂಡರ್ ಕೋಟಾದಲ್ಲಿ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ದೊಡ್ಡ ಇನ್ಸಿಂಗ್ ಬರಲೇ ಇಲ್ಲ. ಇನ್ನು ಬೌಲಿಂಗ್ ಹೊತ್ತಲೇ ಸ್ನಾಯು ಸೆಳೆತದಿಂದಾಗಿ ಪಂದ್ಯದ ಆರಂಭದಲ್ಲಿಯೇ ಫೆವಿಲಿಯನ್ ಹಾದಿ ಹಿಡಿದಿದ್ದರು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಸೆಮಿ, ಜಡೇಜಾ ನಿರಾಸೆಯನ್ನು ಮೂಡಿಸಿದ್ರು. ಬೂಮ್ರಾ ಹಾಗೂ ವರುಣ್ ಚಕ್ರವರ್ತಿ ಮೊದಲ ಓವರ್ ಅದ್ಬುತವಾಗಿ ಎಸೆದಿದ್ದರೂ ಕೂಡ ನಂತರದಲ್ಲಿ ದುಬಾರಿಯಾಗಿ ಪರಿಣಮಿಸಿದ್ರು. ಕೇವಲ ಐದು ಬೌಲರ್‌ಗಳ ಜೊತೆಗೆ ಕಣಕ್ಕೆ ಇಳಿದಿದ್ದ ಭಾರತಕ್ಕೆ ಪಂದ್ಯದುದ್ದಕ್ಕೂ ಬೌಲರ್ ಕೊರತೆ ಎದ್ದು ಕಾಣಿಸುವಂತಿತ್ತು. ತಂಡದಲ್ಲಿ ಬೌಲರ್‌ಗಳು ದುಬಾರಿಯಾಗುತ್ತಿದ್ದರೂ ಕೂಡ ಬೌಲಿಂಗ್‌ನಲ್ಲಿ ಪ್ರಯೋಗ ನಡೆಸೋದಕ್ಕೆ ಕೊಯ್ಲಿಯಿಂದ ಸಾಧ್ಯವಾಗಿಲ್ಲ. ಭುವನೇಶ್ವರ್ ಕುಮಾರ್, ಮೊಹಮ್ಮದ್ ಸೆಮಿ, ಜಡೇಜಾ, ವರುಣ್ ಚಕ್ರವರ್ತಿ ಹಾಗೂ ಬೂಮ್ರಾ ಹೊರತು ಪಡಿಸಿ, ಉಳಿದ ಯಾವೊಬ್ಬ ಆಟಗಾರನೂ ಕೂಡ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಪಾಕಿಸ್ತಾನದಂತಹ ಸಾಂಪ್ರದಾಯಿಕ ಎದುರಾಳಿಯನ್ನು ಎದುರಿಸೋ ಹೊತ್ತಲ್ಲೇ ನಾಯಕ ವಿರಾಟ್ ಕೊಯ್ಲಿ ತೆಗೆದುಕೊಂಡ ಒಂದು ನಿರ್ಧಾರ ನಿಜಕ್ಕೂ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿತ್ತು. ಇನ್ನು ರಾಹುಲ್, ರೋಹಿತ್ ಶರ್ಮಾ, ಕೊಯ್ಲಿ, ಯಾದವ್ ಬೌಲಿಂಗ್ ಮಾಡುತ್ತಿಲ್ಲ. ಇನ್ನು ಆಲ್ ರೌಂಡರ್ ಕೋಟಾದಲ್ಲಿ ಸ್ಥಾನ ಪಡೆದ ಪಾಂಡ್ಯ ಬೌಲಿಂಗ್ ಮಾಡದೇ ಇರೋದು ತಂಡಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತು. ಫಾರ್ಮ್‌ನಲ್ಲಿ ಇಲ್ಲದ ಸೂರ್ಯ ಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಆಡಿಸಿದ್ದೇ ಮುಳುವಾಗಿ ಹೋಗಿದೆ. ಯಾದವ್ ಬದಲು ಇಶಾನ್ ಕಿಶನ್, ಪಾಂಡ್ಯ ಬದಲು ಶಾರ್ದೂಲ್ ಠಾಕೂರ್ ಅಥವಾ ದೀಪಕ್ ಚಹರ್ ಅವರನ್ನು ಆಡಿಸಿದ್ರೆ ಹೆಚ್ಚುವರಿ ಬೌಲರ್ ತಂಡಕ್ಕೆ ನೆರವಾಗುವ ಸಾಧ್ಯತೆಯಿತ್ತು. ಇನ್ನು ವರುಣ್ ಚಕ್ರವರ್ತಿಯ ಬದಲು ಅಶ್ವಿನ್ ಆಡಿಸಿದ್ರೆ ಅಶ್ವಿನ್ ಗೂಗ್ಲಿ ವರ್ಕ್ ಆಗುವ ಚಾನ್ಸ್ ಇತ್ತು. ಒಂದೊಮ್ಮೆ ಪಂದ್ಯದ ನಡುವಲ್ಲೇ ಬೌಲರ್ ಗಾಯಗೊಂಡಿದ್ರೆ, ಹೆಚ್ಚುವರಿಯಾಗಿ ಬೌಲಿಂಗ್ ಮಾಡಲಾರದ ಸ್ಥಿತಿ ಭಾರತಕ್ಕಿತ್ತು. ಕೇವಲ 5 ಬೌಲರ್‌ಗಳನ್ನ ನೆಚ್ಚಿಕೊಂಡ ತಪ್ಪಿಗೆ ಕೊಯ್ಲಿ ದುಬಾರಿ ಬೆಲೆ ತೆತ್ತಿದ್ದಾರೆ. ಇದುವರೆಗೂ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ದ ಗೆಲುವನ್ನೇ ಕಂಡಿರದ ಪಾಕಿಸ್ತಾನ ಮೊದಲ ಬಾರಿಗೆ ಟೀಂ ಇಂಡಿಯಾಕ್ಕೆ ಸೋಲಿನ ರುಚಿ ತೋರಿಸಿದೆ.
ವರದಿ – ಉಪ-ಸಂಪಾದಕೀಯ